kruti by Nidaguruki Jeevubai
ಜಯ ಜಯ ಶ್ರೀ ಹರಿ ಶೌರಿ
ಜಯ ಜಯ ಮಂದರಧಾರಿ
ಜಯ ಜಯ ಶ್ರೀ ಮುರವೈರಿ
ಜಯ ಜಯ ಕಂಸಾರಿ ಪ
ಮುತ್ತಿನ ಮಂಟಪದಿ
ರತ್ನಪೀಠವನಿರಿಸಿ
ಅರ್ಥಿಲಿ ಬಾ ಹಸೆಗೆನ್ನುತ ಕರೆವರು
ಮುತ್ತೆ ೈದೆಯರುಗಳು 1
ಇಂದಿರೆ ರಮಣ ಬಾ
ಕಂದರ್ಪ ಜನಕ ಬಾ
ಸುಂದರಾಂಗನೆ ಬಾ ಹಸೆಗೆನ್ನುತ
ಚಂದದಿ ಕರೆದರು 2
ಕಂಬು ಕಂದರೆಯೆ ಬಾ
ಅಂಬುಜ ಮುಖಿಯೆ ಬಾ
ಸಂಭ್ರಮದಲಿ ಬಾ ಹಸೆಗೆನ್ನುತ ಕರೆದರು
ಅಂಬುಜ ಮುಖಿಯರು 3
ನಾರಿ ರುಕ್ಮಿಣಿ ದೇವಿ
ನಾರದ ವಂದ್ಯನಿಗೆ
ಚಾರು ಪರಿಮಳ ಅರಿಶಿನ ಕುಂಕುಮ
ಹಾರವನರ್ಪಿಸುತ 4
ಪರಿ ಪರಿ ಕುಸುಮಗಳ
ಪದಕÀ ಪುಷ್ಪದ ಮಾಲೆ
ಪರಮಾತ್ಮನ ಕೊರಳಿಗೆ ಹಾಕುತ
ಅಲಂಕರಿಸಿದಳಾಗ5
ಜಯ ಜಯ ಶ್ರೀ ಕೇಶವನೆ
ಜಯ ಜಯ ನಾರಾಯಣನೆ
ಜಯ ಜಯ ಶ್ರೀ ಮಾಧವನೆ
ಜಯ ಜಯ ಗೋವಿಂದ 6
ಜಯ ಜಯ ಶ್ರೀ ವಿಷ್ಣುಹರೆ
ಜಯ ಜಯ ಶ್ರೀ ಮಧುಸೂದನನೆ
ಜಯ ಜಯ ಶ್ರೀ ತ್ರಿವಿಕ್ರಮನೆ
ಜಯ ಜಯ ವಾಮನನೇ 7
ಜಯ ಜಯ ಶ್ರೀ ಶ್ರೀಧರನೇ
ಜಯ ಜಯ ಶ್ರೀ ಹೃಷಿಕೇಶ
ಜಯ ಜಯ ಶ್ರೀ ಪದ್ಮನಾಭ
ಜಯ ದಾಮೋದರನೆ 8
ಜಯ ಜಯ ಸಂಕರ್ಷಣನೆ
ಜಯ ಜಯ ಶ್ರೀ ವಾಸುದೇವ
ಜಯ ಜಯ ಶ್ರೀ ಪ್ರದ್ಯುಮ್ನ
ಜಯ ಜಯ ಅನಿರುದ್ಧ 9
ಜಯ ಜಯ ಶ್ರೀ ಪುರುಷೋತ್ತಮನೆ
ಜಯ ಜಯ ಶ್ರೀ ಅಧೋಕ್ಷಜನೆ
ಜಯ ಜಯ ಶ್ರೀ ನಾರಸಿಂಹ
ಜಯ ಜಯ ಅಚ್ಚುತನೆ 10
ಜಯ ಜಯ ಶ್ರೀ ಜನಾರ್ದನನೆ
ಜಯ ಜಯ ಶ್ರೀ ಉಪೇಂದ್ರಹರೇ
ಜಯ ಜಯ ಶ್ರೀ ಹರಿ ಶ್ರೀಶಾ
ಜಯ ಜಯ ಶ್ರೀ ಕೃಷ್ಣಾ11
ಇಂತು ದೇವನ ಸ್ತುತಿಸಿ
ಸಂತಸದಿ ವೀಳ್ಯವನು
ಕಂತು ಪಿತನಿಗೆ ಅರ್ಪಿಸಿ ಮುದದಿ
ವಂದಿಸಿ ಭಕ್ತಿಯಲಿ12
ಕಮಲಾಕ್ಷಿಯರು ಕೂಡಿ
ಕನಕದಾರತಿ ಪಿಡಿದು
ಕಮಲನಾಭ ವಿಠ್ಠಲ ಲಕ್ಷ್ಮೀಯರಿಗೆಬೆಳಗಿದರಾಗ 13
***
No comments:
Post a Comment