Saturday, 7 August 2021

ಲಕ್ಷ್ಮೀವಲ್ಲಭ ಜಯ ಪಕ್ಷಿವಾಹನ ankita mohana vittala

 ದಶಾವತಾರದ ಆರತಿ ಪದ


ರಾಗ : ಆನಂದ ಭೈರವಿ

ತಾಳ : ತಿಶ್ರನಡೆ


ಲಕ್ಷ್ಮೀವಲ್ಲಭ ಜಯ ಪಕ್ಷಿವಾಹನ ಜಯ

ಮೋಕ್ಷದಾಯಕನೆ ಜಯ ಜಯ ॥ ಪ॥


ಮೋಕ್ಷದಾಯಕನೆ ಮಧುಸೂದನ ಪದ್ಮಾಕ್ಷಗಾರುತಿಯ ಬೆಳಗಿರೇ ॥ಅ.ಪ.॥


ಜಲದೊಳು ಸಂಚರಿಸಿ ಬಲು ಗಿರಿಯ ಧರಿಸಿದ

ಇಳೆಯ ದಾಡೆಯಿಂದ ನೆಗಹಿದಾ ||

ಇಳೆಯ ದಾಡೆಯಿಂದ ನೆಗಹಿದ ನರಹರಿ 

ಚೆಲುವಗಾರುತಿಯ ಬೆಳಗಿರೆ 

॥೧॥

ಶೋಭಾನೆ ಶೋಭಾನೆ ಶೋಭಾನೆ


ಚಿಕ್ಕ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿ

ಆಕ್ರಮಿಸಿದನೆ ತ್ರಿಲೋಕ ||ಆಕ್ರಮಿಸಿ ತ್ರಿಲೋಕನಾಳ್ದ ಶ್ರೀರಾಮ

ಶ್ರೀ ಕೃಷ್ಣಗಾರುತಿಯ ಬೆಳಗಿರೇ

॥೨॥

ಶೋಭಾನೆ ಶೋಭಾನೆ ಶೋಭಾನೆ

 

ನಗ್ನನಾಗಿ ವ್ರತವಾ ವಿಘ್ನವ ಚರಿಸಿದ

ಅಜ್ಞಾನಿ ಕಲಿಯ ಸದೆದ ||ಅಜ್ಞಾನಿ ಕಲಿಯ ಸದೆದ ಮೋಹನ್ನ ವಿಠ್ಠಲ ಸರ್ವಜ್ಞಗಾರುತಿಯ ಬೆಳಗಿರೇ

॥೩॥

ಶೋಭಾನೆ ಶೋಭಾನೆ ಶೋಭಾನೆ

***


No comments:

Post a Comment