Saturday, 4 December 2021

ಶ್ರೀನಾಥನ ನಾಮಾಮೃತ ರುಚಿಯೆಲ್ಲ ಪರಮ ಭಕುತ ankita mohana vittala SRINATHANA NAAMAAMRUTA RUCHIYELLA PARAMA BHAKUTA



ಶ್ರೀನಾಥನ ನಾಮಾಮೃತ ರುಚಿಯೆಲ್ಲ ಪರಮ ಭಕುತಗಲ್ಲದೆ ಪ


ಹೀನ ಮನುಜರು ಕೇಳಿ ಹಿರ್ರನೆ ಹಿಗ್ಗಿ ಆನಂದಪಡಬಲ್ಲರೆ ಅ.ಪ.


ಕ್ಷೀರ ವಾರಿಯ ಕೂಟ ಮರಾಳ ತಿಳಿವಂತೆನೀರು ಕೋಳಿಯು ಬಲ್ಲುದೆಸಾರಮೇಯನ ಬಾಲ ನಳಿಗೆಯೊಳಿಟ್ಟರೆನೇರವಾಗಬಲ್ಲದೆದಾರು ಪ್ರತಿಮೆಗೆ ಸೀರೆಯನುಡಿಸಲುನಾರಿಯಾಗಬಲ್ಲುದೆಭಾರತಿಪತಿ ಪಾದವರಿಯದ ಮನುಜನುನಾರಾಯಣನ ಬಲ್ಲನೆ1

ಉದರಕ್ಕೆ ಗ್ರಾಸವ ನಡೆಸದ ಮನುಜನುಮದುವೆ ಮಾಡಲು ಬಲ್ಲನೆಸದನಕ್ಕೆ ಜನ ಬರೆ ಕದನವ ತೆಗೆವವಬುಧರು ಎಂಬುದ ಬಲ್ಲನೆವಿಧಿಯಂತೆ ಮಸೆದು ಮತ್ಸರಿಸುವವ ನಮಗೆಹದುಳ ಹಾರೈಸುವನೆಮದವೆಗ್ಗಳಿಸಿ ಮೆರೆವ ಮನುಜ ಹರಿಪದಗಳರ್ಚಿಸಬಲ್ಲನೆ 2

ಕನ್ನಡಿಯೊಳು ರೂಪು ಹೊಳೆದಂತೆ ಹಂಚಿನೊಳ್‍ಇನ್ನು ಕಾಣಿಸಬಲ್ಲುದೆಕಣ್ಣಿಲ್ಲದವನಿಗೆ ಚಿನ್ನವ ತೋರಲುಬಣ್ಣ ಹೇಳಲು ಬಲ್ಲನೆಹೆಣ್ಣಿನ ಮೇಲಿನ ವ್ಯಾಮೋಹ ಬಿಡದವಸಂನ್ಯಾಸಿಯಾಗುವನೆಅನ್ಯ ದೈವಂಗಳ ಭಜಿಸುವ ನರಗೆ ಮೋ-ಹನ್ನ ವಿಠ್ಠಲ ಒಲಿವನೇ 3

***


No comments:

Post a Comment