Monday, 2 August 2021

ಸೇವಿಸೊ ಮನುಜಾ ನಿರಂತರ ಸುಖವೀವುದು ankita karpara narahari

ಸೇವಿಸೊ ಮನುಜಾ ನಿರಂತರ ಸುಖವೀವುದು

ಭಾಗವತದ ಸಾರ ಪ


ಪ್ರಶ್ನೆ:ಯಾತರಿಂದಲಿ ಕೇಳೆನ್ನಯಮನ ಬಹು

ಪೂತವಾಗುವದು ಗುರುವರೇಣ್ಯ

ಭೂತಳದಲಿ ಪರಮ ಪಾವನ ತೀರ್ಥ

ಯಾತ್ರೆ ಚರಿಸಲೇನು ಅನುದಿನ 1


ಉತ್ತರ:ಶ್ರಧ್ದ ಪೂರ್ವಕ ಶ್ರವಣಸಾಧನ ಮನ

ಶುದ್ಧಿಗೆ ಇದೆ ಮುಖ್ಯ ಕಾರಣ

ಉದ್ಭವಿಸುವದು ಭಕ್ತಿ e್ಞÁನ ಅನಿ

ರುದ್ಧನ್ನ ಪ್ರಾಪ್ತಿಗೆ ಸಾಧನ

ಪ್ರಶ್ನೆ:ವಶವಲ್ಲಭವದಿ ಬಂದೊದಗುವ ನಾನಾ

ವ್ಯಸನಗಳನು ಪರಿಹರಿಸುವ

ಬೆಸಸುವದೆನ ಗೀ ಉಪಾಯವ

ಚರಿಸಲೇನು ಗಿರಿಗುಹದಲಿ ತ¥ವÀ|

ಉ.ವಸುದೇವಸುತನ ಸಂಕೀರ್ತನ ನಾನಾ

ವ್ಯಸನ ಪರಿಹಾರಕ್ಕೆ ಕಾರಣ

ಮುಸುಕಿರ್ದ ಮೇಘಕ್ಕೆ ಪವಮಾನ ಭವ

ವ್ಯಸನಾಂಧಕಾರಕ್ಕೆ ರವಿಕಿರಣ 2

ಪ್ರ:ಏನು ಮಾಡಲಿ ಸದುಪಾಸನ ದೈವಾ

ಧೀನದಿ ಬರುವ ವಿಘ್ನಗಳನ್ನು

ಕಾಣೆನು ಪರಿಹಾರ ಕೃತಿಯನ್ನು ಇದ

ಕೇನುಪಾಯನ ಪೇಳಿರಿ ಮುನ್ನ

ಉ:ಬಿಡದಿರೊ ಕೃಷ್ಣನ್ನ ಸ್ಮರಣವ ಬರುವ

ಯಡರುಗಳನು ಪರಿಹರಿಸುವ

ದೃಢಮನದಲಿ ತಿಳಿವದು ಜವ ಪೋಪ

ದ್ಯಡರು ಪ್ರಾಪಕವಾದ ಪಾತಕವ 3

ಪ್ರ:ಮೋಕ್ಷಫಲದ ಕಮಲಾಕ್ಷಣ ಅಪ-

ರೋಕ್ಷ ವಾಗುವದಕ್ಕೆ ಸಾಧನ

ಶಿಕ್ಷಿಸುವದು ಸದುಪಾಸನ ಆ

ಪೇಕ್ಷಿಸುವೆನು ನಿಮ್ಮಯ ಕರುಣ

ಉ:ಆದರದಿ ನೈರಂತರ್ಯದಿ ಯುಕ್ತ

ಮಾಧವನಂಘ್ರಿಯ ಸ್ಮರಣದಿ

ಸಾಧಿತ ಬಿಂಬಾಪರೋಕ್ಷದಿಸ

ನ್ಮೊದ ಭರಿತನಾಗಿರು ಜಗದಿ 4

ಪ್ರ:ಏನು ಮಾಡಲು ಮುಕ್ತಿಸಾಧನವಾದ

e್ಞÁನ ವಿe್ಞÁನ ಸಂಪದವನ್ನ

ಕಾಣುವದೆಂದಿಗೆ ತಿಳಿಸೆನ್ನ ಮುಂದೆ

ಸಾನುರಾಗದಲಿ ಬೇಡುವೆ ನಿನ್ನ

ಉ:ಭಕ್ತಿ ವೈರಾಗ್ಯದಿ ಕೂಡಿದ ಪುರು

ಷೋತ್ತಮನಂಘ್ರಿ ಸಂಸ್ಮøತಿಯಿಂದ

ಚಿತ್ತದಿ e್ಞÁನ ವಿe್ಞÁನದ ಉತ್ಪ-

ತ್ತಿಯ ಪಡೆದು ಪೊಂದೆಲೊ ಮೋದ 5

ಪ್ರ:ಜಲಜನಾಭನ ಪದಯುಗದಲ್ಲಿ ನಿ-

ಶ್ಚಲ ಭಕ್ತಿಯೆನಗೆ ಪುಟ್ಟುವದೆಲ್ಲಿ

ಬಲುವಿಧ ಭಕುತಿಯ ಬಗೆ

ಬಲ್ಲಿ ಇದನು ತಿಳಿಸುವದೆನಗೆ ನೀ ದಯದಲ್ಲಿ

ಉ:e್ಞÁನ ವೈರಾಗ್ಯದಿ ಕೂಡಿದ ನಂದ

ಸೂನು ಪಾದಾಂಬುಜ ಸ್ಮøತಿಯಿಂದ ಪ್ರಾ-

ಣೇಂದ್ರಿಯಾತ್ಮಾದಿಗಳಿಂದ ಅಧಿಕ

ಕಾಣಿಸುವದು ಭಕ್ತಿ ಜವದಿಂದ 6

ಪ್ರ:ದೃಢತರವಾದ ವೈರಾಗ್ಯವ ಪೊಂದಿ

ಪಡಿವೆನೆಂದಿಗೆ ಮಾಧವನ ದಯವಾ

ಗಡನೆ ಪೇಳಿದಕೇನು ಪಾಯವ ನಿ-

ಮ್ಮಡಿಗಳಿಗೆರಗಿ ಬೇಡುವೆ ಮುದವಾ

ಉ:e್ಞÁನ ಭಕ್ತಿಗಳಿಂದ ಕೂಡಿದ ಶಿರಿ

ವೇಣು ಗೋಪಾಲನ ಸ್ಮøತಿಯಿಂದ

ಕಾಣುವಿ ಸಧೃಡ ವೈರಾಗ್ಯದ ಭಾಗ್ಯ

ಶ್ರೀನಿಧಿ ಚರಣಾನು ಗ್ರಹದಿಂದ7

ಪ್ರಃಘನಲೌಕಿಕದಿ ಕೇಳೆನ್ನಯ ಮನ ನಿ-

ಪುಣತರವೆನಿಸುವ ದನುದಿನ

ಎನಗೆಂದಾಧ್ಯಾತ್ಮ ತತ್ವದಿ ಮನವೆರಗ

ಲೆನಿಸುವದದೆ ಮುಕ್ತಿಸಾಧನ

ಉ:ಅನುದಿನ ಶ್ರವಣಾದಿ ಸಾಧನ ದಿಂದ

ಜನಿತ ಸದ್ಭಕುತಿಯೆ ಕಾರಣ

ಮನದೊಳಾಧ್ಯಾತ್ಮ ತತ್ವಗಳನ್ನ ನೋಡಂ

ಜನಯುಕ್ತ ನಯನ ದಂದದಿ ಮುನ್ನ 8

ಪ್ರಃಏನಿರುವುದು ಬಿಂಬಲಕ್ಷಣ ಮತ್ತೇ

ನೇನು ಮಾಳ್ಪ ಕರ್ಮಗಳನ್ನು

ಸಾನುರಾಗದಿ ಪೇಳುವದುಮುನ್ನ ಮನದಿ

ಧ್ಯಾನವ ಮಾಡುವೆ ಪ್ರತಿದಿನ

ಉ.ಇಂತಿರುವದು ಬಿಂಬ ಲಕ್ಷಣ ಬಹಿ

ರಂತರದಲಿ ತಿಳಿವದು ಮುನ್ನ

ಸಂತತ ಸೃಷ್ಟ್ಯಾದಿಗಳನ್ನ ದೇ

ಹಾಂತಃ ಸ್ವಪ್ನದಿ ಸಂದರುಶನ 9

ಪ್ರ.ಎಲ್ಲಿರುವನು ಬಿಂಬ ದೇಹದಿ ಸಿರಿ

ನಲ್ಲನು ವ್ಯಾಪ್ತವೆಂಬರು ಜಗದಿ

ಎಲ್ಲದೇಶ ಗುಣಕಾಲದಿಯನ್ನ

ಸೊಲ್ಲಿಗುತ್ತರವ ಪಾಲಿಸುದಯದಿ

ಉ:ನಿಂತಿರುವನು ಸರ್ವಜೀವರ ಹೃದ

ಯಾಂತರದಲಿ ವ್ಯಾಪ್ತನು ಪೂರಾ

ಸಂತತ ಜೀವನ ವ್ಯಾಪಾರ ತಾನೆ

ನಿಂತು ಮಾಡಿಸುವನು ನಿರ್ಧಾರ 10

ಪ್ರ:ಎಂತು ಮಾಡಲಿ ಬಿಂಬೋಪಾಸನ ಮುಕ್ತಿ

ಪಂಥಕ್ಕೆ ಮುಟ್ಟಲು ಸೋಪಾನ ಅ-

ನಂತ ಗುಣಾತ್ಮಕ ಬಿಂಬನ ಗುಣ

ಚಿಂತಿಪರಿಗೆ ಬಂಧ ಮೋಚನ

ಉ:ಇದೆ ತಿಳಿಬಿಂಬೋಪಾಸನÀ ಚತು

ರ್ವಿಧ ದಿಂದಲಾತ್ಮ ಸಮರ್ಪಣ

ಮೊದಲು ಆತ್ಮಾನಮೇವಾರ್ಪಣ ದ್ರವ್ಯ

ಸದ್ಗುಣ ಕರ್ಮಸಮರ್ಪಣ 11

ಪ್ರ:ಈ ವಿಧ ಬಿಂಬೋಪಾಸನ

ಮಾಡಲಾವ ಧರ್ಮಗಳ ಮಾಡಲಿ ಮುನ್ನ

ಜೀವರ ಬಂಧ ವಿಮೋಚನ ಮಾಳ್ಪ

ಶ್ರೀ ವರ ನೊಲಿಮೆಗೆ ಸಾಧನ

ಉ:ಶುದ್ಧ ಭಾಗವತ ಧರ್ಮಗಳನ್ನು ತಿಳಿದು

ಶ್ರದ್ಧೆಯಿಂದಲ್ಲಿ ಮಾಡೋ ಮುನ್ನ

ಹೃದ್ಗತ ಬಿಂಬೋಪಾಸಾನ ಮಾಡಿ

ಸಿದ್ಧನಾಗಿ ಬಾಳೆಲೋ ಮುನ್ನಾ 12

ಪ್ರ:ಎಂತಿರುವದು ಗುರುಲಕ್ಷಣ ಮುಕ್ತಿ

ಪಂಥವ ತೋರಿಸುವವರನ್ನ

ಚಿಂತಿಸುವೆನು ಮನದೊಳುಮುನ್ನ ಭಗ

ವಂತನ ಮಹಿಮೆ ಪೇಳುವರನ್ನ

ಉ:ಜಲಜನಾಭನÀ ಪದಯುಗಲವ ಬಿಟ್ಟು

ಚಲಿಸದಿರು ಲವ ನಿಮಿಷಾರ್ಧವ

ಇಳಿಯೊಳಗಿಂಥಾ ಸದ್ವೈಷ್ಣವರನ್ನು

ತಿಳಿದು ಸೇವಿಸುತಿರು ಮಾನವಾ 13

ಪ್ರ:ಏನು ಕೊಡಲಿ ಗುರುದಕ್ಷಿಣ ಈ

ಕ್ಷೋಣಿಯಿತ್ತರು ಸರಿಗಾಣೆ ನಾ

ಧ್ಯಾನವ ಮಾಡುವೆ ಪ್ರತಿದಿನಾ ಬಿಂಬ

e್ಞÁನವ ಕೊಟ್ಟು ರಕ್ಷಿಪರನ್ನ

ಉ:ಆತ್ಮಾರ್ಪಣ ಮೇವದಕ್ಷಿಣ ಸಿರಿ

ನಾಥ ನಿಂದನ್ಯ ವಸ್ತುಗಳನ್ನು

ಪ್ರೀತಿಸರೆಂದಿಗೂ ಧನವನ್ನು ಈ ಮ-

ಹಾತ್ಮರ ಸ್ಮರಿಸುತಲಿರು ಮುನ್ನ 14

ಕ್ಷೇತ್ರ ಕಾರ್ಪರದೊಳಗಿರುವಂಥ ಲಕ್ಷ್ಮಿ

ಯುಕ್ತ ನರಸಿಂಹನೊಲಿಸುವಂಥ

ಸ್ತೋತ್ರ ಮಾಲಿಕೆಯನ್ನು ಪಠಿಸುತ್ತ

ಕೃತ ಕೃತ್ಯನಾಗಿ ಬಾಳೆಲೊನಿರುತ

****


No comments:

Post a Comment