ಶಿಲೆಯಲ್ಲಿ ಮಮತೆಯೇ ಸಿದ್ಧ ಪುರುಷ
ಇಳೆಮೂರು ವ್ಯಾಪಕಗೆ ಈ ಮುನಿಯ ಬಳಿಯಾ ಪ.
ದಶರಥಾತ್ಮಜ ಸೇತು ಬಂಧನವ ಗೈಯಲೂ
ಅಸಮ ಸಾಹಸದಿ ಗಿರಿಗಳನೆ ತಂದೇ
ಹಸನಾದ ಶಿಲೆಯೊಂದರಲಿ ರೂಪ ಮೂಡುವಡೆ
ವಸುಧಿ ಸುತೆಪತಿ ಬೇಡವೆನುತಿರ್ದನೇನೈ 1
ನಡುಗೆ ಹುಲಿ ಘರ್ಜನೆಗೆ ಪಡೆದವಳ ಕೈ ಜಾರೆ
ವಡೆದು ಶತವಾಗಲಾ ಗಿರಿಯಲ್ಲಿ ಮಮತೇ
ವಡಮೂಡದವಗೆ ಈ ವಡೆದ ಪ್ರತೀಕದಲಿ
ಇಡುತ ಅಭಿಮಾನವನು ಕಡು ಪೂಜೆಗೊಂಬೇ 2
ಧರೆಯಲ್ಲಿ ಚರಿಸಿ ಸದ್ಭಕ್ತರ e್ಞÁನವನು
ಹರಿಸಿ ಸಧ್ಗ್ರಂಥ ಕನ್ನಡಿಯ ತೋರಿ
ಗಿರಿ ಏರುವಾಗ ಬೇಕೆನಲು ಶಿಲೆ ಇರಲಿಲ್ಲೆ
ಬಿರುಕಾದ ಕಲ್ಲಿನಲ್ಲಿ ನೆಲಸಿರುವದೇನೈ 3
ಶಿಲೆಯೆ ನೀನೆನ್ನಲು ಅe್ಞÁನಿ ನುಡಿಯಹುದು
ಶಿಲೆಯಲ್ಲಿ ನೀನೆಲು ಮತ್ತೊಂದು ಶಿಗದೇ
ಬಲು ಛಿದ್ರ ತಂತಿಯಲಿ ಬಿಗಿಸಿ ಪೂಜೆಯಗೊಂಬ
ಬಲವಂತದಾ ಮಹಿಮೆ ತಿಳಿಯಲಳವಲ್ಲಾ 4
ತಾಪಸರ ಪೂಜೆ ಸತ್ವವ ತೋರ್ವ ವೈಭವವೋ
ಆಪನ್ನರನೆ ಕಾಯ್ವ ಆನಂದವೋ
ಶ್ರೀ ಪರಮಹಂಸ ಪ್ರದ್ಯುಮ್ನತೀರ್ಥರಿಗೊಲಿದೆ
ಗೋಪಾಲಕೃಷ್ಣವಿಠ್ಠಲನ ನಿಜದಾಸ 5
****
No comments:
Post a Comment