ಶ್ರೀನರಸಿಂಹದಾಸರ ಕೃತ ಶ್ರೀಬ್ರಹ್ಮಣ್ಯತೀರ್ಥರ ಸ್ತೋತ್ರಪದ
(ಇವರ ಅಂಕಿತ ನರಸಿಂಹವಿಠಲ , ಇವರು ಶ್ರೀಜಗನ್ನಾಥದಾಸರ ತಂದೆ)
ಬ್ರಹ್ಮಣ್ಯತೀರ್ಥರ ಚರಣಾಬ್ಜಯುಗ್ಮವ
ಸಂಭ್ರಮದಲಿ ಸೇವಿಪೆ ||pa||
ಅಂಬುಜಬಂಧು ಸನ್ನಿಭಸಾಧುವೆನುತ ಶ್ರೀ
ಕುಂಭಿಣಿ ಮುನಿವರ್ಯರಾ ಆರ್ಯರಾ ||a.pa||
ತಿದ್ದಿದ ಶ್ರೀಪುಂಡ್ರ ಮುದ್ರೆಗಳಿಂದಲಿ ಸಂ-
ಶುದ್ಧಿ ಮಂಗಳಗಾತ್ರರ
ರುದ್ರಗಳೊಲಿದು ಸದ್ವಿದ್ಯೆಗಳನಿತ್ತು
ಉದ್ಧಾರ ಮಾಡಲೆಂದೂ ನಾ ಬಂದೂ ||1||
ಶಿಷ್ಯರುಗಳು ತಂದ ಭಿಕ್ಷಾನ್ನಂಗಳನಂದು
ಆಕ್ಷಣ ಮಂತ್ರದಿಂದ
ತಕ್ಷಣ ಕಲ್ಪಸಿದಂತೆ ಗೈದಾ ಧೀರ
ರಕ್ಷಿಸೆಂದೆರಗುವೆ ನಾ ಬೇಡುವೆ
||2||
ಕಾಂತೆಯೋರ್ವಳು ತನ್ನ ಕಾಂತ ಸ್ವರ್ಗವನೈದೆ
ಚಿಂತಿಸುತತಿ ಶೋಕದಿ
ಕಾಂತೆ ವಂದಿಸಲು ಸೌಮಾಂಗಲ್ಯವರವನಿತ್ತು
ಕಾಂತನ ರಕ್ಷಿಸಿದ ಕೋವಿದರಾದ ||3||
ಕುಂದದೆ ಸನ್ಮುನಿವೃಂದದೊಡನೆ ಬಹು
ವೃಂದಾವನದಿ ಶೋಭಿಪ
ಇಂದಿರೆಯರಸ ನರಸಿಂಹವಿಠ್ಠಲನ
ಸನ್ನಿಧಿವರ ಪಾತ್ರರಾ ಪೂತಾತ್ಮರಾ ||4||
***
SriNarasimhadaasa kruta sri brahmanyateerthara stotra pada.
ರಾಗ : ಕಲ್ಯಾಣಿ
ಆದಿತಾಳ
raga : kalyani
aaditala
brahmaNyatIrthara caraNAbjayugmava
saMBramadali sEvipe ||pa||
aMbujabandhu sanniBasAdhuvenuta SrI
kuMBiNi munivaryarA AryarA ||a.pa||
tiddida SrIpunDra mudregaLindali saM-
Suddhi mangaLagAtrara
rudragaLolidu sadvidyegaLanittu
uddhAra mADalendU nA bandU ||1||
SiShyarugaLu tanda BikShAnnangaLanandu
AkShaNa mantradinda
taÀkShaNa kalpasidante gaidA dhIra
raÀkShisenderaguve nA bEDuve ||2||
kAnteyOrvaLu tanna kAnta svargavanaide
cintisutati SOkadi
kAnte vandisalu saumAngalyavaravanittu
kAntana rakShisida kOvidarAda ||3||
kundade sanmunivRundadoDane bahu
vRundAvanadi SOBipa
indireyarasa narasiMhaviThThalana
sannidhivara pAtrarA pUtAtmarA ||4||
***
No comments:
Post a Comment