Thursday, 5 August 2021

ಭಾವಿ ಸಮೀರ ಗುರು ಶ್ರೀ ವಾದಿರಾಜ ankita rajesha hayamukha vadiraja stutih

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt


ಭಾವಿಸಮೀರ ಗುರು ಶ್ರೀ ವಾದಿರಾಜ

ನಿಮ್ಮ ಸೇವಿಪ ಜನರಿಗಭೀಷ್ಟವನೀವ ಪ


ಹನುಮ ಭೀಮ ಮಧ್ವರೊಡಗೂಡಿ ವೃಂದಾವನ-

ದೊಳು ಮೆರಸುವ ಮುಂದಿನ ಸೊಬಗ

ಪಂಥದಿ ವೀರಶೈವರ ಗುರುವನೆ ಗೆದ್ದು

ಹತ್ತಿದೆ ಮುತ್ತಿನ ದಿವ್ಯ ಪೀಠವನು 1


ಕುಂಡಿನೇಶನ ತನುಜಾತೆಯ ಪತ್ರವ

ಪುಂಡರೀಕಾಕ್ಷನಿಗರ್ಪಿಸಿದ್ಯಲ್ಲೋ

ಮದುವೆಯ ಸಮಯದಿ ಶಪಥದಿಂದಲಿ ಬಂದು

ವಧುವಿನ ಭಾಗ್ಯವನುಳಿಸಿದೆಯಲ್ಲೋ 2


ಅರಿತುಂಡು ವಿಷವ ನೀನರಗಿಸಿಕೊಂಡ್ಯಲ್ಲೊ

ನರಪತಿತನಯನ ಬದುಕಿಸಿದ್ಯಲ್ಲೋ

ಭಜಿಸುತ ರಾಜೇಶ ಹಯಮುಖನಂಘ್ರಿಯ

ತ್ರಿಜಗದೊಳಧಿಕ ಸೋದಾಪುರದೊಳು ನಿಂದ್ಯೋ 3

***


No comments:

Post a Comment