Saturday 10 July 2021

ಬಂದೆ ಭೋಗಾಪುರಿಯ ತಂದೆ ಹನುಮಾ ankita janardhana vittala BANDE BHOGAPURIYA TANE HANUMA

Audio by Vidwan Sumukh Moudgalya


 ಶ್ರೀ ತಿರುಮಲದಾಸಾರ್ಯ ವಿರಚಿತ 

( ಜನಾರ್ದನವಿಠಲಾಂಕಿತ )


 ರಾಗ : ಮಧ್ಯಮಾವತಿ   ಆದಿತಾಳ 


ಬಂದೆ ಭೋಗಾಪುರಿಯ ತಂದೆ ಹನುಮಾ

ಮಂದಜನರನ ಪೊರೆಯಲಿಂದು ದಯದಿಂದಾ॥ಪ॥


ಏನೋ ನಿನ್ನಯ ಕೃಪೆ ಆನು ಅರಿತವನಲ್ಲ

ಮಾನಸದಿ ನೆನಿಸುವರ ಮಾನನಿಧಿಯೇ

ಧೇನು ವತ್ಸವನು ಪೊರೆವ ಪರಿಯಲ್ಲಿ ಭಕುತರಿಗೆ

ಸಾನುಕೂಲನಾಗಿ ಸಾರ ಹೃದಯನೆ ಇಂದೂ॥೧॥


ಮರ್ತ್ಯ ಲೋಕಾದವರು ಮಾಡಿದಾ ಅಪರಾಧ

ವರ್ತಿಗೆ ತಾರದೇ ವದದು ಅದನಾ

ಮೂರ್ತಿವಂತದಲ್ಲಿ ಮುಂಭಾಗದಲ್ಲಿ ನಿಂದು

ರಾತ್ರಿ ಹಗಲು ಬಿಡದೆ ಪೊರೆವೆನೆನುತಲಿಂದೂ॥೨॥


ಉಪ್ಪುಹುಳಿ ಮಾಡಿದ್ದು ವಪ್ಪು ಹಚ್ಚಿಕೊಂಡು

ತಪ್ಪದಲೆ ಒಡನೊಡನೆ ಆಡುತಲಿದ್ದು

ಅಪ್ಪ ಜನಾರ್ದನವಿಠಲೇಶನ ಪಾದ-

ಕರ್ಪಿತವಗೈಸಿ ಆನಂದ ಕೊಡುವೇನೆನುತ॥೩॥

****

 ಭೋಗಾಪುರ ಶ್ರೀ ಪ್ರಾಣದೇವರ ಸ್ತೋತ್ರ ಪದ 


ಹನೂಮಾನಂಜನಾ ಸೂನುರ್ವಾಯುಪುತ್ರೋ ಮಹಾಬಲಃ।

ರಾಮೇಷ್ಟಃ ಫಲ್ಗುನ ಸಖಃ ಪಿಂಗಾಕ್ಷೋಮಿತ ವಿಕ್ರಮಃ॥

ಉದಧಿಕ್ರಮಣಶ್ಚೈವ ಸೀತಾ ಸಂದೇಶಹಾರಕಃ।

ಲಕ್ಷ್ಮಣ ಪ್ರಾಣದಾತಾ ಚ ದಶಗ್ರೀವಸ್ಯ ದರ್ಪಹಾಃ॥

ದ್ವಾದಶೈತಾನಿ ನಾಮಾನಿ ಕಪೀಂದ್ರಸ್ಯ ಮಹಾತ್ಮನಃ।

ಸ್ವಾಪಕಾಲೇ ಪ್ರಭೋಧೇ ಚ ಯಾತ್ರಾಕಾಲೇ ಚ ಯಃ ಪಠೇತ್॥

ನ ಭಯಂ ವಿದ್ಯತೇ ತಸ್ಯ ಸರ್ವತ್ರ ವಿಜಯೀ ಭವೇತ್॥

****


No comments:

Post a Comment