..
ಗುರ್ವಂತರ್ಗತ ಗೋಪಾಲ ಪಾಹಿ
ಸರ್ವಪಾಲಕ ಶಿರಿಲೋಲ ಪ
ಶರ್ವಸುರಗಂಧರ್ವ ಮುನಿಕುಲ
Àಸರ್ವಸೇವಿತ ಗರ್ವರಹಿತನೆ ಅ.ಪ
ರಾಮಾಕೃಷ್ಣ ವ್ಯಾಸರೂಪದಿಂದಾ
ಮಾಮನೋಹರ ಮಾಡೆಕೃಪಾ
ಶ್ರೀಮಧ್ವ ಮೊದಲಾದ ಆ ಮಹಾಮುನಿಗಳ
ಸ್ತೋಮಸಂತತ ಮಹಾಪ್ರೇಮಮನದಲಿದ್ದು
ಭೂಮಿತಳದೊಳಗಖಿಳಜನರಿಗೆ
ಕಾಮಿತಾರ್ಥವ ಸಲಿಸಿ ತಾ ನಿ
ಸ್ಸೀಮ ಮಹಿಮೆಯ ತೋರಿ ಇವರಿಗೆ
ಆ ಮಹತ್ತರ ಕೀರ್ತಿಕೊಡುತಿಹ 1
ಆವಾವಜನುಮಗಳಲ್ಲಿ ಜಗಕೆ
ಜೀವನಪ್ರದನಾಗಿ ಇಲ್ಲೀ
ಶ್ರೀವರ ಸರ್ವೇಶ ಜೀವೇಶ ಸುರವಂದ್ಯ
ದೇವ ನಿನ್ನಯ ಪಾದಸೇವಾವ ಸಲಿಸೆಂದೆ
ಕೋವಿದರ ಕುಲಮಣಿಗಳೊಳಗೆ
ಭಾವಿಪುದು ಸನ್ಮನವನಿತ್ತು
ಗೋವಿದಾಂಪತೆ ಜ್ಞಾನಗಮ್ಯನೆ
ಪಾವನಾತ್ಮಕ ಪರಮ ಪಾಲಿಸೋ 2
ದಾತ ಶ್ರೀ ಗುರುಜಗನ್ನಾಥವಿಠಲ ನೀ
ಧಾತನಾಂಡಕೆ ಮುಖ್ಯನಾಥಾ
ಧಾತಪ್ರಮುಖಸುರವ್ರಾತಸನ್ನುತಪಾದ
ಪಾಥೋಜಯುಗಳ ಸಂಭೂತ ರಜೋದಿಂದ
ಧೂತಪಾಪನ ಮಾಡುವದು ಅ
ದ್ಭೂತ ಜ್ಞಾನ ವಿರಕುತಿ ಸಂಪ
ದ್ಪ್ರಾತ ಪಾಲಿಸೊ ಹೇ ಮಹದ್ಭುತ
ದಾತ ಎಂಬೆನೊ ನಮೋ ನಮೋ 3
***
No comments:
Post a Comment