Wednesday, 4 August 2021

ಶೃಂಗಾರವ ನೋಡಿದ್ಯಾ ಎಂಥ ಶೃಂಗಾರವ ನೋಡಿದ್ಯಾ ankita ramesha

 ....

ಶೃಂಗಾರವ ನೋಡಿದ್ಯಾ ಎಂಥ ಶೃಂಗಾರವ ನೋಡಿದ್ಯಾ ಪ.


ಶಂಖ ಚಕ್ರಾಂಕಿತ ಬಿಂಕುಳ್ಳ ಶ್ರೀವತ್ಸಕುಂಕುಮಾಂಕಿತÀನ ಅರಮನೆ ಶೃಂಗಾರವನೋಡಿದ್ಯಾಅ.ಪ.


ರಂಗು ಮಾಣಿಕ ಬಿಗಿದ ಅಂಗಳದೊಳಗಿನ್ನು ಬಂಗಾರದ ಬೆತ್ತಹಿಡಕೊಂಡುಬಂಗಾರದ ಬೆತ್ತಹಿಡಕೊಂಡು ನಿಂತಾರೆ ಮಂಗಳಾಂಗನ ಮನೆ ಮುಂದೆ1

ವ್ಯಾಲಶಯನನ ಮನೆಯೊಳು ಅಂತಸ್ತಿಗೆಜಾಳಿಗೆ ಮುತ್ತು ಜಡದಾವೆಜಾಳಿಗೆ ಮುತ್ತು ಜಡದಾವೆ ಅರಮನೆಸೊಬಗ ಹೇಳಲೊಶÀವಲ್ಲಜನರಿಗೆ2

ಕನಿಯಾದ ಕದಗಳು ಚಿನ್ನದ ಚೌಕಟ್ಟುಸನ್ನಹದಿ ಅರಮನೆಸನ್ನಹದಿ ಅರಮನೆ ಯೊಳಗಿನ್ನುಕನಿಯಾದ ಕದಗಳು ತಿಳಿಯವು3

ಹಲವು ಚಿನ್ನದ ನೆರಳುನೆಲದೊಳು ಬಿದ್ದಿರೆಕೆಲ ಸರೋವರ ಕಮಲವುಕೆಲ ಸರೋವರ ಕಮಲವು ಆದರಿಂದ ಜಲವು ನೆಲವೆಂದು ತಿಳಿಯದು 4

ಅಂತರಂತರದಲ್ಲೆ ಮಂತ್ರಿಗಳು ಕುಳಿತಾರೆ ಕಂತುನಯ್ಯನ ಅರಮನೆಕಂತುನಯ್ಯನ ಅರಮನೆಯೊಳಗೆಅನಂತಪ್ರಜೆ ಬರಲಿ ಬಯಲುಂಟು5

ಮಿಂಚಿನಂತೆ ಹೊಳೆಯೊ ಕೆಂಚೆÉಯರು ಮೈಬಣ್ಣಗೊಂಚಲ ಮುತ್ತು ಅಲುಗೂತಗೊಂಚಲ ಮುತ್ತು ಅಲುಗೂತಸುಳಿದಾಡೊಚಂಚಲಾಕ್ಷಿಯರು ಕಡೆಯಿಲ್ಲ6

ವಜ್ರಮಾಣಿಕ್ಯ ಬಿಗಿದು ಸಜ್ಜಾದ ಆಭರಣವು ಗೆಜ್ಜೆ ಸರಪಳಿಯು ಗಿಲುಕೆಂದು ಗೆಜ್ಜೆ ಸರಪಳಿಯು ಗಿಲುಕೆಂದುರಾಮೇಶನ ಗುಜ್ಜೆಯರು ಹೆಜ್ಜೆ ಇಡುವೋರು7

****

No comments:

Post a Comment