Thursday, 5 August 2021

ಎಂದೆಂದಿಗೂ ನಾ ಬಿಡೆ ನಿನ್ನ ಚರಣಾ ಬಂದೆನ್ನ ಕಾಯೊ ಶ್ರೀ ವೇಂಕಟ ankita raghavendra

 kruti by radhabai

ಎಂದೆಂದಿಗೂ ನಾ ಬಿಡೆ ನಿನ್ನ ಚರಣಾ

ಬಂದೆನ್ನ ಕಾಯೊ ಶ್ರೀ ವೇಂಕಟರಮಣಾ ಪ


ಪಟ್ಟಿ ಪೀತಾಂಬರ ತೊಟ್ಟ ಮುತ್ತಿನ ಹಾರಾ

ಕಟ್ಟಿದ ವೈಜಯಂತಿ ತುಳಸಿಯ ಮಾಲಾ

ಸುಂದರ ವದನ ಶುಭಾಂಗ ಮನೋಹರಾ

ಮಕರ ಕುಂಡಲಧರ ಮೋಹನ ರೂಪಾ1

ನಿತ್ಯ ತೃಪ್ತನೀನೆ ನಿಜ ಗುಣಪರಿಪೂರ್ಣ ನಿತ್ಯ ಕಲ್ಯಾಣನೆ

ನಿಗಮ ಗೋಚರನೆ ಅಕಳಂಕ ಚರಿತನೆ ಸಕಲರಪಾಲಿಪ

ಅನಂತ ರೂಪಾ ಶ್ರೀ ವೆಂಕಟೇಶಾ2

ಪಾವನ ಚರಿತನೇ ಪರಮ ಪವಿತ್ರನೇ

ಪರಮ ಕಲ್ಯಾಣ ಗುಣಾರ್ಣವನೇ

ಗರುಡ ಗಮನನೇ ದುರಿತ ವಿದೂರನೆ

ಪರಮದಯಾ ನಿಧೆ ವರಗಿರಿವಾಸಾ 3

ದೇಶ ದೇಶವ ತಿರುಗಿ ಘಾಸಿ ಗೊಂಡಿಹೆ ಭರದಿ

ಕ್ಲೇಶ ಪಾಶಂಗಳ ಪರಿಹರಿಸಯ್ಯಾ

ವಾಸುದೇವನೆ ನಿಮ್ಮ ನಾಮ ಸ್ಮರಿಸುವಂತೆ

ಲೇಸಾದ ಭಕುತಿಯ ನಿತ್ಯ ಪಾಲಿಸು ಪ್ರಭುವೆ4

ಸುರಮುನಿ ವಂದ್ಯನೇ ಸುರನರ ಸೇವ್ಯನೇ

ಶರಣರ ಪಾಲಿಪ ಸರ್ವೋತ್ತಮನೇ

ತಿರುಪತಿವಾಸನೆ ತಿರುಮಲೆ ಶ್ರೀಶನೇ

ಶೇಶಗಿರೀಶನೆ ಶ್ರೀ ವೇಂಕಟವಿಠಲನೇ 5

***


No comments:

Post a Comment