ಅಗಲದಿರೋ ಮನ ಮಂದೀರದಿಂದ ಲೆನ್ನ
ಎಂದೆಂದಿಗೂ ಕೃಷ್ಣ ಪ
ಅಗಲದಿರೋ ಬ್ರಹ್ಮಾದಿ ವಂದಿತ
ಸುಗುಣಗಣ ಪರಿ ಪೂರ್ಣ ಏಕನೆ
ನಿಗಮಗೋಚರ ವಿಶ್ವ ಪ್ರೆರಕ
ಸಗುಣ ನಿರ್ಗುಣ ನಿರಜ ನಿಸ್ಸೀಮ ಅ.ಪ.
ಸೃಷ್ಟಿಗೊಡೆಯನೆ ನೀನೆ- ಶ್ರೇಷ್ಠನು ಸರ್ವತ್ರ
ಕಷ್ಟವಿಲ್ಲದೆ ಸಕಲ- ಚೇಷ್ಟೆಯ ನಡಿಸುವೆ
ಕೊಟ್ಟು ದೇಹಾದಿಗಳ- ಬಿಟ್ಟೇ ಜೀವರ ಭವದಿ
ಗಿಟ್ಟೀಸೆ ತಮ್ಮ ತಮ್ಮ- ಪಟ್ಟಾ ಮುಕ್ತಿಯ ಬೇಗ
ಒಟ್ಟಿನಿಂದಲಿ ಜೀವ ಜಗವಂದಿಷ್ಟು ಚಲಿಸದು
ಬಿಟ್ಟು ನಿನ್ನನು ಗುಟ್ಟು ತಿಳಿಯದೆ ಭವದಿ ಕಂ-
ಗೆಟ್ಟು ಬಳಲಿದೆ ಭಕ್ತಬಾಂಧವ
ನಷ್ಟಕಷ್ಟಗಳಿಲ್ಲದಾ ಸಂತುಷಷ್ಟ ನೀಡುವ ಪ್ರಭುವೆ ಕರುಣಾ-
ದೃಷ್ಟಿ ಬೀರುತ ಭಕ್ತಿ ಭಾಗ್ಯವ ಪುಷ್ಟಿಗೈಸುತಲೆನಗೆ ಸಂತತ 1
ಶ್ರೀಶಾನೊಬ್ಬನೆ ಸರ್ವ ತಂತ್ರ ಸ್ವತಂತ್ರನು
ನಾಶರಹಿತನಿಗೆಲ್ಲಾ ದಾಸರೆ ಸರಿಸತತಾ
ವಾಸುದೇವನು ಜೀವ ಜಗದಿಂ ವಿಲಕ್ಷಣನು
ಈಸುe್ಞÁನವನೀಯೋ ಜನ್ಮಜನ್ಮಾಂತರಕು
ದೋಷದೂರ ವಿಶೇಷ ಮಹಿಮ ಪೂರ್ಣ ವಿಶ್ವಗ ಶಶ್ವದೇಕ ವಿ-
ಲಾಸ ಮಿಷಣಾಭರಣ ಭೂಷಿತ ಸಾಮಸರ್ವಾಧಾರ ನಿರುಪಮ
ಓಸು ಶಬ್ದಗಳಿಂದ ವಾಚ್ಯನೆ- ನಾಶಗೈಸುತ ಕರ್ಮತ್ರಯಗಳ
ದಾಸ ನಿನ್ನವ ನೆಂದು ಕರುಣದಿ ಭಾಸನಾಗುತ
ಹೃದಯಗುಹೆಯಲಿ 2
ನಿತ್ಯನಿಗಮಾತೀತ-ನೀನೆ ಸತ್ಯರ ಸತ್ಯ
ನಿತ್ಯತೃಪ್ತನು ಸ್ವರತ-ಮುಕ್ತೇಶ ಚಿನ್ಮಯನೂ
ನಿತ್ಯಜೀವಗೆ ನೀನಿರ್ನಿಮಿತ್ತ ಬಂಧು ಸತತ
ನಿತ್ಯಸ್ತೋತ್ರವನು ನುಡಿಸು-ಮೃತ್ಯೋಮೃತ್ಯುವೆ ದೇವಾ
ನೀತಬಲಸುಖ e್ಞÁನ ಸರ್ವೈ-ಶ್ವರ್ಯ ಸದ್ಗುಣ
ಧಾಮ ವಿಶ್ವೋ
ತ್ಪತ್ತಿ ಸ್ಥಿತಿಲಯ ಕರ್ತ ಪರಿಪರಿ ಜೀವ ಸತ್ತಾದಿ ಭಾಸಕ
ನಾಥ ಮುಕ್ತಾಮುಕ್ತ ವಂದಿತ - ಭೂತಿ ಭೂರಿದನಾಂತಾತ್ಮ
ಖ್ಯಾತ ಸರ್ವೋತ್ತಮ ಪರತ:ಪರಾಕ್ಷರ ವಿಷ್ಣುಸರ್ವಜ್ಞ 3
ಅಂಬುಜಾಕ್ಷನು ನೀನೇ-ಉಂಬುವೆ ಸರ್ವಸಾರ
ತುಂಬಿರುವೆ ಒಳಹೊರಗೆ-ಬೆಂಬಲನು ಜಗಕೆಲ್ಲ
ಬಿಂಬ ನೀ ಚಲಿಸೆ ಪ್ರತಿ ಬಿಂಬಾ ನಾ ಚಲಿಸುವೆ
ನಂಬಿದೆ ಸಲಹಯ್ಯ-ಕಂಬುಚಕ್ರಾಂಕಿತನೆ
ಕುಂಭಿಣೀಪತಿ ಕೃಷ್ಣಕೈಬಿಡೆ ಗೊಂಬೆ ಸರಿನಾಲ್ಲವೇನೈ
ಡಿಂಬದೊಳಗಿನ ವೈರಿವೃಂದವು ಹಂಬಲಿಸಲೆಡೆಗೊಡವುಭವ
ದೊಂಬಿ ಅಡಗಿಸು ದಕ್ಷಣಾಕ್ಷಿಗ-ಸ್ಥಂಭರೂಪಿಯೆ ಶರಣುಶರಣು
ವೆಂಬೆ ಸ್ವಾಮಿಯೆ ಪಾದಪಂಕಜ ದುಂಬಿ
ಎನಿಸೈ ನೀಡಿ ವಿe್ಞÁನ 4
ಮಂದರೋದ್ಧರ ಗೋವಿಂದ ನಿನ್ನಯ ಮಹಿಮೆ
ಇಂದಿರೆಗಾಗದು ಸಾಕಲ್ಯ ತಿಳಿಯೆಸಿದ್ಧವಿದೂ
ಛಂದಾ ಛ್ಚಾದಿತ ಗಾತ್ರ-ಬಂಧ ಮೋಕ್ಷಪ್ರದನೆ
ಎಂದು ಕಾಂಬೆನೋ ನಿನ್ನ-ಮಂದನಾನಿಹೆ ಜಗದೀ
ಮಂದಜಾಸನ ಸದ್ಮ ಪೂರ್ಣಾನಂದ ನಿನ್ನಯ ನಾಮ ವೃಂದದಿ
ಬಂಧಿಸಿಹೆ ಜಗವೆಲ್ಲ ವಿಷ್ಣುವೆ-ಛಂದಬೃಹತೀಪತಿಯೆ ನೀನೈ
ತಂದೆ ಜಯಮುನಿ ವಾಯು ಅಂತರ ನಿಂದು ತಾಂಡವ
ನಾಡಿ ಮೆರೆಯುವ
ಇಂದಿರಾಪತಿ ಕೃಷ್ಣವಿಠಲನೆ-ನಿಂದು ತೋರುತ ನಿನ್ನ ರೂಪವ 5
****
No comments:
Post a Comment