ಆನಂದಾದ್ರಿ ಕ್ಷೇತ್ರದಲ್ಲಿ ಆನಂದವ ಕಂಡೆ ಪ.
ಆನಂದ ಕಂದನ ಗುಣಗಳ
ಆನಂದನಿಲಯರು ಪೇಳಲು ಅ.ಪ.
ಆನಂದವಾಯಿತು ಮನಕೆ
ಆನಂದಗೋಕುಲದೊಡೆಯನು
ಆನಂದತೀರ್ಥರ ಕರದಲಿ
ಆನಂದ ಸೇವೆಯ ಕೊಳುತಿರೆ 1
ಆನಂದಾದ್ರಿ ಶಿಖರದಲ್ಲಿ
ಸ್ವಾನಂದ ಸೂಚನೆ ತೋರಲು
ಏನೆಂದು ಬಣ್ಣಿಸಲಿನ್ನು
ಸ್ವಾನಂದರು ಶ್ರೀ ಗುರು ದಯದಿ 2
ಆನೆಂದರೆ ಶಿಕ್ಷಿಸುವನು ಹರಿ
ನೀನೆಂದರೆ ರಕ್ಷಿಸುವನು ದೊರಿ
ಆನಂದವನ ತರುವಂತೆ
ಆನಂದಭೀಷ್ಟವ ಕೊಡುವ 3
ಆನಂದe್ಞÁನಪೂರ್ಣ
ಆನಂದ ನಿತ್ಯರೂಪ
ಆನಂದ ಗುಣಪೂರ್ಣ ನಿ-
ತ್ಯಾನಂದ ಭಕ್ತರಿಗೀವ4
ಗೋಪಾಲಕೃಷ್ಣವಿಠಲ
ನೀ ಪರಮದೈವವೆನಲು
ತಾಪವÀ ಭವಹರಿಸಿ
ಕಾಪಾಡೊ ಹರಿಯ ಲೀಲೆ 5
****
ಗೋಪಾಲ ಕೃಷ್ಣ ವಿಠ್ಠಲ ಅಂಕಿತದ ಅಂಬಾಬಾಯಿ ಅವರ ರಚನೆ
ಆನಂದಾದ್ರಿ ಕ್ಷೇತ್ರದಲ್ಲಿ
ಆನಂದವ ಕಂಡೆ
ಪ.
ಆನಂದ ಕಂದನ ಗುಣಗಳ
ಆನಂದನಿಲಯರು ಪೇಳಲು
ಅ.ಪ.
ಆನಂದವಾಯಿತು ಮನಕೆ
ಆನಂದಗೋಕುಲದೊಡೆಯನು
ಆನಂದತೀರ್ಥರ ಕರದಲಿ
ಆನಂದ ಸೇವೆಯ ಕೊಳುತಿರೆ
1
ಆನಂದಾದ್ರಿ ಶಿಖರದಲ್ಲಿ
ಸ್ವಾನಂದ ಸೂಚನೆ ತೋರಲು
ಏನೆಂದು ಬಣ್ಣಿಸಲಿನ್ನು
ಸ್ವಾನಂದರು ಶ್ರೀ ಗುರು ದಯದಿ
2
ಆನೆಂದರೆ ಶಿಕ್ಷಿಸುವನು ಹರಿ
ನೀನೆಂದರೆ ರಕ್ಷಿಸುವನು ದೊರಿ
ಆನಂದವನ ತರುವಂತೆ
ಆನಂದಭೀಷ್ಟವ ಕೊಡುವ
3
ಆನಂದ ಜ್ಞಾನಪೂರ್ಣ
ಆನಂದ ನಿತ್ಯರೂಪ
ಆನಂದ ಗುಣಪೂರ್ಣ ನಿ-
ತ್ಯಾನಂದ ಭಕ್ತರಿಗೀವ
4
ಗೋಪಾಲಕೃಷ್ಣವಿಠಲ
ನೀ ಪರಮದೈವವೆನಲು
ತಾಪವÀ ಭವಹರಿಸಿ
ಕಾಪಾಡೊ ಹರಿಯ ಲೀಲೆ
5
***
No comments:
Post a Comment