Thursday, 5 August 2021

ಯಾತರ ಭಯವಿದೆ ಹರಿಯ ಕಿಂಕರಗೆ ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ಯಾತರ ಭಯವಿದೆ ಹರಿಯ ಕಿಂಕರಗೆ

ಪಾರ್ಥಸೂತನ ದಯವಿದ್ದರೆ ಸಾಲದೇ ಪ


ನಿತ್ಯಕರ್ಮವ ಮಾಡಿ ಹರಿಯ ಪೂಜಿಪಗೆ

ಮತ್ತೆ ಇಂದ್ರಿಯಗಳ ಜಯಿಸಿಕೊಂಬವಗೆ

ಹರಿದಿನ ವ್ರತವನ್ನು ಬಿಡದೆ ಮಾಡುವಗೆ

ಸರ್ವ ಜೀವೋತ್ತಮ ಪ್ರಾಣನೆಂಬವಗೆ

ಜಗದೊಳು ಶ್ರೀ ಮಧ್ವರಾಯರ ಮತವೇ

ನಿಗಮಾರ್ಥವೆಂದು ಡಂಗುರವ ಸಾರುವಗೆ

ತೇಜಿಯನೇರ್ದು ದುರ್ಜನರ ಸಂಹರಿಸುವ

ರಾಜೇಶ ಹಯಮುಖನ ಒಲಿಸಿಕೊಂಬವಗೆ 1

***


No comments:

Post a Comment