kruti by ವಿಶ್ವೇಂದ್ರತೀರ್ಥರು vishwendra teertharu sode mutt
ಉದ್ಧವಾ ಬೇಗ ಬಾ ಬಾ
ಶ್ರದ್ಧೆಯಿಂದಿರ್ಪರೆ ಗೋಪಿಯರೆನ್ನೊಳು ||ಪ||
ಕಾಳಿಯ ಫಣದಲ್ಲಿ ಮೋದದಿಂ ಕುಣಿಯಲು
ಸಾಲು ಸಾಲಾಗಿಯೇ ತವಕದಿಂ ನಿಂತರು ||೧||
ಬೆಣ್ಣೆಯ ಕದ್ದರೂ ಸಣ್ಣ ಮಾತಾಡರು
ಕಣ್ಣು ಕೆಂಪಾಗಿ ತಾವೆಂದಿಗೂ ನುಡಿಯರು ||೨||
ಸುಂದರಾಂಗಿಯರ ಸೀರೆಯ ಸೆಳೆದರೂ
ನಂದನೊಳೆನ್ನಯ ಸುದ್ದಿಯ ಪೇಳರು ||೩||
ತರುವ ನಾನೇರ್ದರೂ ಸೀರೆಯ ಕದ್ದರೂ
ಕರಗಳ ಜೋಡಿಸಿ ಬೇಡುತ್ತ ನಿಂತರು ||೪||
ಪತಿಗಳ ಶಿಕ್ಷೆಯನ್ನೀಕ್ಷಿಸದೆ ಎನ್ನೊಳು
ರತಿಸುಖಾಂಬುಧಿಯಲ್ಲಿ ತೇಲಿಕೊಂಡಿರ್ದರು ||೫||
ಭಜಿಸಿ ರಾಜೇಶನ ಹಯಮುಖ ದೇವನ
ತ್ಯಜಿಸಿ ಶೋಕಂಗಳ ಸುಖಿಗಳಾಗಿರ್ಪರೆ ||೬||
***
Uddhava bega ba ba
sraddheyindirpare gopiyarennolu ||pa||
Kaliya phanadalli modadim kuniyalu
salu salagiye tavakadim nintaru ||1||
Benneya kaddaru sanna matadaru
kannu kempagi tavendigu nudiyaru ||2||
Sundarangiyara sireya seledaru
nandanolennaya suddiya pelaru ||3||
Taruva nanerdaru sireya kaddaru
karagala jodisi bedutta nintaru ||4||
Patigala shiksheyannikshisade ennolu
ratisukhambudhiyalli telikondirdaru ||5||
Bhajisi rajeshana hayamukha devana
tyajisi shokangala sukhigalagirpare ||6||
***
ಉದ್ಧವಾ ಬೇಗ ಬಾ |ಬಾ|
ಶ್ರದ್ಧೆಯಿಂದಿರ್ಪರೆ| ಗೋಪಿಯರೆನ್ನೊಳು ಪ
ಕಾಳಿಯ ಫಣದಲ್ಲಿ ಮೋದದಿಂ ಕುಣಿಯಲು
ಸಾಲು ಸಾಲಾಗಿಯೇ ತವಕದಿಂ ನಿಂತರು 1
ಬೆಣ್ಣೆಯ ಕದ್ದರೂ ಸಣ್ಣ ಮಾತಾಡರು
ಕಣ್ಣು ಕೆಂಪಾಗಿ ತಾವೆಂದಿಗೂ ನುಡಿಯರು 2
ಸುಂದರಾಂಗಿಯಾ ಸೀರೆಯ ಸೆಳೆದರೂ
ನಂದನೊಳೆನ್ನಯ ಸುದ್ದಿಯ ಪೇಳರು 3
ತರುವ ನಾನೇರ್ದರೂ ಸೀರೆಯ ಕದ್ದರೂ
ಕರಗಳ ಜೋಡಿಸಿ ಬೇಡುತ್ತ ನಿಂತರು 4
ಪತಿಗಳ ಶಿಕ್ಷೆಯನ್ನೀಕ್ಷಿಸದೆ ಎನ್ನೊಳು
ರತಿಸುಖಾಂಬುಧಿಯಲ್ಲಿ ತೇಲಿಕೊಂಡಿರ್ದರು 5
ಭಜಿಸಿ ರಾಜೇಶನ ಹಯಮುಖ ದೇವನ
ತ್ಯಜಿಸಿ ಶೋಕಂಗಳ ಸುಖಿಗಳಾಗಿರ್ಪರೆ 6
***
No comments:
Post a Comment