ತಂದೆ ಮುದ್ದುಮೋಹನ ದಾಸರೆನಿಸಿದ
ತಂದೆ ಶ್ರೀ ಗುರುವರ್ಯರೆ ಪ.
ತಂದಿರಿ e್ಞÁನಾಂಬುಧಿ ಮಧ್ಯದೊಳಗೀಗ
ತಂದಿಹ ಎನ್ನ ದುಷ್ಕರ್ಮವ ತರಿಯುತ ಅ.ಪ.
ಬಂದೆನು ಭವದೊಳು ನಿಂದೆನು ತಾಪದಿ
ಮಂದಮತಿಯಿಂದ ಜಗದೊಳಗೆ
ಕುಂದುಗಳೆಣಿಸದೆ ಬಂದು ದರ್ಶನವಿತ್ತು
ಕಂದನಂದದಿ ದಯದಿಂದ ಪಾಲಿಸಿದಿರಿ 1
ಯೋಗಿಗಳೆನಿಸಿದ ಭೋಗಿವರರೆ ಶಿರ
ಬಾಗಿ ನಮಿಸುವೆ ಈಗ ನಾನು
ನಾಗಶಯನನ ತೋರಿ ಬೇಗ ಪಾಲಿಸಿರಿ
ಪೋಗುತಿದೆ ದಿನ ಜಾಗು ಮಾಡದೆ ಮುನ್ನ 2
ನರಸಿಂಹನನು ಹೃತ್ಸರಸಿಜದಲಿ ಕಾಂಬ
ಗುರುವರ ನಿಮ್ಮಂಘ್ರಿಗೆರಗುವೆನು
ಪರಿಪರಿ ತಾಪವ ಹರಿಸಿ ಎನ್ನ ಮನ
ಹರಿಗುರು ಚರಣದೊಳಿರುವಂತೆ ಕೃಪೆಗೈದೆ 3
ಪರಮ ಗುರುಗಳಿಗೆ ಪ್ರಿಯರಾಗಿ ಇಳೆಯೊಳು
ಚರಿಸಿ ಸುಜನರ ಪಾವನಗೈದು
ಪರಮ ಗುಪ್ತದಿಂದ ಹರಿಯ ಧ್ಯಾನಿಸುತ್ತ
ಧರೆಯೊಳಗಿರುವ ಪಾಮರರ ಮೋಹಿಸುವಂಥ 4
ಕಷ್ಟವ ಬಿಡಿಸಿರಿ ತುಷ್ಟರಾಗಿ ನೀವೆ
ಇಷ್ಟು ಪರಿಯಿಂದ ಬೇಡಿಕೊಂಬೆ
ಇಷ್ಟದೈವರು ನೀವೆ ಶ್ರೇಷ್ಠ ಶ್ರೀ ಗೋಪಾಲ
ಕೃಷ್ಣವಿಠ್ಠಲನ ಉತ್ಕøಷ್ಟದಿ ತೋರಿರಿ5
****
No comments:
Post a Comment