Tuesday, 20 July 2021

ಜಯ ಜಯಾ ಶ್ರೀನಿವಾಸಾ ankita tande mahipati

 ರಾಗ -  :  ತಾಳ -


ಜಯಜಯಾ ಶ್ರೀನಿವಾಸಾ

ಜಗದೀಶಾ ವೆಂಕಟೇಶಾ

ದಯದಿಂದಲಿ ಪಾಲಿಸಿನ್ನು

ದೋರಿನಿಜ ಪ್ರಕಾಶಾ ll ಪ ll


ಉರಗಾದ್ರಿಯಲಿ ಬಂದು

ಭೂವೈಕುಂಠಿದೇಯೆಂದು

ಕರದಿಂದ ಮಹಿಮೇದೋರಿ

ತಾರಿಸುವ ಜನದಿಂದು ll 1 ll


ಧರ್ಮಾರ್ಥ ಕಾಮ್ಯ

ಚತುರ್ವಿಧಮುಕ್ತಿಗಳು

ಧರ್ಮವರಿತೆಸಾಧುರಿಗೆ

ನೀಡುತಿಹೆ ದಯಾಳು ll 2 ll


ಕುಲಧರ್ಮದಿಂದಲೆನಗೆ

ಮಾನ್ಯತಾನ ಬಂದ್ಹಾಂಗೆ

ವಲುಮೆಯಿಂದ ಪರಗತಿಗೆ

ಕುಡುಮಾನ್ಯತೆನವೀಗ ll 3 ll


ಮಂದರೊಳು ಮಂದನಾನು

ಜ್ಞಾನಭಕ್ತಿಯನರಿಯೆನು

ತಂದೆ ಮಹಿಪತಿಸ್ವಾಮಿ 

ಇಂದು ಉದ್ಧರಿಸು ನೀನು ll 4 ll

***


No comments:

Post a Comment