Sunday 1 August 2021

ನಿನ್ನ ಪಾದವ ನಂಬಿ ಅನ್ಯರಾಶ್ರಯವ್ಯಾಕೆಚನ್ನ ಗುರು ವಿಜಯರಾಯ ankita mohana vittala vijayadasa stutih

 ..

ನಿನ್ನ ಪಾದವ ನಂಬಿ ಅನ್ಯರಾಶ್ರಯವ್ಯಾಕೆಚನ್ನ ಗುರು ವಿಜಯರಾಯ ಪ


ಇನ್ನೇನು ಯಿನ್ನೇನು ಯೆನ್ನ ಕುಲಕೋಟಿ ಪಾ-ವನ್ನವಾದುದು ನಿಶ್ಚಯಾ ಜೀಯ ಅ.ಪ.


ಪಂಚ ಮಹ ಪಾತಕರೊಳಗೆ ಮೂರನೆ ಕಕ್ಷಿಕಾಂಚನ ದ್ರೋಹಿ ನಾನು ಯೆನ-ಮುಂಚೆ ಬಂದಾಗ ಕೈ ಬಿಡದೆ ಪ್ರಾ-ಪಂಚವನೆ ಬಿಡುಯೆಂದು ನುಡಿದೆ ಯೆನ್ನಸಂಚಿತಾಗಮವೆಲ್ಲ ತೊಡದೆ ಯೆನ್ನ ||ಕಂಚು ಕಟ್ಬುಳಿ ಕಲ್ಲೊತ್ತಿನ ಮೇಣ್ ಕಾಶಿಗೆ ||ಪಂಛೇರು ಮಾಡಿ ನಡದೆ ಬಿಡದೆ 1

ವ್ಯಾಸರಾಯರ ಗುಹೆಯೊಳಗೆ ನವ ಸಂ-ನ್ಯಾಸಿಗಳ ಸಮಕ್ಷಮದಲಿ ಯೆನ್ನದಾಸನಾಗೆನುತ ನೀ ಪೇಳ್ದೆ ಯೆನ್ನವಾಸಿ ಪಂಥಗಳೆಲ್ಲ ತಾಳ್ದೆವೊಲಿದುದೋಷಾಂಕುರಗಳೆಲ್ಲ ಸೀಳ್ದೆ ಸ್ವಾಮಿ ||ಶ್ರೀಶ ಸರ್ವೋತ್ತಮನೆಂದು ನೀ ಪೇಳಿ ಸಂ-ತೋಷದಿಂದೆನ್ನ ಪೊರದೆ ಬಿಡದೆ 2

ರಾಜಾಧಿರಾಜರು ಬಂದು ಪ್ರಾರ್ಥಿಸಲು ಗುರುರಾಜ ನೀನವರ ಮನೆಗೆ ಪೋಗಿ ದಿವ್ಯಭೋಜನವ ಮಾಡಿ ಫಲಗರೆವೆ ನಿತ್ಯರಾಜಧಾನಿಗೆ ಪೋಗಿ ಬರುವೆ ಉಡುರಾಜನಂದದಿ ನಿತ್ಯ ಮೆರೆವೆ ಯೆನ್ನ ||ಪೂಜಾ ಫಲವೆಂದು ಆವಾಗೆ ನಿನ್ನ ಪದರಾಜೀವ ಧ್ಯಾನಿಸುವೆ ಸ್ವಾಮಿ 3

ಪುಶಿಯು ಜಗವೆಲ್ಲ ದೈವವು ತಾನೆನುತಅಸಮ ವೇದ ಪೌರುಷ ಯೆಂಬಂಥಭಸುಮಧಾರಿಯನೆ ಕರದೆ ಅವನಅಸುರ ಭಾವವನೆಲ್ಲ ಮುರಿದೆ ನಮ್ಮಬಿಸಜಾಕ್ಷ ಪರನೆಂದು ಪೊರೆದೆ ಸ್ವಾಮಿ ||ಎಸೆವ ದ್ವಾದಶನಾಮ ಪಂಚಮುದ್ರಿಯನಿಡಿಸಿನಸುನಗುತಲವನ ಪೊರದೆ ಬಿಡದೆ 4

ಎನ್ನೊಬ್ಬನ ಪಾಲಿಸಿದ್ದು ಬಲು ಗುರುತಲ್ಲಚಿನ್ನ ವರದನ ಸಂತತಿಯೆಲ್ಲನಿನ್ನ ಪಾಲಿಗೆ ಬಿಟ್ಬದ್ದಲ್ಲ | ವಾಕು |ಅನ್ಯಥಾ ಮಾಡುವುದು ಸಲ್ಲ ಮೋ-ಹನ್ನ ವಿಠ್ಠಲ ಯಿದನು ಬಲ್ಲ ಮುನ್ನಾಪನ್ನಗಶಯನ ಪ್ರಸನ್ನನಾದದಕೆ ಯಿದುಎನ್ನ ಮನೋರಥ ಸಿದ್ಧಿಯೊ ಸ್ವಾಮಿ 5

***


No comments:

Post a Comment