ಮಧುರಾಪುರದಿಂದ ಎಂದಿಗೆ ಬರುವಿಯೊ ಕೃಷ್ಣಾ
ಮಧುರಾಪುರದ ಬಾಲೆಯರು ಬಲು ಮೋಸಗಾರರು ಪ.
ಗೋಕುಲದ ನಾರಿಯರು ನಾವು ಏಕವಾಗಿ ಬರುವೆವು
ಅನೇಕ ಬಗಿಯ ಸುಖದಿಂದಾ ಗೋಪಿಯ ತಂದಾ ಅ.ಪ.
ಯೆಂದಿಗೆ ನಿನ್ನ ಮುಖಾರವಿಂದವ ನೋಡುವೆವೋ
ಅಂದಿಗೆ ಸುಖವೋ ಮಾಧವ
ಮಂದರೊದ್ಧರನೆ ಮಾವ ಕಂಸನ ಕೊಂದು
ಸಿಂಧುರನಯನನೆ ನೀ ಬೇಗ ಬರಬೇಕೆಂದು
ನಾವು ಬೇಡುವೆವು ಬಂದು 1
ಮಧುವನದಲ್ಲಿ ನಿನ್ನಾ
ಮಧುರ ಸ್ವರವನ್ನು ಕೇಳಿ
ಮದನ ತಾಪಕೆಮ್ಮ ಮರುಳು ಮಾಡಿಸಿ
ಮುರಲಿ ನುಡಿಸಿ ಆಧರಾಮೃತ ಪಾನವನ್ನೇ
ಮಾಡಿಸಿದ ನಿನ್ನ ಮಹಿಮೆಯನ್ನು ತೋರಿದಿ2
ಯೆಷ್ಟು ಮೊರೆ ಪೊಕ್ಕಾರು ಒಂದಿಷ್ಟು
ದಯವ್ಯಾಕೆ ಬಾರದೊ
ನಿನ್ನ ಬಿಟ್ಟು ಒಂದರಘಳಿಗಿರಲಾರೆವು ನಾನು
ಪ್ರಾಣನಾಯಕನೇ ಎನ್ನ ಪ್ರಾಣದೊಲ್ಲಭನೆ ಕೇಳೊ
ಸರ್ವಪ್ರಾಣಿಗಳಿಗೆ ಪ್ರೇರಕನೆ ನಮ್ಮ
ಕಾಳಿಮರ್ಧನ ಕೃಷ್ಣನು 3
****
No comments:
Post a Comment