ಲಿಂಗನ ನೋಡಿದೆ
ಭವ ಭಸಿತಾಂಗನ ನೋಡಿದೆ ||ಪ||
ರಂಗನ ತನ್ನಂಗದೊಳಗೆ ಇಟ್ಟು
ಹಿಂಗದೆ ನೆನೆಯುವ ಮಂಗಳ ಮೂರುತಿ ||ಅ.ಪ||
ತ್ಯಕ್ಷನ ನೋಡಿದೆ
ಕರುಣಕಟಾಕ್ಷನ ನೋಡಿದೆ
ವೀಕ್ಷಣದಿಂದ ಶ್ರೀ ವಕ್ಷನ ಸುತನನು
ಶಿಕ್ಷಿಸಿದ ಫಾಲಾಕ್ಷನ ಶಿವನ ||೧||
ಹರನನು ನೋಡಿದೆ
ಗಂಗಾಧರನನು ನೋಡಿದೆ
ಗಿರಿಜೆವಲ್ಲಭ ಭಾಸುರ ವಂದಿತನಾ
ಸರಿತು ತುಂಗ ಪಂಪಾಪುರವಾಸನ ||೨||
ಶೂಲಿಯ ನೋಡಿದೆ
ರುಂಡಮಾಲಿಯ ನೋಡಿದೆ
ಕೈಲಾಸದಿ ಉಮೆ ಲೋಲನೆನಿಸಿ ಇಲ್ಲಿ
ವ್ಯಾಳಭೂಷಣನಾಗಿ ಲೀಲೆಯೊಳ್ ಮೆರೆವನ ||೩||
ಈಶನ ನೋಡಿದೆ
ನರಹರಿ ದಾಸನ ನೋಡಿದೆ
ಪಾಶುಪತಾಸ್ತ್ರವ ವಾಸವಜನಿಗಿತ್ತ
ಪೋಷಿಕಿರಾತನ ವೇಷನ ಹರುಷದಿ ||೪||
ದಿಟ್ಟನ ನೋಡಿದೆ
ವೈಷ್ಣವ ಶ್ರೇಷ್ಠನ ನೋಡಿದೆ
ವೃಷ್ಣೀಶ ಗೋಪಾಲಕೃಷ್ಣವಿಠ್ಠಲನಿಗೆ
ಪುಟ್ಟ ಮೊಮ್ಮಗನಾಗಿ ತುಷ್ಟಿಪಡಿಸುವನ ||೫||
***
Lingana nodide
bhava bhasitangana nodide ||pa||
Rangana tannangadolage ittu
hingade neneyuva mangala muruti ||a.pa||
Tyakshana nodide
karunakatakshana nodide
vikshanadinda sri vakshana sutananu
shikshisida phalakshana shivana ||1||
Harananu nodide
gangadharananu nodide
girijevallabha bhasura vanditana
saritu tunga pampapuravasana ||2||
Shuliya nodide
rundamaliya nodide
kailasadi ume lolanenisi illi
vyalabhushananagi lileyol merevana ||3||
Ishana nodide
narahari dasana nodide
pashupatastrava vasavajanigitta
poshikiratana veshana harushadi ||4||
Dittana nodide
vaishnava shreshthana nodide
vrushnisha gopalakrishnavittalanige
putta mommaganagi tustipadisuvana ||5||
***
ಲಿಂಗನ ನೋಡಿದೆ | ಭವ ಭಸಿ-
ತಾಂಗನ ನೋಡಿದೆ ಪ.
ರಂಗನ ತನ್ನಂಗದೊಳಗೆ ಇಟ್ಟು
ಹಿಂಗದೆ ನೆನೆಯುವ ಮಂಗಳ ಮೂರುತಿ ಅ.ಪ.
ತ್ಯಕ್ಷನ ನೋಡಿದೆ | ಕರುಣಕ-
ಟಾಕ್ಷನ ನೋಡಿದೆ
ವೀಕ್ಷಣದಿಂದ ಶ್ರೀ ವಕ್ಷನ ಸುತನನು
ಶಿಕ್ಷಿಸಿದ ಫಾಲಾಕ್ಷನ ಶಿವನ 1
ಹರನನು ನೋಡಿದೆ | ಗಂಗಾ-
ಧರನನು ನೋಡಿದೆ
ಗಿರಿಜೆವಲ್ಲಭ ಭಾಸುರ ವಂದಿತನಾ
ಸರಿತು ತುಂಗ ಪಂಪಾಪುರವಾಸನ 2
ಶೂಲಿಯ ನೋಡಿದೆ | ರುಂಡ
ಮಾಲಿಯ ನೋಡಿದೆ
ಕೈಲಾಸದಿ ಉಮೆ ಲೋಲನೆನಿಸಿ ಇಲ್ಲಿ
ವ್ಯಾಳಭೂಷಣನಾಗಿ ಲೀಲೆಯೊಳ್ ಮೆರೆವನ 3
ಈಶನ ನೋಡಿದೆ | ನರಹರಿ
ದಾಸನ ನೋಡಿದೆ
ಪಾಶುಪತಾಸ್ತ್ರವ ವಾಸವಜನಿಗಿತ್ತ
ಪೋಷಿಕಿರಾತನ ವೇಷನ ಹರುಷದಿ 4
ದಿಟ್ಟನ ನೋಡಿದೆ | ವೈಷ್ಣವ
ಶ್ರೇಷ್ಠನ ನೋಡಿದೆ
ವೃಷ್ಣೀಶ ಗೋಪಾಲಕೃಷ್ಣವಿಠ್ಠಲನಿಗೆ
ಪುಟ್ಟ ಮೊಮ್ಮಗನಾಗಿ ತುಷ್ಟಿಪಡಿಸುವನ5
****
No comments:
Post a Comment