Monday, 2 August 2021

ನೆರೆ ನಂಬಿದವನೆ ಧನ್ಯಾ ಈ ಗುರುಪದ ankita karpara narahari

ನೆರೆನಂಬಿದವನೆ ಧನ್ಯಾ ಈ ಗುರುಪದ ಪ


ನೆರೆನಂಬಿದವ ರಘತರಿವ ವೇದವ್ಯಾಸ ಕರ

ಸರೋರುಹÀ ಜಾತ ಗುರು ವೇದೇಶರ ಪಾದ ಅ.ಪ


ವರಮಣಿಯೊಳು ಶಿರಿತನದಿಂದಲ್ಲಿ ಮೆರೆವ ನಾಯ

ಕರ ಮಂದಿರದಿ ಜಾತರಾಗಿ ಪರಮ ಮಹಿಮರಾದ

ಗುರು ರಘೋತ್ತಮರಿಂದ ಪರವಿದ್ಯೆಯನು ಪೊಂದಿ

ಚರಿಸಿ ದಿಗಂತದಿ ವರವೇದ ವ್ಯಾಸರಿಂದ ತುರಿಯಾಶ್ರಮ

ಪಡೆದು ಸಚ್ಚಿಷ್ಯರಿಂದÀ ಸಂತತ ಪ್ರವಚನ ಮಾಡುತಲಿ

ಆನಂದ ತೀರ್ಥರ ಮತ ಶರಧಿಗೆ ಪೂರ್ಣ ಚಂದಿರನೆನಿ

ಪರ ಪದ 1


ಬಾದರಾಯಣನ ಪ್ರಸಾದವ ಪಡೆದಂಥ

ಯಾದವಾರ್ಯರಿಗೆ

ಮೋದತೀರ್ಥ ರಮತ ಬೋಧಿಸಿದಂಥ

ಅಗಾಧ ಮಹಿಮರು ಈ

ಮೇದಿನಿಯೊಳಗಲ್ಪ ಭೋಧ ಜನಕೆ

ಪೂರ್ಣಬೋಧ ಗ್ರಂಥಾರ್ಥ

ಸುಬೋಧವಾಗಲೆಂದು ವೇದಾರ್ಥ

ಗ್ರಂಥಗಳನ್ನು ಟೀಕಾ ಕೃ

ತ್ಪಾದರುಕ್ತಿಗಳನು ಸ್ಮರಿಸಿ ಪದಾರ್ಥ

ಕೌವÀುುದಿಗಳನು ರಚಿಸಿದಂಥಾ

ವಾದಿ ಮಾತಂಗ ಮೃಗಾಧಿಪರನ್ನು 2


ವರ ಕುಸುಮೂರ್ತಿಯೊಳು ಇರುತಿರಲೊಂದಿನ

ಕರೆದು ಶಿಷ್ಯರಿಗೆ

ಮರುತಶಾಸ್ತ್ರದ ಮರ್ಮ ಅರಹುವ ಸಮಯದಿ

ಹರಿ ಪಾದಂಗುಟದಿಂದ

ಪೊರಟು ಜಗವನೆಲ್ಲ ಪರಮ ಪಾವನಮಾಳ್ಪ

ಸುರನದಿಯನು ಸಾಕ್ಷಾ-

ತ್ಕರಿಸಿ ತೋರಿಸಿದಂಥ ಗುರು ಕೃಷ್ಣದ್ವೈಪಾಯನ ತೀರ್ಥರಿಗೆ

ಗುರುವೆನಿಸಿದ ಕಾರಣ ವರ್ಣಿಸಲೆಂತು

ಘನವಾದ ಮಹಿಮೆಯನಾ

ಸೇವಿಸುವಂಥ ಶರಣ ಜನರ ಸುರತರು ಸಮ ಚರಣ 3


ಒಂದೆ ಮನದಿ ಬಲು ಸುಂದರವಾದ ಈ

ವೃಂದಾವನದೆಡೆ ಒಂದು ಪ್ರದಕ್ಷಿಣಿ

ವಂದನೆ ಮಾಡಲು ಮಂದನಾದರು ಪ್ರಾಜ್ಞನೆಂದು ಕರೆಸುವನು

ವಂಧ್ಯೆಯಾದರು ಬಹುಕಂದರ ಪಡೆವಳುಸಂದೇಹವ್ಯಾಕಿಲ್ಲಿ

ಬಂದು ಸೇವಿಸುವವರ ಸಂಸೃತಿಯ ಬಂಧÀನವನು

ದೂರಮಾಡುತಲಿ ಆ

ನಂದವ ಗರಿಯುವರ ಭಕ್ತರ ದುರಿತಾಂಧಕಾರಕ್ಕೆ ರವಿ

ಯಂದದಲಿಪ್ಪರ 4


ವರಭೀಮಾತೀರದಿ ಪರಿಶೋಭಿಸುವ ಮಣಿ

ಪುರದಿ ಪಂಡಿತ ಭೂಮಿ

ಸುರರ ಪರಿವಾರದಿ ನಿರುತ ಸೇವೆಯಗೊಂಡು

ಚರಣಾರಾಧಕರನು

ದ್ದರಿಸಲೋಸುಗದಿ ಈ ವರವೃಂದಾವನ

ಸುಮಂದಿರದಿ ಕುಳಿತು ನಿತ್ಯ

ಗರಿಯು ತಲಿಷ್ಟಾರ್ಥವ ಪಿಪ್ಪಲವೆಂಬತರು

ಮೂಲದಲಿ ಮೆರೆವ

ಕಾರ್ಪರ ನರಹರಿಯ ಪಾದಾಂಬುಜವ

ಧೇನಿಸುತಿಪ್ಪ ಗುರುವೇದೇಶರ

ಶುಭ ಚರಣ ಯುಗಲವ 5

***


No comments:

Post a Comment