ಶ್ರೀ ನರಸಿಂಹ ದೇವರ ಆವಿರ್ಭಾವ
ಜಯತು ಜಯತು || pa ||
ಜಯತು ಲಕ್ಷ್ಮೀವರ ಮನೋಹರ | ಜಯತು ಭದ್ರಗುಣಾಕರ |
ಜಯತು ದಿವಾಕರ ಕೋಟಿ ಭಾಸ್ಕರ |
ಜಯತು ನರ ಮೃಗ ಸುಂದರ | ಜಯತು ಜಯತು || A PA ||
ತರಳ ನಿಮ್ಮಯ ಚರಣ ಕಮಲವ |
ಸ್ಮರಣೆ ಮಾಡಲು ಮರಿಯದೆ |
ದುರುಳ ತನದಲಿ ಹಿರಣ್ಯ ಕಶ್ಯಪ
ಕರುಣವಿಲ್ಲದೆ ಘಾತಿಸೆ |
ಉರಗ ಕರಿಗಿರಿ ಉರಿಯಗರಳಲಿ |
ಹರುಷವಿತ್ತವನುಳಿಹಿದೇ |
ಕರದಿ ಖಡ್ಗವ ಧರಿಸಿ ಕಂಬವ
ನಿರಿಯಲಾಗಬ್ಬರಿಸಿದೆ || 1 ||
ಕಿಟಕಿಟಲ್ಕಿಟ ಚಿಟ ಚಿಟಲ್ ಚಿಟ |
ತಟಿತದರ್ಭಟ ಕಿಡಿಯೊಳು |
ಕುಟಿಲ ಖಳ ಗುತ್ಕಟ ದರಟಣೆ ಪ್ರ-
ಕಟಿಸಿ ಸಂಕಟ ಪುಟ್ಟಿಸಿದೇ |
ಪಟುಭಟರ ಚೌಪಟ ಕಠಿಣ ಸ-
ತ್ಸಟವನುಬ್ಬಿಸಿನಿಟಿಸುತಾ ।
ನಿಟಿಲ ವನ್ಹಿಯ ಪುಟಸಿ ಖಳಕುಲ |
ದಟಣಿದಹರಟರಟಿಸಿದೆ || 2 ||
ಘುಡ ಘುಡಿ ಘುಡಿಸುತಾ ಹಿಡಿ ಹಿಡಿಯನ್ನುತ |
ಕಡಕಡ ಸ್ತಂಭವನೊಡೆಯುತಾ |
ಕಡುಕಡು ಕೋಪದಿ ಕಿಡಿಕಿಡಿಯುಗಳುತ |
ಕೆಡೆಕೆಡೆ ಕೆಡೆಯಂದು ಕ್ಯಡವುತಾ |
ತೊಡಿಯಲಿಡುತವನೊಡಲೊಡವುತಾ |
ನಿಡುಗರಡಿಕಿಲಿ ಪಿಡಿಯುತಾ ।
ಒಡನೊಡನೆ ಕಂಠದೆಡೆಲಳವಡಿಸಿದೆ
ವಡಿಯನೊಡಿಯ ದೃಢ ಚರಿತನೆ || 3 ||
ವಿಧಿಯ ಪ್ರಳಯವು ವಿಧಿಸಿದೋಲ್ಜಗ |
ಬೆದರಿ ತಾರೆಗಳುದರಲು ಅದುಕಿ- |
ಧರಿ ಪ್ರತಿಯೊದರೆ ಕಟಹವು ಉ-
ದಧಿಗಳ್ಕುದಿ ಕುದಿಯಲು
ಇದಿರು ನಿಂದಿಹ ಮೃದುತರೋಕ್ತಿಯ
ಸದಮಲ ಶಿಶುವನಪ್ಪಿದೆ |
ಪದುಮಿ ಪದುಮಜ ಮದನರಿಪು ವಿಪ-
ಬುಧರು ತುತಿಸಲು ಸಲಹಿದೆ || 4 ||
ಸುರರು ಪೂಮಳೆಗರಿಯ ವಿಶ್ವಕೆ
ಹರುಷವರ್ಧಿಸೆ ಅಂಕದೀ |
ಧರಿಸಿ ಸಿರಿಗೂಡಿ ಮೆರದೆ ಶಾಂತದಿ
ವರವನಿತ್ತು ಪ್ರಹ್ಲಾದನಾ |
ಹೊರದೆ ನರಹರಿ ವರಹ ದೇವನ
ವೆರಸಿವನ ಸಾಭಿದಾನದಾ |
ಪುರನಿಲಯ ಪ್ರಸನ್ನ ವೆಂಕಟ |
ಶರಣ ಜನ ಸುರ ಧೇನುವೇ || 5 ||
***
Śrī narasinha dēvara āvirbhāva
jayatu jayatu || pa ||
jayatu lakṣmīvara manōhara | jayatu bhadraguṇākara | jayatu divākara kōṭi bhāskara | jayatu nara mr̥ga sundara | jayatu jayatu || A PA ||
taraḷa nim’maya caraṇa kamalava | smaraṇe māḍalu mariyade | duruḷa tanadali hiraṇya kaśyapa karuṇavillade ghātise |
uraga karigiri uriyagaraḷali | haruṣavittavanuḷihidē | karadi khaḍgava dharisi kambava niriyalāgabbariside || 1 ||
kiṭakiṭalkiṭa ciṭa ciṭal ciṭa | taṭitadarbhaṭa kiḍiyoḷu | kuṭila khaḷa gutkaṭa daraṭaṇe pra- kaṭisi saṅkaṭa puṭṭisidē |
paṭubhaṭara caupaṭa kaṭhiṇa sa- tsaṭavanubbisiniṭisutā। niṭila vanhiya puṭasi khaḷakula | daṭaṇidaharaṭaraṭiside || 2 ||
ghuḍa ghuḍi ghuḍisutā hiḍi hiḍiyannuta | kaḍakaḍa stambhavanoḍeyutā | kaḍukaḍu kōpadi kiḍikiḍiyugaḷuta |
keḍekeḍe keḍeyandu kyaḍavutā | toḍiyaliḍutavanoḍaloḍavutā | niḍugaraḍikili piḍiyutā। oḍanoḍane kaṇṭhadeḍelaḷavaḍiside vaḍiyanoḍiya dr̥ḍha caritane || 3 ||
vidhiya praḷayavu vidhisidōljaga | bedari tāregaḷudaralu aduki- |
dhari pratiyodare kaṭahavu u- dadhigaḷkudi kudiyalu idiru nindiha mr̥dutarōktiya sadamala śiśuvanappide | padumi padumaja madanaripu vipa- budharu tutisalu salahide || 4 ||
suraru pūmaḷegariya viśvake haruṣavardhise aṅkadī | dharisi sirigūḍi merade śāntadi varavanittu prahlādanā |
horade narahari varaha dēvana verasivana sābhidānadā | puranilaya prasanna veṅkaṭa | śaraṇa jana sura dhēnuvē || 5 ||
***
ರಾಗ - : ತಾಳ -
ಜಯತು ಜಯತು
ಜಯತು ಲಕ್ಷ್ಮೀವರ ಮನೋಹರ l ಜಯತು ಭದ್ರ ಗುಣಾಕರ l
ಜಯತು ದಿವಾಕರ ಕೋಟಿ ಭಾಸ್ಕರ l
ಜಯತು ನರಮೃಗ ಸುಂದರ ಜಯತು ಜಯತು ll ಪ ll
ತರಳ ನಿಮ್ಮಯ ಚರಣ ಕಮಲವ l
ಸ್ಮರಣೆ ಮಾಡಲು ಮರಿಯದೆ l
ದುರುಳ ತನದಲಿ ಹಿರಣ್ಯ ಕಶ್ಯಪ
ಕರುಣವಿಲ್ಲದೆ ಘಾತಿಸೆ l
ಉರಗ ಕರಿಗಿರಿಉರಿಯಗರಳಲಿ l
ಹರುಷವಿತ್ತವನುಳುಹಿದೇ l
ಕರದಿ ಖಡ್ಗವ ಧರಿಸಿ ಕಂಭವ
ನಿರಿಯಲಾಗಬ್ಬರಿಸಿದೆ ll 1 ll
ಕಿಟಕಿಟಲ್ಕಿಟ ಚಿಟ ಚಿಟಲ್ ಚಿಟ l
ತಟಿತರ್ಭಟ ಕಿಡಿಯೊಳು l
ಕುಟಿಲ ಖಳಗುತ್ಕಟ ದರಟಣಿ ಪ್ರ-
ಕಟಿಸಿ ಸಂಕಟ ಪುಟ್ಟಿಸಿದೇ l
ಪಟುಭಟರ ಚೌಪಟ ಕಠಿಣ ಸ-
ತ್ಸಟವನ್ನುಬ್ಬಿಸಿನಿಟಸುತಾ l
ನಿಟಿಲ ವನ್ಹಿಯ ಪುಟಿಸಿ ಖಳಕುಲ
ದರಟಣೀದಹರಟರಟಸಿದೆ ll 2 ll
ಘುಡ ಘುಡಿಸುತಾ ಹಿಡಿ ಹಿಡಿಯನ್ನುತಾ l
ಕಡ ಕಡ ಸ್ತಂಭವನೊಡೆಯುತಾ l
ಕಡು ಕಡು ಕೋಪದಿ ಕಿಡಿ ಕಿಡಿಯುಗುಳುತ l
ಕಡೆಕಡೆ ಕೆಡೆಯಂದು ಕ್ಯಡುವುತಾ l
ತೊಡಿಯಲಿಡುತವನೊಡಲೊಡವುತಾ l
ನಿಡುಗರಳ್ಪಿಡಿಕಿಲಿ ಪಿಡಿಯುತಾ l
ಒಡನೊಡನೆ ಕಂಠದೆಡೆಲಳವಡಿಸಿದೆ
ವಡಿಯನೊಡಿಯ ದೃಢ ಚರಿತನೆ ll 3 ll
ವಿಧಿಯ ಪ್ರಳಯವು ವಿಧಿಸಿದೋಲ್ಜಗ l
ಬೆದರಿ ತಾರೆಗಳುದುರಲು ಅದುಕೀ- l
ಧರಿ ಪ್ರತಿಯೊದರೆ ಕಟಹವು ಉ-
ದಧಿಗಳ್ಕುದಿ ಕುದಿಯಲು l
ಇದಿರು ನಿಂದಿಹ ಮೃದುತರೋಕ್ತಿಯ
ಸದಮಲ ಶಿಶುವನಪ್ಪಿದೆ
ಪದುಮಿ ಪದುಮಜ ಮದನರಿಪು ವಿಪ-
ಬುಧರು ತುತಿಸಲು ಸಲಹಿದೆ ll 4 ll
ಸುರರು ಪೂಮಳೆಗರಿಯೆ ವಿಶ್ವಕೆ
ಹರುಷವರ್ಧಿಸೆ ಅಂಕದೀ l
ಧರಿಸಿ ಸಿರಿಗೂಡಿ ಮೆರದ ಶಾಂತದಿ
ವರವನಿತ್ತು ಪ್ರಹ್ಲಾದನಾ l
ಹೊರದೆ ನರಹರಿ ವರಹ ದೇವನ
ವರಸಿದನ ಸಾಭಿದಾನದಾ l
ಪುರನಿಲಯ ಪ್ರಸನ್ನವೆಂಕಟ l
ಶರಣಜನ ಸುರಧೇನುವೇ ll 5 ll
***
Plain English
Sri narasinha devara avirbhava
jayatu jayatu || pa ||
jayatu laksmivara manohara | jayatu bhadragunakara | jayatu divakara koti bhaskara | jayatu nara mrga sundara | jayatu jayatu || A PA ||
tarala nim’maya carana kamalava | smarane madalu mariyade | durula tanadali hiranya kasyapa karunavillade ghatise |
uraga karigiri uriyagaralali | harusavittavanulihide | karadi khadgava dharisi kambava niriyalagabbariside || 1 ||
kitakitalkita cita cital cita | tatitadarbhata kidiyolu | kutila khala gutkata daratane pra- katisi sankata puttiside |
patubhatara caupata kathina sa- tsatavanubbisinitisuta। nitila vanhiya putasi khalakula | datanidaharataratiside || 2 ||
ghuda ghudi ghudisuta hidi hidiyannuta | kadakada stambhavanodeyuta | kadukadu kopadi kidikidiyugaluta |
kedekede kedeyandu kyadavuta | todiyalidutavanodalodavuta | nidugaradikili pidiyuta। odanodane kanthadedelalavadiside vadiyanodiya drdha caritane || 3 ||
vidhiya pralayavu vidhisidoljaga | bedari taregaludaralu aduki- |
dhari pratiyodare katahavu u- dadhigalkudi kudiyalu idiru nindiha mrdutaroktiya sadamala sisuvanappide | padumi padumaja madanaripu vipa- budharu tutisalu salahide || 4 ||
suraru pumalegariya visvake harusavardhise ankadi | dharisi sirigudi merade santadi varavanittu prahladana |
horade narahari varaha devana verasivana sabhidanada | puranilaya prasanna venkata | sarana jana sura dhenuve || 5 ||
***
No comments:
Post a Comment