Thursday, 5 August 2021

ಗುರುವೆ ನೀ ಪಾಲಿಸೋ ನಿನ್ನ ಪಾದವೆ ಗತಿಯೆಂದು ankita raghavendra

 ..

kruti by radhabai

ಗುರುವೆ ನೀ ಪಾಲಿಸೋ ನಿನ್ನ ಪಾದವೆ ಗತಿಯೆಂದು

ನಂಬಿ ಬಂದಿಹೆನಯ್ಯಾ ಪ


ಬಂಧುಗಳೆಲ್ಲವು ಬಳಗಗಳೆಲ್ಲವು ಸರ್ವವು

ನೀವೆಂದು ನಾನಂಬಿಹೆ

ಸರ್ವರಕ್ಷಿತ ನಿನ್ಹೊರತು ಇನ್ನಾರಿಹರು ಸರ್ವದಾ

ನಿನ್ನನಾ ಸ್ತುತಿಸಿ ಕೊಂಡಾಡುವೆ 1

ಕುಂದಿದ ಮನದಲಿ ನಿನ್ನನಾ ನೆನೆಯುದೆ

ಮುಂದೇನುಗತಿ ಎನಗೆಂದು ತಿಳಿಯದೆ

ಹೀನವಾಗಿ ನಾ ಕಾಲಕಳೆದೆಪ್ರಭು

ಇನ್ನಾದರೆನ್ನ ಮನನಿನ್ನಲ್ಲಿ ನಿಲಿಸು 2

ಕಂಡ ಕಂಡಲ್ಲೆಲ್ಲಾ ಮುಳುಗುತಲೀ ಪ್ರಭು

ಭೂಮಂಡಲವೆಲ್ಲಾ ತಿರುಗಿದೆ ಪ್ರಭುವೇ

ಎಲ್ಲೆಲ್ಲಿಯೂ ಎಮ್ಮ ಕಾಯ್ವರ ಕಾಣದೆ

ನಿಮ್ಮ ಶರಣು ಬಂದಿಹೆ ನಯ್ಯ ಹೇಗುರುವೇ3

ಎಂತೆಂಥ ಭಕ್ತರು ನಿನ್ನ ಸೇವಿಸುತಿರುವಾಗ

ಸಂತಸದಲ್ಲವರ ಸೇವೆ ಕೈ ಗೊಂಬುವೆ

ಇಂದೆನ್ನ ಮೊರೆಕೇಳಿ ಕೇಳಿಸದಂತಿರುವೆಯಾ ಪ್ರಭುವೆ 4

ಧರೆಯೊಳು ನಿನ್ನಂಥ ದಾತರಿನ್ನಿಲ್ಲವೊ

ಪರದೇಶಿಯೆನುತೆನ್ನ ಕೈಬಿಡಬೇಡವೋ

ಕೊಡಲು ಎನ್ನುಯ ಕೈ ಹಿಂದಾಯಿತೋ ಪ್ರಭುವೆ

ಬಿಡದೆ ನಿನ್ನಡಿಗಳ ಪಿಡಿದಿಹೆನಯ್ಯಾ 5

ಎಷ್ಟುದಿನಗಳೀ ಕಷ್ಟ ಪಡಲಾರೆ

ದೃಷ್ಟಿಯಿಂಲಿ ನೋಡಿ ರಕ್ಷಿಸು ನಮ್ಮನು |

ಇಷ್ಟ ಪ್ರದಾತ ನೀನೆನುತ ನಾ ಬಂದೆ |

ಘಟ್ಯಾಗಿ ನಿಮ್ಮಪಾದ ಮುಟ್ಟಿ ನಾ ಭಜಿಸುವೆ6

ಸಿರಿಯರಸನ ಪ್ರಿಯ ಶ್ರೀ ರಾಘವೇಂದ್ರನೆ

ಸರ್ವಾಪರಾಧವ ಕ್ಷಮಿಸಿ ನೀ ಕಾಯೋ

ಮನ ಬಹು ನೊಂದಿದೆ ತಾಳಲಾರನೊ ಪ್ರಭು

ಕಾಲಮೀರದೆಮ್ಮನು ಪಾಲಿಸಬೇಕಯ್ಯ 7

***


No comments:

Post a Comment