..
ಆವ ಕುಲವಾದರೇನು ಶ್ರೀ ವಾಸು-ದೇವನೆಂದವನೆ ಧನ್ಯಾ ಪ
ಭಗವಂತನಲ್ಲಿ ಭಕುತಿ ಉಳ್ಳ ಮಾ-ದಿಗನೆ ಉತ್ತಮ ಜಾತಿಯೋನಗಧರನ ನೆನೆಯದಿಪ್ಪ ವಿಪ್ರ ಮಾ-ದಿಗಗಿಂತ ನಿಕೃಷ್ಟನೋ 1
ಊಧ್ರ್ವ ಪುಂಡ್ರಗಳ ಧರಿಸೀ ಶಿರದಲ್ಲಿಪದ್ಮಾಕ್ಷಿ ತುಲಸಿ ಮಾಲೆ ಹಾಕಿಮಧ್ವ ವಲ್ಲಭನೆನ್ನದಾ ಆ ವಿಪ್ರಶುದ್ಧ ಚಾಂಡಾಲನೆನ್ನೋ 2
ಪಂಚ ಮುದ್ರೆಗಳ ಧರಿಸೀ ಲೋಕ ಪ್ರ-ಪಂಚಕ್ಕೆ ದಾಸನೆನಿಸೀಪಂಚ ಭೇದವು ತಿಳಿಯದಾ ಆ ವಿಪ್ರಪಂಚ ಮಹಾ ಪಾತಕಿಯೋ3
ನಾರದಾನೆಂಬವನನೂ ಕುಲದಲ್ಲಿಆರೆಂದು ತಿಳಿಯೊ ನೀನು ನಮ್ಮನಾರಾಯಣನ ಸ್ಮರಿಸಲು ನೀಚ್ಯೋನಿಮೀರಿ ಸುರಮುನಿಯಾದನೋ 4
ವಿದುರ ವಾಲ್ಮೀಕರ ನೋಡು ಅವರ ತುದಿಮೊದಲು ನೀ ತಿಳಿದು ನೋಡು ನಮ್ಮಮದನನಯ್ಯನ ಭಜಿಸಲು ಅವರೆಲ್ಲಸದಮಲಾರಾದುದರಿಯಾ 5
ಜಾತಿ ಕಾರಣವಲ್ಲವೋ ಶ್ರೀ ಹರಿಗೆಭೂತಿ ಕಾರಣವಲ್ಲವೋ ||ಸ್ವಾತಂತ್ರ್ಯವನ್ನು ಮರೆದು ಶ್ರೀ ಹರಿಯಪ್ರೀತ್ಯಾಗಲೆನ್ನಬೇಕೋ 6
ಅನ್ಯ ಕರ್ತೃತ್ವ ಮರೆದು ಶ್ರೀ ಹರಿಗೆನಿನ್ನ ನಿನ್ನವನೆಂದಡೇತನ್ನ ದಾಸ್ಯವನೆ ಇತ್ತು ನಮ್ಮ ಮೋ-ಹನ್ನ ವಿಠ್ಠಲ ಸಲಹುವಾ
***
No comments:
Post a Comment