..
ಎಂಥಾ ಬಲವಂತನೋ ಭಾರತೀಕಾಂತಾ
ಎಂಥಾ ದಯವಂತನೋ ಪ
ಎಂಥ ಮಹಬಲವಂತ ಬಹುಗುಣ -
ವಂತ ಸರ್ವದಾನಂತಚೇತನ
ರಂತರಾದೋಳ್ನಿಂತು ಪ್ರೇರಿಪ
ನಂತು ಮಹಿಮೆಯ ಅಂತು ತಿಳಿಯದೊ ಅ.ಪ
ವೀರರಾಘವನಂಘ್ರಿಯ ಭಜಿಸಿ ಕಪಿ -
ವೀರನಾದನು ಮಹರಾಯಾ
ವಾರಿಧಿಯಾಗಾಧತೋಯ ಲಂಘಿಸಿ ಲಂಕಾ
ಸಾರಿ ಪೇಳಿದ ವಾರ್ತೆಯ
ವೀರ ವನವನಂಗಾರಮುಖಕೆ ಇತ್ತು
ವೀರಾಕ್ಷನೆನಿಪ ಕುಮಾರನ ದಂಡಿಸಿ
ಸಾರಿ ಉಂಗುರವಿತ್ತು ಮತ್ತೆ
ಹಾರಿ ವಾರಿಧಿ ವಾನÀರೇಶನು
ತೋರಿ ರಾಮನ ಪದಕೆ ನಮಿಸಿ
ಚಾರು ರಾಗಟೆ ಇತ್ತ ತ್ವರದಿ 1
ದುರುಳ ದುಶ್ಯಾಸನನೂ ಕೋಪದಿ ತಾ
ತರುಳೆ ದ್ರೌಪದಿಯನ್ನು
ಶರಗು ಪಿಡಿದು ಶಳದಾನು ಕರಿಯಲು ಬ್ಯಾಗ
ಹರಿ ತಾನಂಬರವಿತ್ತನು
ಧುರದಿ ಭೀಮನು ನಿನ್ನ ತರಿದರಕ್ತದಿ ತಾನು
ಬೆರೆಸಿ ಕೇಶವ ಕಟ್ಟಿ ಕರುಳ ದಂಡೆಯನಿಟ್ಟು
ಮೇರೆವೆ ಕೇಳೆಲೋ ದುರುಳನೆಂದಾ -
ತರುಣಿವಚನವ ಸ್ಥಿರವ ಮಾಡಿದ
ಧರಿಯತಳದಲಿ ಸರಿಯುಗಾಣೆನೊ
ವgವÀೃಕೋದರ ಪರಮ ಕರುಣಿಯೆ 2
ಭೂತೇಶ ಸರ್ವೋತ್ತುಮಾನೆಂಬುವೊ ಮಹಾ -
ಪಾತಕಿ ಜನಮಾತನೇಮ
ಈತ ಮಾಡಿದ ನಿರ್ಧೂಮ ಹರಿಗೆ ಶಿವ
ದೂತಜನರಿಗುತ್ತುಮ
ಭೂತಳದಲಿ ತಾನೆ ಜಾತನಾಗಿ ಮಧ್ವ
ಖ್ಯಾತಿ ಮಾಡಿದ ಜೀವಜಾತಿ ಪ್ರೇರಕನಾಗಿ
ಶ್ವೇತವಾಹನ ದೂತನಾಗಿಹ
ನಾಥ ಗುರು ಜಗನ್ನಾಥವಿಠಲ
ಧಾತನಾಂಡಕೆನಾಥ, ನಿರ್ಜರÀ
ನಾಥರೆಲ್ಲರೂ ದೂತರೆಂದರು 3
***
No comments:
Post a Comment