ಪಾಲಿಸೋ ಪರಿಪಾಲಿಸೋ ಪ
ಪಾಲಿಸೋ ನೀ ಕಾಲನಾಮಕ-ಶ್ರೀಲೋಲ
ಕಾಲಕರ್ಮದಲೆನ್ನಕರುಣಿಸಿ ನೀನೀಗ ಅ.ಪ
ದುಷ್ಟಜನರ ಸಂಹಾರಕ-ಸರ್ವ
ಶಿಷ್ಟಜನರ ಪರಿಪಾಲಕ-ದೇವ
ಸೃಷ್ಟ್ಯಾದ್ಯಷ್ಟಕರ್ತುಕ-ತ್ವದ್ಭಕ್ತರಾ-
ಭೀಷ್ಟದಾಯಕಾ 1
ಜಗದ್ಭರಿತ ಜಗದಂತರ್ಯಾಮಿ-ಸರ್ವ
ಜಗದಾದ್ಯಂತ ಭಿನ್ನನೇಮಿ-ನೀನೆ
ಸ್ವಗತಭೇದಶೂನ್ಯಮಹಿಮಾ ಇನ್ನು
ಜಗದ್ಭುಕು ಮಮಕುಲಸ್ವಾಮಿ 2
ಪರಮೇಷ್ಟಿಭವಇಂದ್ರವಂದಿತ-ಕ್ಷರಾ-
ಕ್ಷರ ಪುರುಷ ಪೂಜಿತ-ಪಾದ
ನಿರವಧಿಕಗುಣಗಣಾನ್ವಿತ ನೀನೆ
ಜರಾಮರಣನಾಶ ವರ್ಜಿತ 3
ಮುಕ್ತಾಮುಕ್ತಾಶ್ರಯದೇವನೆ-ಸರ್ವ
ಭಕ್ತಮುಕ್ತಿಪ್ರದಾತನೆ-ವ್ಯಕ್ತಾ
ವ್ಯಕ್ತಪುರುಷದೇವನೆ ಪುರುಷ-
ಸೂಕ್ತಸುಮೇಯ ಅಪ್ರಮೇಯನೆ 4
ಸ್ವರವರ್ಣ ಶಬ್ದವಾಚ್ಯನೆ-ದೇವ
ಸುರಾಸುರಾರ್ಚಿತ ಪಾದನೆ ಓಂ-
ಕಾರ ಪ್ರಣವ ಪ್ರತಿಪಾದ್ಯನೆ ನಿತ್ಯ
ನಿಖಿಳಾಗಮದೊಳು ಸಂಚಾರನೆ5
ಅಚಿಂತ್ಯಾನಂತರೂಪಾತ್ಮಕ-ನಿನ್ನ
ಭಜಕರ ಭವಬಂಧ ಮೋಚಕ-ಸರ್ವ
ಅಬುಜಾಂಡ ಕೋಟಿನಾಯಕ ನೀನೆ
ಜಗದಾದ್ಯಂತ ವ್ಯಾಪಕ6
ವೇದ ವೇದಾಂತ ವೇದ್ಯನೆ-ನೀನೆ
ಆದಿಮಧ್ಯಾಂತದೊಳ್ ಖ್ಯಾತನೆ ಗುರು
ಮೋದತೀರ್ಥರ ಹೃತ್ಕಾಂತನೆ
ಶ್ರೀ ವೇಂಕಟೇಶ ಉರಗಾದ್ರಿವಾಸವಿಠಲನೆ 7
****
No comments:
Post a Comment