Thursday, 5 August 2021

ವಾದಿರಾಜರ ಪದವ ಸ್ಮರಿಸುವೆ ಅಗಾಧ ಮಹಿಮರ ಸದಯ ಹೃದಯರ ankita rajesha hayamukha vadiraja stutih

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ವಾದಿರಾಜರ ಪದವ ಸ್ಮರಿಸುವೆ ಅ-

ಗಾಧ ಮಹಿಮರ ಸದಯ ಹೃದಯರ ಪ


ಮೋದತೀರ್ಥರಾಗಮದ ಸಾರವ

ಸಾಧು ಜನರಿಗೆ ಬೋಧಿಸಿರ್ಪರ

ವಾದದಿಂದಲಿ ವೀರಶೈವರ

ಗೆದ್ದು ಮುತ್ತಿನ ಪೀಠವೇರ್ದರ 1


ಪಾದದಿಂದಲಿ ಸಕಲ ತೀರ್ಥವ

ಮೋದದಿಂದ ಚರಿಸಿ ತೀರ್ಥ ಪ್ರ-

ಬಂಧ ಗ್ರಂಥವ ರಚಿಸಿ ಮಾನ್ಯರಾ

ಗಿರ್ದ ಗುರುಗಳನೆಂತು ಬಣ್ಣಿಪೆ 2


ರಾಜಸಭೆಯೊಳು ರಾಜಭೀಷ್ಮಕ

ತನುಜೆಯರಸನ ಸ್ತುತಿಪ ಕಾವ್ಯವ

ಈ ಜಗತ್ತಿನೊಳ್ ಶ್ರೇಷ್ಠ ಕಾವ್ಯವೆಂ

ದಿದನೆ ಗಜದೊಳು ಮೆರೆಸಿದರಸನು 3


ಒಂದುನೂರ ಇಪ್ಪತ್ತು ವರ್ಷದೊಳ್

ಸಿಂಧುಶಯನನ ಸೇವಿಸುತ್ತಲಿ

ಇಂದ್ರದತ್ತ ವಿಮಾನದಿಂದಲಿ

ಸತ್ಯಲೋಕವನೈದಿದ ಗುರುವರ 4


ಯುಕ್ತಿಮಲ್ಲಿಕಾ ಗ್ರಂಥದಿಂದ

ರಾಜೇಶ ಹಯಮುಖಾನಂತ ಗುಣಗಳ

ಪೊಗಳುತಿರ್ಪರ ರಾಗಶೂನ್ಯರ

ಋಜು ಗಣೇಶರ ಜ್ಞಾನಪೂರ್ಣರ 5

***


No comments:

Post a Comment