ಮಂಗಳಾರತಿ ಮಾಡಿ ಮಂಗಳ ಮಹಿಮಾನಂಗಜನಕ ಹರಿ ತುಂಗವಿಕ್ರಮಗೆ ಮಂಗಳಾರತಿಯ ಪ
ಅಗಣಿತಗುಣ ಅಗಮ್ಯಗೋಚರ ಸುಗಮದಲಾಡುವ ನಿಗಮೋದ್ಧಾರಗೆ 1
ಬಗೆದು ಬೆನ್ನಿಲಿ ಭಾರವ ನೆಗೆದಿಹ ನೋಡಿ ಭಗತವತ್ಸಲ ಸ್ವಾಮಿ ನಗಧರಗೆ 2
ಜಗತಿಯ ಕದ್ದೊಯ್ದ ಸುರನ ಸೀಳಿದ ಜಗದೋತ್ತಮನಾದ ಜಗದೋದ್ಧಾರಗೆ 3
ದುರುಳದೈತ್ಯನ ಬೆರಳುಗುರಿಲಿ ಸೀಳಿದ ತರಳ ಪ್ರಹ್ಲಾದಗೊಲಿದ ನರಹರಿಗೆ 4
ಬಲಿಯ ದಾನವ ಬೇಡಿ ನೆಲೆಗೆ ಅಳೆದುಕೊಂಡು ಬಲಿಯ ಬಾಗಿಲ ಕಾಯ್ದ ಶ್ರೀನಿಧಿಗೆ 5
ಪರಶುಪಿಡಿದು ಕ್ಷತ್ರಿಯರ ಸಂಹರಿಸಿದ ಪರಮಪುರುಷನಾಗಿಹ ತಪೋನಿಧಿಗೆ 6
ದೇವತಿಗಳ ಸೆರೆಯ ಬಿಡಿಸಿದ ದೇವನು ಪಾವನಮೂರುತಿ ಅಹಲ್ಯೋದ್ದಾರಗೆ 7
ಯದುಕುಲತಿಲಕ ವಿದುರವಂದಿತನಾದ ಬುಧಜನಪಾಲ ಮದನಮೋಹನಗೆ 8
ಸುಳಿದು ತ್ರಿಪುರದಲಿ ಹಳಿದು ನಾರೆರ ವ್ರತ ಹೊಳೆವದೋರಿದ ಚಲುವಿಲಿ ಮಹಾಮುನಿಗೆ 9
ಮುದ್ದು ತೇಜಯನೇರಿ ತಿದ್ದಿ ರಾವುತನಾದ ಮಧ್ವಾಂತ್ರದ ಮಹಿಪತಿ ಪ್ರಾಣಪತಿಗೆ 10
***
No comments:
Post a Comment