Thursday, 5 August 2021

ಬಾರೋ ಶ್ರೀಹರಿ ಬಾಲಕ ಶೌರಿ ಬಾರೋ ಶ್ರೀಹರಿ ankita kamalanabha vittala

 ..

kruti by Nidaguruki Jeevubai

ಬಾರೋ ಶ್ರೀಹರಿ ಬಾಲಕ ಶೌರಿ ಬಾರೋ ಶ್ರೀಹರಿ ಪ


ಬಾರೋ ಬಾರೋ ಕರುಣಾನಿಧಿ ನಿನ್ನನು

ಬಾರಿ ಬಾರಿಗೆ ಸಿರಬಾಗಿ ನಮಿಸುವೆನು ಅ.ಪ


ಮಾರನಯ್ಯನೆ ಮಂಗಳರೂಪ ತೋರೊ ಬೇಗನೆ

ಸಾರಸಾಕ್ಷ ಸನ್ಮಂಗಳ ಮಹಿಮನೆ

ತೋರೋ ನಿನ್ನ ಮಹಾ ಮೀನರೂಪವನು 1

ಸುಂದರಾನನ ಚಂದಿರವದನ ಮಂದಹಾಸನೆ

ಇಂದ್ರಾದಿಗಳಿಗೆ ಬಂದ ದುರಿತ ಕಳೆವಂದದಿ

ಬೆನ್ನಿಲಿ ಮಂದರವೆತ್ತಿದ2

ಆದಿದೈತ್ಯನು ಭೂದೇವಿಯಪಹಾರ ಗೈದನು

ಆ ದಿತಿಜರ ಸಂಹಾರ ಮಾಡಲು ನೆಲ

ಬೇರುಗಳನೆ ತಿಂದ ಧೀರ ವರಾಹ ಬೇಗ 3

ಕಂದನಾಡಿದ ಆ ನುಡಿ ಕೇಳಿಯಾನಂದ ತಾಳಿದ

ಮಂದರೋದ್ಧರ ಮುಚುಕುಂದ ವರದ ಸುರ-

ಗಂಗೆಯ ಪಿತ ನರಸಿಂಗರೂಪದಿ 4

ಬಾಲರೂಪದಿ ಬೇಡಿದ ದಾನ ಭೂಮಿ ಮಾತ್ರದಿ

ಬೇಡಿದುದನೆ ಕೊಟ್ಟಾಮಹೀಪಾಲನ

ದೂಡಿ ಪಾತಾಳಕ್ಕೆ ಬಾಗಿಲ ಕಾಯ್ದೆ 5

ಶೂರ ರಾಜರ ಸಂಹಾರ ಮಾಡಿ ತೋರಿ ಶೌರ್ಯವ

ಸಾಗರಶಯನಗೆ ತೋರಿ ಪರಾಕ್ರಮ

ಶೂಲಿಯ ಧನುವಿತ್ತೆ ರೇಣುಕಾತ್ಮಜ 6

ವಾನರಾಧಿಪ ಹಗಲಿರುಳು ಭಕ್ತಿಮಾಡಿ ಧ್ಯಾನಿಪ

ಶ್ರೀ ಮಾನಿನಿಯಳ ಕೈಪಿಡಿಯುತ

ಅಯೋಧ್ಯದಿ ಮೆರೆದ ಶ್ರೀರಾಮ ಚಂದಿರನೆ 7

ಪಾಂಡುನಂದನ ಮಾಡಿದ ನಿನ್ನ ಬಂಡಿ ಬೋವನ

ಸಂದೇಹಿಸದಲೆ ಅಂದು ಅವರ ಮನೆ

ಎಂಜಲ ಬಳಿದ ಮುಕುಂದನೆ ಬೇಗದಿ 8

ಮಂಗಳಾತ್ಮಕ ತ್ರಿಪುರರ ಮದ ಭಂಗನಾಶಕ

ಮಂಗಳಮಹಿಮ ವಿಹಂಗವಾಹನ ಸುರ

ಸಂಗೀತಲೋಲ ಕೃಪಾಂಗ ದಯಾನಿಧೆ 9

ತೇಜಿಯನೇರುತ ಸುಜನರು ಮಾಳ್ಪಪೂಜೆಗೊಳ್ಳುತ

ರಾಜೀವಾಕ್ಷ ರಕ್ಕಸ ಸಂಹಾರಕ ಅ-

ಪಾರ ಮಹಿಮ ರಥವೇರುತ ತವಕದಿ 10

ಕಂಜಲೋಚನ ಕಮಲಾಯತಾಕ್ಷ ಮಂಜುಭೂಷಣ

ಕಂಜದಳಾಂಬಕ ಕಮಲನಾಭ ವಿಠ್ಠಲಝಗಝಗಿಸುವ ಮದ್ಹøದಯ ಮಂಟಪಕೇ 11

***


No comments:

Post a Comment