..
kruti by Nidaguruki Jeevubai
ರಾಮಚಂದ್ರನೆ ನಿನ್ನ ನಾಮಮೃತವು ಎನ್ನ
ನಾಲಿಗೆಯೊಳು ನಿಲಿಸು ಪ
ದಾನವಾಂತಕ ನಿನ್ನ ಧ್ಯಾನ ಬಿಡದೆ ಇತ್ತು
ದೀನ ರಕ್ಷಕ ಹರಿ ಜಾನಕಿ ರಮಣನೆ ಅ.ಪ
ಕ್ಷೀರವಾರಿಧಿ ಶಯನ ಶ್ರೀ ಹರಿಯನು
ಸ್ಮರಿಸುತ ಧ್ಯಾನವ ಮಾಡಿ ಭಕುತಿಲಿ
ನಾರದ ಹರ ಬ್ರಹ್ಮಾದಿ ಋಷಿ ಗಂಧರ್ವರು
ಸುರರೆಲ್ಲರು ಕೂಡಿ
ಮಾರಮಣನ ಕೊಂಡಾಡುತ ಸ್ತೋತ್ರವ ಮಾಡಿ
ಪಾರುಮಾಡು ಜಗದೀಶನೆ ಎನುತಲಿ ತವಕದಿ
ಶ್ರೀ ಭೂರಮಣನು ದೀನರ ನುಡಿಗಳ
ಕೇಳುತ ಆಲೋಚಿಸುತಲಿ ಬೇಗದಿ
ಭೂನಾಥನ ಮನೆಯೊಳಗವತರಿಸುವೆ
ಎನ್ನುತವರಿಗೆಲ್ಲಾಭಯವ ನೀಡಿದ 1
ದಶರಥನುದರದಿ ಜನಿಸಲು ನಾಲ್ವರು ಅಂದು ಯಾಗಕೆ
ಕೌಶಿಕನಲ್ಲಿ ವಿದ್ಯೆಗಳನ್ನು ಕಲಿಯುತ ಬಂದು
ಶಶಿಮುಖ ಜಾನಕಿ ಕರಪಿಡಿದನು ತಾನಂದು ಅಯೋದ್ಯದಿ
ಎಸೆವ ಸಿಂಹಾಸನವೇರುವ ಸಮಯದಿ ಬಂದು
ರಸಕಸಿ ಮಾಡಲು ಕೈಕೇಯಿಯು ತಾ
ಶಶಿಮುಖ ಸೀತೆಯ ಒಡಗೂಡುತಲಿ
ಬಿಸಿಲು ಗಾಳಿಮಳೆಯೊಳು ವನಚರಿಸುತ
ಸತಿಯು ಬೇಡೆ ಮಾಯಮೃಗವ ಬೆನ್ನಟ್ಟಿದ 2
ಶಶಿಮುಖ ಸೀತೆಯ ದಶಶಿರನೊಯ್ಯಲು ಕೇಳಿ
ದಶರಥಸುತ ಅರಸುತ ಬಲು ಶೋಕವ ತಾಳಿ ಚಿಂತಿಸಿ
ಎಸೆವ ಗಿರಿ ಗುಹೆಗಳ ಹುಡುಕಲು ಮಾರುತಿ ನೋಡಿ ಮುದ್ರಿಕೆ
ವಸುಧೆ ತನಯಳಿಗರ್ಪಿಸೆ ಆಕೆಯು ಮುದ ತಾಳಿ
ವೀರ ಮಾರುತಿ ಚೂಡಾಮಣಿ ಕೊಡಲು
ಶ್ರೀ ರಘುವೀರನು ಸೇತುವೆ ಕಟ್ಟುತ
ಕ್ರೂರ ಖಳರನು ಸಂಹರಿಸಿದ ಕಮಲ-
ನಾಭ ವಿಠ್ಠಲ ಅಯೋದ್ಯದಿ ಮೆರೆಯುವ 3
***
No comments:
Post a Comment