Thursday, 5 August 2021

ಬಾರೋ ಸುದಾಮ ಬಾರೆನ್ನ ಮಿತ್ರ ದಾರಿ ನಮ್ಮಲ್ಲಿಗೆ ತೋರಲಿಲ್ಲೇನೊ ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ಬಾರೊ ಸುದಾಮ ಬಾರೆನ್ನ ಮಿತ್ರ

ದಾರಿ ನಮ್ಮಲ್ಲಿಗೆ ತೋರಲಿಲ್ಲೇನೊ ಪ


ನಿನ್ನಯ ಪತ್ತೆಯು ಸಿಕ್ಕಲಿಲ್ಲೆನಗೆ

ಎನ್ನಯ ಪತ್ತೆಯು ನಿನಗತಿ ಸುಲಭ

ಎನ್ನತ್ತಿಗೆ ಕ್ಷೇಮದಿಂದಿರುವಳೆ ಪೇಳೊ

ನಿನ್ನತ್ತಿಗೆ ಕ್ಷೇಮದಿರುವಳು ಕೇಳು 1


ಸತಿಸುತರನು ಕಾಣದುಂಟೇನೊ ಚಿಂತೆ

ಸತಿಸುತರನ್ನಿಲ್ಲಿ ಕರೆಸುವೆ ಕಾಣೊ

ನೀ ತಂದ ಒಡವೆಗಳೇನೇನು ತೋರೊ

ಪೃಥುಕದ ಗಂಟನೆ ಬಿಚ್ಚೊ ನೀ ಬೇಗ 2


ಪೃಥುಕೈಕÀ ಮುಷ್ಟಿಯ ತಿಂದಾಗುತಿರಲು

ಕ್ಷಿತಿಪತಿ ಕರವನೆ ಪಿಡಿದಳು ಭೈಷ್ಮೀ

ಪೃಥುಕದ ಮುಷ್ಟಿಗೆ ಮೋಕ್ಷವ ಕೊಡುವಿ

ಮತ್ತಿನ್ನು ತಂದರೆ ಕೊಡುವುದೇನರಸ 3


ತಟ್ಟಿ ಮುದ್ದಾಡಿ ಸುದಾಮನ ಬಿಡನು

ಕಷ್ಟವನರುಹಲು ತಿಳಿಯದು ಹರಿಗೆ

ಪುಟ್ಟಾದ ಮಕ್ಕಳ ಬಿಟ್ಟು ಬಂದಿರುವಿ

ಕಷ್ಟವು ನಿನಗೇನೊ ಮಿತ್ರ ನಾನಿರಲು 4


ರಾಜೇಶ ಹಯಮುಖ ಚರಣಾಬ್ಜಗಳನು

ಭಜಿಸುತ್ತ ನೀ ಪೋಗು ಮರೆಯದೆ ಮಿತ್ರನ

ತ್ಯಜಿಸುತ್ತಲಿರುವೆ ನೀ ವಿಷಯದ ಸುಖವ

ಮೂಜಗದೊಳಗಿಂಥ ಮಿತ್ರನೆಲ್ಲಿಹನು 5

***


No comments:

Post a Comment