Monday 2 August 2021

ಸತ್ಯವಂತನೊ ನೀನು ಸರಸಿಜಾಕ್ಷ ankita gopalakrishna vittala

ಸತ್ಯವಂತನೊ ನೀನು ಸರಸಿಜಾಕ್ಷ

ಉತ್ಪತ್ತಿರಹಿತ ಸಿರಿ ನಿತ್ಯಾವಿಯೋಗ ಪ.


ಶ್ರೀನಿವಾಸನೆ ಕೃಷ್ಣ ಭಾನು ಪ್ರಕಾಶ ಹರಿ

ಏನೆಂಬೆ ನಿನ್ನ ಪ್ರಭಾವವನ್ನು

ನಾನಾ ವಿಧದಿಂದ ಭಕ್ತರ ಕಾಯ್ವ ನರಹರಿಯೆ

ಮಾನವಂತರ ಕಾಯ್ವ ದಾನವಾಂತಕನೆ 1

ಕೃಷ್ಣಮೂರುತಿ ನಿನ್ನ ದರುಶನದ ಕಾರಣದಿ

ಶ್ರೇಷ್ಠ ಗುರುಗಳಿಗೆ ನೀ ಕ್ಲೇಶ ತಂದೊಡ್ಡಿ

ಇಷ್ಟು ಪರಿಯಲಿ ಎನ್ನ ಮನವ ಶೋಧಿಸಿ ನೋಡಿ

ಕಷ್ಟ ಕಳೆದೆಯೊ ಈಗ ಕರುಣಾಳು ದೇವ 2

ಗುರುಗಳಿಗೆ ಬಂದಂಥ ರೋಗವನೆ ಪರಿಹರಿಸಿ

ಕರುಣಿಸಿದೆ ಮನಕೆ ಬಹು ಆನಂದವನ್ನು

ಪರತರನೆ ಇದರಂತೆ ಭವರೋಗವನೆ ಹರಿಸಿ

ನಿರುತ ನಿನ್ನಯ ಪಾದಸ್ಥಾನ ನೀಡೆನಗೆ 3

ಸುರಪನಿಗೆ ಬಂದಂಥ ಪರಿಪರಿಯ ಕಷ್ಟದಿಂ

ಹರಿಯೆ ನಿನ್ನಾಜ್ಞೆಯಿಂದೆಲ್ಲರೂ ಕೂಡಿ

ಸುರರು ಅಸುರರು ಕಲೆತು ಶರಧಿ ಮಥಿಸುತಲಿರಲು

ಕರುಣೆಯಿಂದಲಿ ಸುಧೆಯ ಕಲಶ ತಂದವನೆ4

ವಂಚನೆಯ ಪೆಣ್ಣಾಗಿ ವಂಚಿಸಿ ದೈತ್ಯರನು

ಹಂಚಿಕಿಂದಲಿ ಅಮೃತ ಸುರರಿಗುಣಿಸಿ

ಪಂಚಬಾಣನ ಪಿತನೆ ಸುರರ ರಕ್ಷಕನಾದೆ

ವಂಚಿಸದೆ ಎಮ್ಮಗಳ ನೀನೀಗ ಕಾಯೊ 5

ಅಮೃತಹಸ್ತನೆ ಕೃಷ್ಣ ಅಮೃತವಿತ್ತು ಕಾಯೊ

ಅಮೃತರಲ್ಲವೆ ನಿನ್ನ ಪಟ್ಟಣದ ಜನರು

ಅಮೃತ ಕಿರಣಾಂತರ್ಯಾಮಿಯೆ ಶಾಂತ ಧನ್ವಂತ್ರಿ

ಅಮೃತರಾಗುವರೈಯ್ಯ ನಿನ್ನ ನಂಬಿದರೆ 6

ಸಚ್ಚಿದಾನಂದ ಸರ್ವೋತ್ತಮನೆ ಶ್ರೀ ಕೃಷ್ಣ

ಬಿಚ್ಚಿ ಸಲಹಯ್ಯ ಎನ್ನe್ಞÁನ ಬಂಧ

ಅಚ್ಚುತಾನಂತ ಶ್ರೀ ಗುರುಗಳಂತರ್ಯಾಮಿ

ಅಚ್ಚವೈಷ್ಣಣವ ಪ್ರಿಯ ಗೋಪಾಲಕೃಷ್ಣವಿಠ್ಠಲ 7

****


No comments:

Post a Comment