Thursday, 5 August 2021

ಗುರುವೆ ನಿಮ್ಮಯ ಪಾದಗಳ ನಂಬಿದೆ ನೈಯ್ಯಾ ankita raghavendra

 ..

ಗುರುವೆ ನಿಮ್ಮಯ ಪಾದಗಳ ನಂಬಿದೆ ನೈಯ್ಯಾ

ಉದ್ಧರಿಸ ಬೇಕಿನ್ನು ಗುರು ರಾಘವೇಮದ್ರರಾಯಾ ಪ


ನಿನ್ನ ಬಿಟ್ಟರೆ ನನಗಿಲ್ಲ ಬೇರಾರು ಗತಿಯಿಲ್ಲ

ಕಾವ ಕರುಣಿಯು ನೀನೆ ರಾಘವೇಂದ್ರಾ ಅ.ಪ


ನಿನ್ನನ್ನೆ ಸ್ತುತಿಸುವೆನು ನಿನ್ನನ್ನೆ ಸೇವಿಪೆನು

ನಿನ್ನ ವಾನೆನಿಸಯ್ಯ ಗುರುರಾಘವೇಂದ್ರ

ಸಾಧುಸಂಗವನಿತ್ತು ಮೋದ ಪಡಿಸೆಮ್ಮನು

ಆದರಿತಿಪೂದಯ್ಯ ಗುರುರಾಘವೇಂದ್ರಾ 1

ಒಂದು ದಿನವೂ ನಿಮ್ಮ ನಾಮ ನುಡಿಯಲಿಲ್ಲವೊ ನಾನು

ಮಂದ ಮತಿನಾನಾದೆ ಗರುರಾಘವೇಂದ್ರಾ ಕುಂದುಗಾ

ಳೆಣಿಸದಿರು ನೊಂದೆನೈಯ್ಯಾ ನಾನು ತಂದೆಯಂದದಿ

ಕಾಯೊ ಗುರುರಾಘವೇಂದ್ರಾ2

ನಿಂದು ಭೂಸುರರೆಲ್ಲಾ ಜಯ ಜಯಾ ವೆನುತಿರಲು

ಮಂದಹಾಸ ದಲವರ ಪೊರೆದೇ

ನಮೊ ನಮೋಗುರುರಾಜ ನಮೊ ನಮೋ

ರವಿತೇಜ | ನಮೊ ನಮೋ ಸುಧೀಂದ್ರ ಕರಜಾತ |

ನಮೋ ಗುರು ರಾಘವೇಂದ್ರಾ 3

***


No comments:

Post a Comment