..
kruti by radhabai
ಏನೆಂದು ಕೊಂಡಾಡಿಸ್ತುತಿಸಲೋದೇವಾ
ನಾರಾಯಣ ಕೃಷ್ಣನಂದ ಮುಕುಂದಾ ಪ
ನಿನ್ನ ಪೊತ್ತು ತಿರುಗಿಸಲು ಖಗರಾಜನಲ್ಲ
ನಿನ್ನ ಪದ ಸೇವಿಸಲು ಪವನ ಸುತನಲ್ಲಾ
ನಿನ್ನೆತ್ತಿ ಆಡಿಸಲು ನಂದ ಯಶೋದೆಯಲ್ಲಾ
ನಿನ್ನೆಂತು ಸೇವಿಸುವೆ ಪೇಳು ಇಂದಿರೆರಮಣಾ1
ನಿನ್ನೊಡನಾಡುವೆನೆ ಗೋಪಾಬಾಲಕನಲ್ಲಾ
ನಿನ್ನ ಸಹಪಾರಿ ಸುಧಾಮನಾನಲ್ಲಾ
ಪಾಡಿ ಪೊಗಳಲು ಸುರ ಮುನಿಯುನಾನಲ್ಲ
ನಿನ್ನೆಂತು ಸೇವಿಸಲೊ ಯದುಕುಲೋತ್ತಮನೇ2
ಅಗರು ಚಂದನ ಪರಿಮಳದ್ರವ್ಯಗಳನೆ
ತಂದು ಅರ್ಪಿಸಲು ಕುಬುಜೆಯಲ್ಲಾ
ಆದರದಿ ಪಾಲ ನೀಡೆ ವಿದುರನಲ್ಲಾ
ಅನಂತ ಗುಣಪೂರ್ಣನೇ ಶ್ರೀ ಹರಿ3
ಗೋವುಪಾಲನು ತಂದು | ನಿನಗ ಭಿಷೇಕ ಮಾಡುವೆನೆ
ಕ್ಷೀರಸಾಗರದಲ್ಲಿ - ಪವಡಿ ಸಿರುವೇ
ವಿಧ ವಿಧ ಪುಷ್ಪಗಳ ತಂದು ಅರ್ಚಿಸಲು
ಪೊಕ್ಕಳೊಳು ಪುಷ್ಪವನೆಪಡೆದಿರುವೆ ಹರಿಯೆ 4
ಕರಿರಾಜ ನಿನ್ನ ಕರೆಯೆ ಕರುಣದಿಂದ ಬಂದೆ
ಪ್ರಹ್ಲಾದಗೋಲಿದು ಕಂಬದಲಿ ನಿಂತೇ
ದ್ರೌಪದೀ ದೇವಿಗಕ್ಷಯಾಂಬರ ವಿತ್ತೆ
ಅಂತೆ ಎನ್ನಪಾಲಿಸೊ ಲಕ್ಷ್ಮೀಕಾಂತನೇ 5
ಪರಿಪಯಲಿಭಕ್ತರ ಪಾಲಿಸಿದೆಯೊ ದೇವಾ
ಪರಮ ದಯಾಳುವೆಂದೆನಿಸಿಕೊಂಡೇ
ಪರಮ ಪುರುಷನು ನೀನು ಪಾಮರನು ನಾನಹುದೊ
ದಾರಿ ಕಾಣದೆ ಇರುವೆ ದಯೆತೋರು ಮುರಾರಿ6
ಭಕ್ತವತ್ಸಲ ನೀನೆ ಭಯನಿವಾರಣ ನೀನೇ
ಭಾಗವತಜನಪ್ರಿಯ ನೀನೆ ಸರ್ವರಕ್ಷಕ ನೀನೆ
ಸರ್ವವ್ಯಾಪಕ ನೀನೆ ಸರ್ವಾಂತರ್ಯಾಮಿ
ಶ್ರೀ ವೇಂಕಟವಿಠಲಾ 7
***
No comments:
Post a Comment