ನೋಡು ಮಾನಿನಿ ಜೋಡು ಕೋಗಿಲ ಭೃಂಗ ಪಾಡಿ ಪಾವನವಾದ ಬಗಿಯ ಪ.
ಮುತ್ತು ಮಾಣಿಕ ರತ್ನ ತೆತ್ತಿಸಿದ ಕೋಟೆÉಯುಹತ್ತಿರೆ ಹರವಾದ ಸರೋವರ ಹತ್ತಿರೆ ಹರವು ಸರೋವರದೊಳಗಿನ್ನು ಜತ್ತಾಗಿ ಆಡೋಗಿಳಿ ಹಿಂಡು 1
ಏಳು ಸುತ್ತಿನ ಕೋಟೆಬಾಳೆ ನಿಂಬೆÉ ದಾಳಿಂಬ ವನ ಎಲೆತೋಟದಾಳಿಂಬವನ ಎಲೆ ತೋಟದೊಳಗಿನ್ನುಸೀಳಿ ಕುಣಿಯೋ ಕಪಿಹಿಂಡು2
ನೆಲ್ಲಿ ನೀರಲ ನಿಂಬೆ ಮಲ್ಲಿಗೆ ವನದೊಳುಅಲ್ಲೆ ಕೋಕಿಲವು ಸ್ವರಗೈವಅಲ್ಲೆ ಕೋಕಿಲವು ಸ್ವರಗೈವ ಸೊಬಗುಇನ್ನೆಲ್ಲೂ ಕಾಣಿ ಧರೆಮೇಲೆ3
ಆಲ ಅಶ್ವತ್ಥ ಪಲಾಶ ಬಾರಿಯ ವೃಕ್ಷಸಾಲು ಮಂಟಪವು ಸೊಬಗಿಲೆಸಾಲು ಮಂಟಪವು ಸೊಬಗಿಲೆ ರಂಗಯ್ಯವಾಲಗೈವ ವನವಿದು4
ನೀಲ ಮೇಘಶಾಮ ಬಾಲಿಕೆರಿಂದಲಿಲೀಲೆ ಮಾಡುವ ಸರೋವರಲೀಲೆ ಮಾಡುವ ಸರೋವರರಮಿಯರಸು ಲಾಲಿ ಆಡುವ ಮಣಿಗಳು5
****
No comments:
Post a Comment