..
ನೋಡೋರು ಕೃಷ್ಣನ ನಾಡಿನ ಪ್ರಜರೆಲ್ಲಮೂಡಲಗಿರಿವಾಸನ ಬೇಡಿದವರಗಳ ನೀಡುವ ದಯದಿಕೊಂಡಾಡುವರು ವೆಂಕಟರಾಯನ ಪ.
ಶ್ರೀನಿವಾಸನ ಕೋಟಿ ಆನೆ ಶೃಂಗರಿಸ್ಯಾವ ನಾನಾರತ್ನಗಳಿಂದ ಭಾನು ಕೋಟಿ ತೇಜ ತಾನು ನಿರ್ಮಿಸಿದನು ಏನೆಂಬೆÉನು ಛಂದ 1
ಚಿತ್ರ ವಿಚಿತ್ರದ ಮುತ್ತಿನ ಪಲ್ಲಕ್ಕಿ ರತ್ನ ಮಾಣಿಕ ಹಚ್ಚಿಚಿತ್ತ ಜನೈಯನ ಪ್ರತ್ಯೇಕ ವಿವರಿಸಿ ಅರ್ಥಿಹೇಳುವೆನಂದ2
ಎಂಟು ದಿಕ್ಕಿಗೆ ಒಪ್ಪೊಒಂಟಿ ಸಾಲಗಳು ವೈಕುಂಠಪತಿಯ ಮುಂದೆ ಕಂಠಿ ಚಿತ್ರವÀ ಬರೆಸಿ ಕರುಣಿ ವೆಂಕಟದಿವ್ಯಗಿಲೀಟು ವಸ್ತ್ರಗಳ ಹೊಚ್ಚಿ 3
ಹೇಳಲು ವಶವಲ್ಲ ಕಾಲೊಳುಆಭರಣವ ಭಾಳ ಮುತ್ತಿನ ಕುಚ್ಚುವ್ಯಾಳಾಶಯನನು ಅವರಿಗೆ ಹೇಳಿನೇಮಿಸಿದನು ಆಳುಮಂದಿಯು ಮೆಚ್ಚ4
ರಥಿಕಾ ರಥಿಕರು ಏರೋ ರಥ ಕೋಟಿಗಳಿಗೆ ರತ್ನಮಾಣಿಕ ಹಚ್ಚಿಮಿತಿಯಿಲ್ಲದ ವಾಹನ ಸುತ ಸತಿಯರಿಗಿತ್ತು ಅತಿ ಸೇವ್ಯರು ಮೆಚ್ಚಿ5
ಕೆಂಚೆ ಕೃಷ್ಣನ ರಥಕೆ ಗೊಂಚಲ ಮುತ್ತುಗಳೆಷ್ಟಮಿಂಚುವ ಸೂರ್ಯನಂತೆ ಮುಂದೆ ನೊಡುಣು ಬಾರೇಚಂಚಲಾಕ್ಷಿ ಕೇಳೇ ವಿರಂಚಿ ಬೆರಗಾಗೋನಂತೆ6
ಚದುರ ರಾಮೇಶನ ಕುದುರೆ ಸಾಲುಗಳಿಗೆ ಅದ್ಬುತ ರತ್ನಗಳೆ ಮದನಜನಯ್ಯನುಮುದದಿ ನಿರ್ಮಿಸಿದನು ಸುದತೆ ಹೇಳುವೆ ಕೇಳೆ 7
****
No comments:
Post a Comment