ಧ್ರುವತಾಳ
ಅನ್ಯ ವಾರ್ತೆಯ ಬಿಡಿಸು ನಿನ್ನ ವಾರ್ತೆಯ ತಿಳಿಸು
ಇನ್ನಾದರು ಕೈಪಿಡಿದು ನಿನ್ನ ದಾಸರಲಿ ಸೇರಿಸು
ಹೊನ್ನು ಹೆಣ್ಣು ಮಣ್ಣಿಂದ ಹುಣ್ಣು ಹುಣ್ಣು ಹುಣ್ಣಾಗಿ ನೊಂದೆನೊ
ಕುನ್ನಿಯಂತಾಯ್ತ್ಯಯ್ಯ ಎನ್ನ ಬಾಳು ಕೇಳು
ಅನ್ಯರಿ ಗಾಲ್ಪರಿಯೆ ಚೆನ್ನಫಲವೇನೊ
ಬೆನ್ನು ಬಿದ್ದೆನು ನಿನಗೆ ಘನ್ನ ಕರುಣಾಳುವೆ
ಚಿನ್ಮಯ ಮೂರುತಿ ಪ್ರ ಪನ್ನರ ಪರಿಪಾಲ
ಎನ್ನ ಭಾಗ್ಯವೆಲ್ಲೆ ನಿನ್ನದೇ ಸಿದ್ದವು
ಎನ್ನದೆಂಬುವ ದಿನ್ನು ಮನ್ನಮಾಡಿಸಬೇಕು
ಇನ್ನು ಬೇಡವು ತಡವು ಮನ್ನಿಸಿ ಸಲಹೈಯ
ಘನ್ನ ಜಯಮುನಿ ವಾಯುವಂತರ ಸಿರಿ
ಕೃಷ್ಣ ವಿಠಲರಾಯನಿನಗೆ ನಮೊ ನಮೊ ಯಂಬೆ
ನಿನ್ನ ಸಮ್ಮತ ನೀಡು ನಾನಿನ್ನ ದಾಸ ನಾನಿನ್ನ ದಾಸ 1
ಮಟ್ಟತಾಳ
ಊರೂಳಗೆ ಇರಿಸೈಯ ಊರಿಂದ ಓಡಿಸೊ
ಸೇರಿಸಿ ಬಾಂಧವರ ಜರಿಸೋ ಜರಿಸೋಯನ್ನ
ಸಾರಿ ಸಾರಿಸಿ ಬೈಸು ವೀರ ಮಾರುತಿ ಪ್ರೀಯ
ಸೂರೆ ನೀಡುತ e್ಞÁನ ಕ್ರೂರರಿಂದಗಲಿಸಿ
ಸಾರ ಸಂತರ ಗಣದಿ ಸೇರಿಸುತ್ತನುದಿನ
ಬಾರಿ ಬಾರಿಗೆ ನಿನ್ನ ಚಾರು ನಾಮಗಳನ್ನು
ಕೇರಿ ಕೇರಿಲಿ ಬೀರಿ ನೀರ ಜಾಕ್ಷನೆ ಏಕ
ಮೇರೆ ಇಲ್ಲದ ದೇವ ಈರ ಪ್ರೇರಕನೆಂದು
ಸಾರಿ ಸಾರುವ ಭಾಗ್ಯ ಹೇರು ಹೇರಾಗೀಯೋ
ಶೂರ ಜಯ ಮುನಿಹೃಸ್ಥ ವಾಯುವಂತರವಿರ್ಪ
ಸಿರಿ ಕೃಷ್ಣವಿಠಲನೆ ಪರಿಪಾಲ ಸರ್ವರಿಗೆ 2
ತ್ರಿವಿಡಿತಾಳ
ನಾರಿ ಜನರು ಎಲ್ಲ ದೂರು ಮಾಡಿದ ರೆನ್ನ
ಹರಿ ನೀನು ಜರಿದರೆ ಆರು ಯಿಲ್ಲವೊಯನಗೆ
ನೆರೆ ನಂಬೀದವರನ್ನ ಜರಿದು ಹಾಕುವರೇನೋ
ಹಿರಿಯ ರಂದದಿಯನಗೆ ಹುರುಡು ಏನೂ ಇಲ್ಲ
ವಿರಕ್ತಿ ಭಕ್ತಿಗಳರಿಯೆ ಹರಿ ನಾಮ ಗತಿಯೊಂದೆ
ಮೀರಿ ಬರುವ ದುರಿತ ಬೇರು ಕೀಳುವುದಕ್ಕೆ
ಸಾರಿದೆ ತವಪಾದ ಸಿರಿ ಪದ್ಮಜ ವಂದ್ಯ
ಬೀರು ನಿನ್ನಯ ಕರುಣ ತೋರು ಹೃದಯದಿ ರೂಪ
ಮೂರೊಂದು ಅವಸ್ಥೆಯಲಿ ಚರಣದಿರಿಸು ಮನವ
ಸರ್ವತ್ರ ನಿನ್ನಿರವು ತೋರಿಸುಯನಗಿನ್ನು
ತೊರೆದು ಬದುಕಲಾರೆ ಹರಿಯೇ ಗತಿಯೆಂಬ
ಸರ್ವ ಶಬ್ದಘೋಷ ಹರಿನಾಮ ವೆಂತೆಂಬ
ಸರಸ e್ಞÁನವ ನೀಡೊ ಸರ್ವಾಂತರನೆ ಶರಣು
ಸೂರಿ ಜಯ ಮುನಿ ಹೃಸ್ಥ ವಾಯುವಂತರ್ಯಾಮಿ
ಸಿರಿ ಕೃಷ್ಣ ವಿಠಲನೆ ವಿರಕ್ತಿ ಭಕ್ತಿಯ ಬೆರಿಸೊ 3
ಜತೆ
ಪಾರಿಲ್ಲ ಭವಕ್ಕೆಂಬೆ ತ್ವರಿತದಿ ಕೈಪಿಡಿಯೊ
ಶರಣರ ಭಯ ಹರಣ ಶ್ರೀ ಕೃಷ್ಣವಿಠಲ
****
No comments:
Post a Comment