..
ಶ್ರವಣ ಮಂಗಳನೀವುದೊ ಎನ್ನ ಕರ್ಣಗಳಿಗಾ-
ನಂದ ಕೊಡುವುದು ಶರಣ ಜನರಿಗೆ
ಬಂದ ದುರಿತಗಳ್ಹರಣ ಮಾಡುವುದು 1
ಭರಣ ಭೂಷಿತನಾದ ಲಕ್ಷ್ಮೀರಮಣ ನೀಲಾ-
ವರಣ ನಿನ್ನ ಝಣ ಝಣಂದಿಗೆ
ನಾದ ನೂಪುರ ಚರಣಕ್ವಂದಿಸುವೆ 2
ಕಮಲನಾಳದಿ ಪುಟ್ಟಿದಾತನ ಜನನಿ ಪತಿ
ಜಗಜ್ಜನಕ ನಿನ್ನ ವನಜಪಾದಕೆ
ನಮಿಸುವೆನೊ ಈ ಮನವು ನಿನ್ನಲ್ಲಿ 3
ನಿಲಿಸಿದರೆ ನಾ ನಿನ್ನ ನಾಮವ ನೆನೆಸಿದರೆ
ಫÀಲಫಲಿಸಿ ಬಾಹೋದು ಒಲಿಸುವನು
ವೈಕುಂಠಪತಿ ನೀ ಮನಸು ಮಾಡುವರೆ 4
ಘನಮಹಿಮ ಗಾಂಧಾರಿ ಸುತರನು ಹನನ ಮಾಡಿದ
ಪವನ ಪ್ರಿಯನೇ ಜನುಮ ಜನುಮದಿ
ನಿನ್ನ ಬಿಡೆ ನಾ ಜಗದ ವಲ್ಲಭನೆ 5
ಅಂಗಜನ ಪತಿ ನಿನ್ನ ಸುಂದರಾಂಗವನು ತೋರದಲೆ
ಈ ಭವ ಭಂಗ ಬಿಡಸುವು-
ದ್ಯಾತಕೋ ಶ್ರೀರಂಗ ಪೇಳಿನ್ನು 6
ಚಕ್ರದಂದದಿ ತಿರುಗೊ ಎನಮನ ಚಕ್ರಧಾರಿಯೆ
ನಿನ್ನ ಕಾಣದೆ ಶಕ್ರಸುತನ ಸಖನೆ
ದಯಮಾಡ್ಹಕ್ಕಿವಾಹನನೆ 7
ಅನ್ನದಾತನು ಇರಲುಕಾಣದೆ ಅನ್ಯರಿಗೆ
ಬಾಯ್ತೆರೆಯಲ್ಯಾತಕೆ ಪನ್ನಗಾದ್ರಿಶಯನ
ನೀ ಸಲಹೆನ್ನ ಶ್ರೀಹರಿಯೆ 8
ಸರ್ವಗುಣ ಸಂಪನ್ನ ಸರ್ವೋತ್ತಮನೆ
ಸರ್ವ ವ್ಯಾಪಾರಗಳನು ಸರ್ವಕಾಲದಿ
ನಡೆಸುತಿರುವ ಸರ್ವರಾಧಾರಿ 9
ವರಮಹಾಲಕ್ಷ್ಮೀಪತಿಯೆ ವಾರಣವರದ
ನಿನ್ನ ಸುರ ವಿರಿಂಚನಾ ಹರನು ವೀಣಾ-
ಪಾಣಿನಾರದ ಬರಿದೆ ನಮಿಸುವರೆ 10
ಪರಮ ಕರುಣಾಶರಧಿ ಎನ್ನ ದುರಿತಗಳ ನೀ
ದೂರ ಮಾಡುವೆ ಬಿರುದು ನಿನ್ನದÀು
ಬಿಡದೆ ಭೀಮೇಶಕೃಷ್ಣ ಸಲಹೆನ್ನ 11
***
No comments:
Post a Comment