Thursday, 5 August 2021

ಏಕೆ ಮರೆದಿದ್ದೆನಯ್ಯಾ ಎನ್ನೊಳು ನಾ ಗೋಪಾಲಶ್ರೀಕಾಂತ ankita gopalarya

 by gopalaryaru

ಏಕೆ ಮರೆದಿದ್ದೆನಯ್ಯಾ ಎನ್ನೊಳು ನಾ ಗೋಪಾಲಶ್ರೀಕಾಂತ ನಿನ್ನ ಪಾದದ ಚಿಂತೆಯ ಬಿಟ್ಟಜ್ಞನಾಗಿ ಪ

ಕಾಯವೆ ಸತ್ಯವಿದೆಂದು ಕಾಣದೆ ನಾನಿಲ್ಲಿ ಬಂದುಮಾಯೆಗೊಳಗಾಗಿ ನಿಂದು ಮತ್ತರ ಸಂಗದಿನೊಂದುಜಾಯೆ ಸುತರ್ಗತಿಯೆಂದು ಧ್ಯಾನಿಸಿ ದುಃಖದಿನೊಂದುಬಾಯ ಬಡುಕರೊಳ್ನಿಂದು ಬನ್ನಬಟ್ಟುಳಿಸೆಂದು 1

ಆಶೆಗಳಿಗೊಳಗಾಗಿ ಆನಂದಮಾರ್ಗವ ನೀಗಿವಾಸನೆಗಳಿಂದ ಪೋಗಿ ವಾದಿಸುತಲಿ ಚೆನ್ನಾಗಿಮೋಸಹೋಗಿ ಮುಖಬಾಗಿ ಘಾಸಿಯಾಗಿ ಗುಣಪೋಗಿಕಾಸು ವೀಸಾ ಧಾನ್ಯಕಾಗಿ ದಾಸನಾಗಿ ಪರರಿಗೆ 2

ಎಲ್ಲರೊಳುವಾದಗಳವಾಡಿ ಬಲ್ಲವನಂದದಿ ಕಾಡಿಖುಲ್ಲರಾ ಮಾರ್ಗವ ಕೂಡಿ ಕೂಳಿಲ್ಲದಿಲ್ಲಿಗೆ ಬಾಡಿತಲ್ಲಣದೊಳಗೋಲಾಡಿ ತಬ್ಬಿಬ್ಬೊ ಕರ್ಮವ ಮಾಡಿಕಲ್ಲೆದೆಯನನೆನ್ನನು ಕಾಯಬೇಕು ಗೋಪಾಲಾರ್ಯ 3

***

No comments:

Post a Comment