ಶ್ರೀ ಪುರಂದರದಾಸಾರ್ಯ ವಿರಚಿತ
ಶ್ರೀಕೃಷ್ಣ ಬಾಲಲೀಲಾ - ಕಾಳಿಂಗಫಣಿಮರ್ಧನ ಸುಳಾದಿ - ೫
ರಾಗ : ಆರಭಿ
ಧೃವತಾಳ
ಗಲಭೆ ಇದೇನೋ ಬೊಮ್ಮಾದಿಗಳ
ಉಲುಹು ಇದೇನೋ ರುದ್ರಾದಿಗಳ
ಸುಳಿದರೆ ಸುಹೊಯ್ಯೊ ಸುರಾದಿಗಳ
ನಿಲಹೆ ಹೇಳಲೊ ಸನಕಾದಿಗಳ
ನಳಿನ ಪತ್ರಾಕ್ಷ ನೋಲಗ ಶಾಲೆಗೆ
ಸಲುವೊರೆ ಲಿಂಗ ಶರೀರಗಿಳು
ಕಲಕಾಲದಲಿ ಲಕುಮಿಯ ಅರಸಿ
ಸುಲಭನೊಪ್ಪಿಯ ಪುರಂದರವಿಠ್ಠಲ
ಗಲಭೆ ಇದೇನೋ ಬೊಮ್ಮಾದಿಗಳ ॥೧॥
ಮಟ್ಟತಾಳ
ಮುಕುತ ವಿರಿಂಚಿ ವಿಹಂಗಪತಿಗಳ ಕೈಯ್ಯಾ
ಉಕುತಿಗಳಿಂದನು ತುತಿಸಿ ಕೊಂಬುವದೆತ್ತ
ಆಕಳ ಕಾಯಿವಗೋಪ ಗೊಲ್ಲತೇರ
ಮಕ್ಕಳ ಕೈಯಿಂದ ಎತ್ತಿಸಿಕೊಂಬೋದೆತ್ತ
ಸಕಲ ಸುರರು ನಗರೆ ರಂಗಯ್ಯಾ ನಿನಗಾ
ತಕ್ಕದ ಮಾಡಿದಿಯೋ ಪುರಂದರವಿಠ್ಠಲ
ಆಕಳ ಕಾಯ್ವೊ ಗೋಪ ಗೊಲ್ಲತೇರ ॥೨॥
ತ್ರಿವಿಡಿತಾಳ
ಬದಿಯಾ ಬಲಿದು ಕಡಹದ ಮರನೇರೆ
ಕಾಲಿಂದಿಯ ಮಡುಹ ಧುಮುಕೆ ವನಶಿರದಲ್ಲಿ
ಧಿಂ ಧಿಂ ಧಿಂ ಕೆಂದು ಕುಣಿಯಲು
ಧಣ ಧಣವೆಂದು ಬೊಮ್ಮಮದ್ದಲೆ ಪಿಡಿಯೆ
ತಂದ ತಾನ್ನ ಎಂದು ಹನುಮಂತ ಪಾಡೇ
ನಂದಿವಾಹನ ತಾಳವಿಡಿದು ತಥೈ ಎನ್ನೆ
ನಂದನ ಕಂದ ನಲಿದಾನಂದದಿಂದಾ
ಧಿಂ ಧಿಂ ಧಿಮಿಕೆಂದು ಬೊಮ್ಮ ಮದ್ದಲೆ ಮುಟ್ಟಿ
ಬಂದು ಕುಣಿದ ಗೋಪಾಲ ಗೋವಿಂದ
ಆಯಂದವಗೊಲಿದ ಪುರಂದರವಿಠ್ಠಲ
ಧಿಂ ಧಿಂ ಧಿಮಿಕೆಂದು ಬೊಮ್ಮ ಮದ್ದಲೆ ಮುಟ್ಟೆ ॥೨॥
ಅಟ್ಟತಾಳ
ಪಂಕಜಲೋಚನ ಪಂಕಜನಾಭ
ಪಂಕಜಪತಿ ಪಂಕಜಮತಿ
ಪಂಕಜಸಂಭವ ವಂದಿತಾಂಘ್ರಿ
ಪಂಕಜಪಾಣಿ ಪಂಕಜಮಾಲೆ
ಪಂಕಜಮಿತ್ರನಂತಕೋಟಿತೇಜ
ಪಂಕಜನಾಭ ಪುರಂದರವಿಠ್ಠಲ
ಪಂಕಜ ಸಂಭವ ವಂದಿತಾಂಘ್ರಿ ॥೪॥
ಆದಿತಾಳ
ಚತುರಾನನ ಚತುರ ಮೂರುತಿ
ಚತುರಾತ್ಮ ಚತುರ ಕೀರುತಿ
ಚತುರ್ಭುಜ ಚತುರಪಾಣಿ
ಚತುರ ಆಯುಧ ಚತುರ್ವಿಧ ಮುಕ್ತಿದಾಯಕ
ಚತುರ್ದಶ ಭುವನೇಶ ಪುರಂದರವಿಠ್ಠಲಾ
ಚತುರಾನನ ಚತುರಮೂರುತಿ ॥೫॥
ಜತೆ
ಹಾರಾಲೊದಿಯೊ ಸಂಚಿತಾಮಿಯನು ನೀ
ತೋರೆ ನಿನ್ನ ಚರಣ ಪುರಂದರವಿಠ್ಠಲಾ ॥೬॥
****
No comments:
Post a Comment