Saturday, 7 August 2021

ಎಂದಿಗೂ ಕೃಷ್ಣ ನಿನ್ನ ನಾ ಪೊಂದುವ ಬಗೆ ankita gopala vittala

 ಎಂದಿಗೂ ಕೃಷ್ಣ ನಿನ್ನ ನಾ ಪೊಂದುವ ಬಗೆ l

ವಂದು ಸಾಧನವನ್ನ ಯನ್ನಿಂದಾದದ್ದು ಗಾಣೆ ll ಪ ll


ಸತ್ಕರ್ಮ ಅನುಷ್ಠಾನ ಸಮೀಚೀನ ವಚನಗಳು

ತತ್ಕಾಲಕ್ಕೇವೆ ತರುವಾಯಾವಿಲ್ಲ l

ಹೃತ್ಕಮಲದಿ ನಿನ್ನ ಹಿತದಿ ತಿಳಿದು ನೋಡಿ

ಯತ್ಕಿಂಚಿತವು ಅನ್ಯ ಯಾಚಿಸಿದವನಲ್ಲ ll 1 ll


ಮಾಡುವೆ ಕರ್ಮಗಳ ಮಾಡಿಸೊರರಿಯದೆ

ಬೇಡುವೆ ಫಲ ಬೇಡ ಬಾರದ್ದೆಲ್ಲ l

ಕಾಡುವರಾ ಅಂಜಿಸೊ ಕಾರ್ಯವಾ ತಿಳಿಯದೆ

ನಾಡ ವಿಷಯಂಗಳಿಗೋಡ್ಯಾಡಿದೆನೊ ದೇವ ll 2 ll


ಶ್ರವಣ ಮೊದಲಾದ ನವವಿಧ ಭಕುತಿಯೊಳು

ವಿವರಿಸಿದರೆನ್ನಲ್ಲೆ ವಂದೂಗಾಣೆ

ಪವನ ಮತವನು ಪೊಂದದೆನಲ್ಲದೆ

ಪವನವರಿತು ಪಥಕೆರಗೊದರಿಯದಾದೆ ll 3 ll


ಅನ್ನಂತ ಅನ್ನಂತ ಜನುಮಗಳು ಪೋದವು

ಇನ್ನು ನಿತ್ಯಾನಿತ್ಯ ಜ್ಞಾನವಿಲ್ಲಾ l

ನನ್ನದು ನಾ ಕರ್ತುನೆಂಬುದು ಬಿಡದಿನ್ನು

ಕುನ್ನಿ ಮನವು ಯನ್ನಾ ತನ್ನತ್ತಲೆಳೊವೋದು ll 4 ll


ಯೇಸು ಪರಿ ಉಪಾಯ ಯೋಚಿಸಿದರೂ ಇದಕೆ

ಮಾಸದೆ ಪೋಗುವ ದೊಂದು ಗಾಣೆ l

ಈಶ ನೀ ಯನಗಿನ್ನು ದಾಸ ನಿನ್ನವನೆನಿಸಿ

ಪೋಷಿಸಿಕೋ ಯನ್ನ ಗೋಪಾಲವಿಟ್ಠಲ ll - ಶ್ರೀಗೋಪಾಲದಾಸರು

***


No comments:

Post a Comment