Sunday, 27 June 2021

d ತಾರತಮ್ಯ ಭಜನೆ ಕ್ರಮ taratamya bhajana krama and one list

 

ತಾರತಮ್ಯ ಭಜನೆ
ಭಜನಾ ಕ್ರಮ ಎಂಬುದು ಒಂದು ಮುಖ್ಯವಾದ ಅಂಶ. ಮನಸ್ಸಿಗೆ ಬಂದ ಹಾಗೆ ಸುಮ್ಮನೆ ಸ್ತುತಿಗಳನ್ನು ಮಾಡುವುದು ನಮ್ಮ ಸಂಪ್ರದಾಯ ಪ್ರಕಾರ ನಿಷಿದ್ಧ. ಹಾಗಾಗಿ ಎಲ್ಲರೂ ತಾರತಮ್ಯ ರೀತ್ಯ ಭಜನೆ ಮಾಡಬೇಕು. ಮತ್ತು ಎಲ್ಲ ದೇವರನಾಮಗಳನ್ನು ಪೂರ್ತಿಯಾಗಿ ಹಾಡಬೇಕು. ಅಂಕಿತ ಇರುವ ಪದ್ಯಗಳನ್ನೇ ಹಾಡಬೇಕು.  ತಾರತಮ್ಯ  ಕ್ರಮ ಯಾವುದು ಇಲ್ಲಿ ತಿಳಿಯಿರಿ.  

ಏಕಾದಶಿ ತಾರತಮ್ಯ ಭಜನೆ - as per uttaradi mutt

ಆರೋಹಣ ಕ್ರಮ

ದಾಸರ ತಾರತಮ್ಯ

೧)ಶೇಷದಾಸರು
೨)ಜಗನ್ನಾಥಸಾಸರು
೩)ಗೋಪಾಲದಾಸರು
೪)ವಿಜಯದಾಸರು
೫)ಪುರಂದರದಾಸರು

ಯತಿಗಳ ತಾರತಮ್ಯ
೧)ಸತ್ಯಪ್ರಮೋದತಿರ್ಥರು
೨)ಸತ್ಯಜ್ಞಾನತಿರ್ಥರು
೩)ವಿಷ್ಣುತಿರ್ಥರು
೪)ಸತ್ಯಭೋದರು
೫)ರಾಯರು
೬)ರಘೂತ್ತಮ ತಿರ್ಥರು
೭)ವಾದಿರಾಜರು
೮)ವ್ಯಾಸರಾಜರು
೯)ಶ್ರೀಪಾದರಾಜರು
೧೦)ಟೀಕಾರಾಯರು
೧೧)ಮಧ್ವಾಚಾರ್ಯರು

ದೇವತಾ ತಾರತಮ್ಯ
೧)ಗಣಪತಿ
೨) ಪಾರ್ವತಿ*
೩)ರುದ್ರದೇವರು
೪)ಗರುಡ, ಶೇಷ
೫)ಸರಸ್ವತಿ, ಭಾರತಿ
೬)ಪ್ರಾಣದೇವರು
೭)ಲಕ್ಷ್ಮೀದೇವಿಯರು
೮)ವೇದವ್ಯಾಸರು
೯)ದೇವರ ಹಾಡುಗಳು.
   ೧)ದೇವರನ್ನ ಕಾಣುವ ಹಂಬಲ
   ೨)ದೇವರನ್ನ ಕರೆಯುವುದು
   ೩)ದೇವರು ಬಂದಿದ್ದು
   ೪)ದೇವರನ್ನ ಕಂಡಿದ್ದು
   ೫)ದೇವರು ನಿಂತಿದ್ದು
   ೬)ದೇವರ ರೂಪ ಚಿಂತನೆ
   ೭)ದೇವರಲ್ಲಿ ಶರಣಾಗತಿ(ಆತ್ಮ ನೀವೆದನೆ)
   ೮)ದೇವರ ದಶಾವತಾರ ಹಾಡುಗಳು
   ೯)ದೇವರ ನಿಂದಾಸ್ತುತಿ
೧೦)ವೈರಾಗ್ಯದ ಹಾಡುಗಳು
೧೧)ದೇವರ ಲಾಲಿ ಹಾಡು
ಎಲ್ಲಾ ಹಾಡುಗಳನ್ನು ಪೂರ್ಣ ಹಾಡಬೇಕು
****

 taratamya bhajane - one list

 Tharathamya bhajane haadughala list

1) Sathatha Ghananatha-

2) Guru Madhwa Rayarighe

3) Mangala Charana Sandhi

4) Jayaghalu Aghali

5) Dasana maadiko

6) Sri Jagannatha Dasara mele Haadu

7) Sri Gopala Dasara mele Haadu 

8) Sri Vijaya Dasara mele Haadu

9) Sri Purandara Dasara mele Haadu

10) Sri Raghavendra Theerthara mele Haadu

11) Sri Vadhirajara  Haadu

12) Sri Vyasarajara  Haadu

13) Sri Sripadarajara haadu 

14)Sri Jayatheerthara Haadu 

15)Sri Madhwacharyara haadu

16) Ganapathi

17) Parvathi Devi

18) Sri Tulasi Devi

19)Sri Rudra Devaru

20)Sri Saraswathi Devi

21) Pranedevaru(1)

22) Pranedevaru (2)

23) Lakshmi Devi (1)

24) Lakshmi Devi (2)

25)Endhighahudho ninna darshana

26) Devarannu Kariyuva Haadu

27) Devaru Bandha Haadu

28) Devaru bandhu ninthidhu

29) Devarannu Kandidhu

30) Devara naama(1)

31) Devara naama (2)

32) Devara naama (3)

33) Devara naama (4)

34) Devara naama ( 5)

35) Harivaana Seve

36 )

Nandhenadhu Swamy ( Samarpane haadu)

37) indhina  vaara Subha Vaara

38) kayenvaacha Sloka

***


one list of songs

Satya Jagathidu Pancha Bhedavu – Shree Purandara Dasaru


ಸತ್ಯ ಜಗತ್ತಿದು ಪಂಚ ಭೇದವು | ನಿತ್ಯಶ್ರೀ ಗೋವಿಂದನ ||ಪ||


ಕೃತ್ಯವರಿತು ತಾರತಮ್ಯದಿ ಕೃಷ್ಣ ನಧಿಕೆಂದು ಸಾರಿರೈ || ಅ.ಪ.| |


ಜೀವ ಈಶಗೆ ಭೇದ | ಸರ್ವತ್ರ | ಜೀವ ಜೀವಕೆ ಭೇದವು ||


ಜೀವ ಜಡ ಜಡ ಜಡಕೆ ಭೇದ | ಜೀವ ಜಡ ಪರಮಾತ್ಮಗೆ II ೧||


ಮಾನುಷೋತ್ತಮಗಧಿಪ ಕ್ಷಿತಿಪರು | ಮನುಜ ದೇವಗಂಧರ್ವರು ||


ಜ್ಞಾನಿ ಪಿತ್ರಾ ಜಾನಕರ್ಮಜ | ದಾನವಾರಿ ತತ್ವಾತ್ಮರು I| 2 |I


ಗಣಪ ಮಿತ್ರರು ಸಪ್ತ ಋಷಿಗಳು | ವನ್ನಿನಾರದವರುಣನು ||


ಇವಜ ಸಮ ಚಂದ್ರ ಸೂರ್ಯರು | ಮನುಸತಿಯು ಹೆಚ್ಚು ಪ್ರವಹನು ||೩ ||


ದಕ್ಷ ಸಮ ಅನಿರುದ್ಧ ಗುರುಶಚಿ | ರತಿ ಸ್ವಯಂ ಭುವ ರಾಲ್ವರು ||


ಕಕ್ಷ ಪ್ರಾಣನಿಗಿಂತ ಕಾಮನು ಕಿಂಚಿದಥಿಕನು ಇಂದ್ರನು || 4 ||


ದೇವೇಂದ್ರನಿನಿಂದಧಿಕ ಮಹರುದ್ರ | ದೇವ ಸಮಶೇಷ ಗರುಡರು


ಕೇವಲಧಿಕರು ಶೇಷ ಗರುಡಗೆ ದೇವಿಭಾರತಿ ಸರಸ್ವತಿ ॥೫॥


ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೇ ಬ್ರಹ್ಮರು |


ವಾಯು ಬ್ರಹ್ಮಗೆ ಕೋಟಿ ಗುಣದಿಂದ ಅಧಿಕ ಶಕ್ತಳು ಶ್ರೀ ರಮಾ ॥೬॥


ಅನಂತ ಗುಣದಿಂಲಕುಮಿಗಿಂತ | ಅಧಿಕ ಪುರಂದರ ವಿಠಲನು ||


ಘನ ಸಮರು ಇವಗಿಲ್ಲ ಜಗದೊಳು ಹನುಮ ಹೃತ್ಪದ ವಾಸಿಗೆ I೭॥


Satya jagatidu panchabhedavu nitya shri govindana || pa ||

krutyavaritu taaratamyadi krushnanadhikendu saarirai || A. pa||


jiva Ishage bheda sarvatra jiva jivake bhedavu

jiva jadake jadajadake bheda jivajada paramaatmage | 1 |


maanushottamaradhika kshitiparu manujadeva gandharvaru

jjaanapitraajaana karmaja ukta Shesha Shatastaru | 2 |


ganapamitrauu saptarushigalu vahni naarada varunaru

inajage sama chandra suryaru manusuteyu hechchu pravahanu |3|


daksha sama aniruddha shachi guru rati svayambhuvaraarvaru

praanaginda adhika kaamanu kinchidadhikanu indranu |4|


deva indrage adhika maharudra – deva sama sheshagarudaru

kevala rudra shesha garudage devi hechchu sarasvati |5|


vaayuvige samarilla jagadolu vaayudevare brahmaru

vaayubrahmage koti gunadindadhika shaktalu shriramaa |6|


ananta gunagalindadhika lakumige Adi purandaravithalanu

Ganaru samaru illa jagadolu hanumahrutpadmavaasige |7|


Shree Gananatha Sindoora – Shree Purandara Dasaru


ಶ್ರೀ ಗಣನಾಥ ಸಿಂಧುರ ವರ್ಣ

ಕರುಣ ಸಾಗರ ಕರಿವದನ ||ಪ.||


ಲಂಬೋದರ ಲಕುಮಿಕರ

ಅಂಬಾಸುತ ಅಮರ ವಿನುತ ||1||


ಸಿದ್ಧ ಚಾರಣ ಗಣ ಸೇವಿತ

ಸಿದ್ಧಿ ವಿನಾಯಕ ತೇ ನಮೋ ನಮೋ ||೨||


ಸಕಲ ವಿದ್ಯಾ ಆದಿ ಪೂಜಿತ

ಸರ್ವೋತ್ತಮ ತೇ ನಮೋ ನಮೋ ||೩||


shree gaNanatha sindhura varNa

karuNa sagara Kari vadana || pa ||


Lambodara lakumikara

ambaa suta amara vinuta || 1 ||


siddha chaarana gaNa sevita

siddhi vinayaka te namo namo || 2||


sakala vidya adi poojita

sarvotama te namo namo || 3||


Kayo Shree Narashima – Shree Gopala Vittala Dasaru


ಕಾಯೋ ಶ್ರೀ ನಾರಸಿಂಹ ಕಾಯೋ ||ಪ||


ಕಾಯೋ ಶ್ರೀ ನಾರಸಿಂಹ ತ್ರಿಯಂಬಕಾದ್ಯಮರೇಶ


ಭಯ ಅಂಧ ತಿಮಿರ ಮಾರ್ತಾಂಡ ಶ್ರೀ ನಾರಸಿಂಹ ||ಅ ಪ||


ಘೋರ ಅಕಾಲಮೃತ್ಯು ಮೀರಿಬರಲು ಕಂಡು


ಧೀರ ನೀ ಬಿಡಿಸದಿನ್ಯಾರೊ ಶ್ರೀ ನಾರಸಿಂಹ ||೧||


ಭೀಷಣನೆ ಸುಭದ್ರ ದೋಷ ಮೃತ್ಯುಗೆ ಮೃತ್ಯು


ಸುಷುಮ್ನಾನಾಡಿಸ್ಥಿತವಿಭುವೆ ಶ್ರೀ ನಾರಸಿಂಹ ||೨||


ಜ್ಞಾನರಹಿತನಾಗಿ ನಾ ನಿನ್ನ ಮರೆತರೆ


ನೀನೂ ಮರೆತದ್ಯಾಕೆ ಪೇಳೊ ಶ್ರೀ ನಾರಸಿಂಹ ||೩||


ಪ್ರಬಲೋತ್ತಮನೆನಿಸಿ ಅಬಲರ ಕಾಯದಿರೆ


ಸಬಲರು ಕಂಡು ಮೆಚ್ಚುವರೆ ಶ್ರೀ ನಾರಸಿಂಹ ||೪||


ಪಾಲಮುನ್ನೀರಾಗರ ಪದುಮೆ ಮನೋಹರ


ಗೋಪಾಲವಿಠಲ ಜಗತ್ಪಾಲ ಶ್ರೀ ನಾರಸಿಂಹ ||೫||


kaayO shrI naarasiMha kaayO ||pa||


kaayO shrI naarasiMha triyaMbakaadyamarEsha


bhaya aMdha timira maartaaMDa shrI naarasiMha ||a pa||


ghOra akaalamRutyu mIribaralu kaMDu

dhIra nI biDisadinyaaro shrI naarasiMha ||1||


bhIShaNane subhadra dOSha mRutyuge mRutyu

suShumnaanaaDisthitavibhuve shrI naarasiMha ||2||


j~jaanarahitanaagi naa ninna maretare

nInU maretadyaake pELo shrI naarasiMha ||3||


prabalOttamanenisi abalara kaayadire

sabalaru kaMDu meccuvare shrI naarasiMha ||4||


paalamunnIraagara padume manOhara

gOpaalaviThala jagatpaala shrI naarasiMha ||5||


Endu Kambeno – Shree Prasanna Venkata Dasaru


ಎಂದು ಕಾಂಬೆನೊ ಎನ್ನ ಸಲಹುವ ತಂದೆ ಉಡುಪಿಯ ಜಾಣನಾ|

ಮಂದಹಾಸ ಪ್ರವಿಣನಾ ಇಂದಿರಾ ಭೂರಮಣನಾ||


ದೇವಕಿಯ ಜಠರದಲಿ ಬಂದನ ಆವ ಪಳ್ಳಿಲಿ ನಿಂದನಾ|

ಮಾವ ಕಂಸನ ಕೊಂದನಾ ಕಾವನಯ್ಯ ಮುಕುಂದನಾ||೧||


ಕಢಲ ದಡ ದೋಳೆಸೆವ ರಂಗನ ಕಡಗೋಲ್ನೆಣನ ಪಿಡಿದನಾ|

ಮೃಡ ಪುರಂದರ ರೊಡೆಯನಾ ಈರಡಿಗಳಲಿ ಶಿರ ವಿಡುವೆನಾ||೨||


ಪೂರ್ಣ ಪ್ರಜ್ಞರಿ ಗೊಲಿದು ದ್ವೊರಕೆ ಮಣ್ಣಿನೊಳ ಪ್ರಕಟಿಸಿದನಾ|

ಭವಾಣಕೆ ಪ್ಲವನಾದನಾ ಪ್ರಸನ್ನ ವೆಂಕಟ ಕೃಷ್ಣನಾ||೩||


Endu kāmbeno enna salahuva tande uḍupiya jāṇanā|


mandahāsa praviṇanā indirā bhūramaṇanā||


dēvakiya jaṭharadali bandana āva paḷḷili nindanā|


māva kansana kondanā kāvanayya mukundanā||1||


kaḍhala daḍa dōḷeseva raṅgana kaḍagōlneṇana piḍidanā|


mr̥ḍa purandara roḍeyanā īraḍigaḷali śira viḍuvenā||2||


pūrṇa prajñari golidu dvorake maṇṇinoḷa prakaṭisidanā|


bhavāṇake plava nādanā prasanna veṅkaṭa kr̥ṣṇanā||3||


Madhvamtargata vedavyasa kayo – Shree Vadirajaru


ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ ||ಪ||


ಶ್ರದ್ಧೆಯಿಂದಲಿ ನಿನ್ನ ಭಜಿಸುವ ಭಕುತರಿಗೆ ಬುದ್ಧ್ಯಾದಿಗಳ ಕೊಟ್ಟುದ್ಧರಿಸೊ ದೇವರ ದೇವ ||ಆ.ಪ||


ದ್ವಾಪರದಲಿ ಒಬ್ಬ ಮುನಿಪ ತನ್ನಕೋಪದಿಂದಲಿ ಕೊಟ್ಟ ಶಾಪ


ಶಾಪಿಸಲು ಜ್ಞಾನ ಲೋಪ‌ ವಾಗೆ ಅಪಾರ ತತ್ವ ಸ್ವರೂಪ


ಶ್ರೀಪತಿಯೆ ಕಾಯೆಂದು ಮೊರೆಯಿಡೆ ಪಾಪ ವಿರಹಿತಳಾದ ಯಮುನೆಯ


ದ್ವೀಪ ದಲಿ ಅಂಬಿಗರ ಹೆಣ್ಣಿನ ರೂಪಗೊಲಿದ ವನಲ್ಲಿ ಜನಿಸಿದೆ I೧II


ವೇದವಾದಿಗಳೆಲ್ಲ ಕೆಡಲು ತತ್ವವಾದಿ ಜನರು ಬಾಯಿ ಬಿಡಲು


ಮೇದಿನಿ ಸುರರು ಮೊರೆಯಿಡಲು ನಾನಾ ವೇದ ವಿಭಾಗ ವಿರಚಿಸಲು


ಮೋದದಿಂದ ತದರ್ಥ ಭೋಧಕ ವಾದ ಸೂತ್ರ ಪುರಾಣ ವಿರಚಿಸಿ


ವಾದಿಗಳ ನಿರ್ವಾದ ಮಾಡಿದ | ಸಾಧು ವಂದಿತ ಬಾದರಾಯಣ ||೨||


ಸುಮತಿಗಳಿಗೆ ನೀ ಬೋಧಿಸಿದೆ ಮಿಕ್ಕ ಕುಮತಿಗಳನ್ನು ನೀ ಛೇದಿಸಿದೆ


ಕ್ರಿಮಿಯಿಂದ ರಾಜ್ಯವಾಳಿಸಿದೆ ಜಗತ್‍ ಸ್ವಾಮಿ ಚರ್ಯವ ನೀ ತೋರಿಸಿದೆ


ವಿಮಲ ರೂಪನೆ ಕಮಲ ನಾಭನೆ ರಮೆಯ ಅರಸನೆ ರಮ್ಯ ಚರಿತನೆ


ಮಮತೆಯಲಿ ಕೊಡು ಕಾಮಿತಾರ್ಥವ ನಮಿಸುವೆನು ಹಯವದನ ಮೂರುತಿ


ವಿಮಲ ರೂಪನೆ ಕಮಲ ನಾಭನೆ ರಮೆಯ ಅರಸನೆ ರಮ್ಯ ಚರಿತನೆ


ಮಮತೆಯಲಿ ಕೊಡು ಕಾಮಿತಾರ್ಥವ ನಮಿಸುವೆನು ಹಯವದನ ಮೂರುತಿ||೩||


madhvamtargata vedavyasa kayo suddha murutiye sarvesa ||pa||


sraddheyimdali ninna bajisuva baktarigebuddhyadigala kottuddhariso devaradeva||a.pa||


dvaparadali obba munipa tannakopadimdali kotta shapa


shapisalu jana lopaapara tatvaswarupa


sripatiye kayemdu moreyidepapa virahitaàlada yamuneya


dvipadali ambigara henninarupakkolidavalalli janiside ||1||


vedavadigaàlella kedalu tatvavadijanaru bayi bidalu


medini surarmoreyidalu nalkuveda vibaga rachisalu


modadimda tadartha bodakavada sutra purana racisi


vadagala nirvada madisadhuvamdita badarayana ||2||


sumatigalige ni bodhiside mikkakumatagalannu cediside


krimiyimda rajyavaliside jagatsvami ninemdu toriside


vimalarupane kamalanabanerameya arasane ramya caritane


mamateyali kodu kamitarthavanamisuvenu hayavadanamuruti||3||



Endigahudo Ninna Darshana – Shree Vijaya Dasaru


ಎಂದಿಗಾಹುದೋ ನಿನ್ನ ದರುಶನ || ಪ | |


ಅಂದಿಗಲ್ಲದೇ ಬಂಧ ನೀಗದೋ | | ಅ. ಪ ||


ಗಾನಲೋಲ ಶ್ರೀ ವತ್ಸಲಾಂಛನ |


ದಾನವಾಂತಕ ದೀನ ರಕ್ಷಕ | ೧ |


ಆರಿಗೇ ಮೊರೆ ಇಡಲೊ ದೇವನೇ |


ಸಾರಿ ಬಂದು ನೀ ಕಾಯೋ ಬೇಗನೆ | ೨ |


ಗಜವ ಪೊರೆದೆಯೋ ಗರುಡ ಗಮನನೆ |


ತ್ರಿಜಗ ಭರಿತ ಶ್ರೀ ವಿಜಯ ವಿಠಲ | ೩ |


endigahudo ninna darusana || pa ||


andigallade bandha nigado || a pa||


ganalola sri vatsalancana |


danavantaka dinarakshaka | 1 |


arige more idalo devane |


saribandu ni kayo begane | 2 |


gajava poredeyo garudagamanane |


trijagabarita sri vijaya vithala | 3 ||



Bhagyada Lakshmi Baramma – Shree Purandara Dasaru


ಭಾಗ್ಯದ ಲಕ್ಷ್ಮಿ ಬಾರಮ್ಮಾ


ನಮ್ಮಮ್ಮ ನೀ ಸೌಭಾಗ್ಯ ಲಕ್ಷ್ಮಿ ಬಾರಮ್ಮಾ | ಪ |


ಹೆಜ್ಜೆಯ ಮೇಲೊಂದೆಜ್ಜೆಯ ನಿಕ್ಕುತ  ಗೆಜ್ಜೆ ಕಾಲಿನ ನಾದವ ತೋರುತ


ಸಜ್ಜನ ಸಾಧು ಪೂಜೆಗೆ ವೇಳೆಗೆ


ಮಜ್ಜಿಗೆಯೊಳಗಿನ ಬೆಣ್ಣೆಯಂತೆ | ೧ |


ಕನಕ ವೃಷ್ಟಿಯ ಕರೆಯುತ ಬಾರೆ


ಮನ ಕಾಮನೆಯ ಸಿದ್ಧಿಯ ತೋರೆ


ದಿನಕರ ಕೋಟಿ ತೇಜದಿ ಹೊಳೆಯುವ


ಜನಕರಾಯನ ಕುಮಾರಿ ಬೇಗ | ೨ |


ಅತ್ತಿತ್ತಗಲದೆ ಭಕ್ತರ ಮನೆಯೊಳು


ನಿತ್ಯ ಮಹೋತ್ಸವ ನಿತ್ಯ ಸುಮಂಗಳ


ಸತ್ಯವ ತೋರುತ ಸಾಧು ಸಜ್ಜನರ


ಚಿತ್ತದಿ ಹೊಳೆಯುವ ಪುತ್ಥಳಿ ಗೊಂಬೆ | ೩ |


ಸಂಖ್ಯೆ ಯಿಲ್ಲದ ಭಾಗ್ಯವ ಕೊಟ್ಟು


ಕಂಕಣ ಕೈಯ್ಯ ತಿರುವುತ ಬಾರೆ


ಕುಂಕುಮಾಂಕಿತೆ ಪಂಕಜ ಲೋಚನೆ


ವೆಂಕಟರಮಣನ ಬಿಂಕದ ರಾಣಿ | ೪ |


ಸಕ್ಕರೆ ತುಪ್ಪದ ಕಾಲುವೆ ಹರಿಸಿ


ಶುಕ್ರವಾರದ ಪೂಜೆಯ ವೇಳೆಗೆ


ಅಕ್ಕರೆಯುಳ್ಳ ಅಳಗಿರಿ ರಂಗನ


ಚೊಕ್ಕ ಪುರಂದರ ವಿಠಲ ವಿಠಲನ ರಾಣಿ | ೫ |


bhAgyada lakShmI bArammA nammamma nI sau

bhAgyada lakShmI bArammA || pa||


hejjaya mele hhejjeyanikkuta gejje kAlgaLa dhvaniya madutha

sajjana sAdhu pUjeya vELege majjigeyoLagina beNNeyante || 1 ||


kanaka vrStiya kareyuta bAre mana kAmanaya siddhiya tOrE

dinakara kOTi tEjadi hoLeva janakarAyana kumAri bega || 2 ||


attittalagalade bhaktara maneyali nitya mahOtsava nitya sumangaLa

satyava tOruva sAdhu sajjanara cittadi hoLevA puttaLi bombe || 3||


sankhye illAda bhAgyava koTTu kankaNa kaiya tiruvuta bAre

kunkumAnkite pankaja lOcane venkaTaramaNana binkada rANI || 4 ||


sakkare tuppada kAluve harisi shukravAradha pUjaya vELage

akkareyuLLa aLagiri rangana cokka purandara viThalana rANI || 5 ||


Jaya Kolhapura nilaye


ಜಯ ಕೊಲ್ಹಾಪುರ ನಿಲಯೆ ಭಜಧಿಷ್ಟೇತರ ವಿಲಯೆ

ತವಪಾದೌ ಹೃದಿಕಲಯೆ ರತ್ನರಚಿತ ವಲಯೆ || ಪ||


ಜಯ ಜಯ ಸಾಗರಜಾತೆ ಕುರು ಕರುಣಾಮಯಿಭೀತೆ

ಜಗದಂಬಾಭಿದಯಾತೆ ಜೀವತಿ ತವಪೋತೆ || ೧||


ಜಯ ಜಯ ಸಾಗರಸದನಾ ಜಯ ಕಾಂತ್ಯಾಜಿತ ಮದನಾ

ಜಯ ದುಷ್ಟಾಂತಕ ಕದನಾ ಕುಂದಮುಕುಲರದನಾ ||೨||


ಸುರರಮಣೀ ನುತಚರಣೆ ಸುಮನಃ ಸಂಕಟಹರಣೆ

ಸುಸ್ವರ ರಂಜಿತವೀಣೆ ಸುಂದರ ನಿಜಕಿರಣೆ || ೩||


ಭಜದಿಂದೀವರ ಸೋಮಾ ಭವ ಮುಖ್ಯಾಮರಕಾಮಾ

ಭಯ ಮೂಲಾಲಿವಿರಾಮಾ ಭಂಜಿಕ ಮುನಿಭೀಮಾ ||೪||


ಕುಂಕುಮ ರಂಜಿತಫಾಲೆ ಕುಂಜರ ಬಾಂಧವಲೋಲೆ

ಕಲಧೌತೌಮಲಚೈಲೆ ಕೃಂತಕುಜನಜಾಲೆ ||೫||


ಧೃತ ಕರುಣಾರಸಪೂರೆ ಧನದಾನೊತ್ಸವ ಧೀರೆ

ಧ್ವನಿಲವನಿಂದಿತಕೀರೆ ಧೀರೆದನುಜದಾರೆ ||೬||


ಸುರ ಹೃತ್ಪಂಜರಕೀರಾ ಸುಮಗೇಹಾರ್ಪಿತ ಹಾರಾ

ಸುಂದರ ಕುಂಜವಿಹಾರ ಸುರ ವರ ಪರಿವಾರಾ ||೭||


ವರ ಕಬರೀ ಧೃತ ಕುಸುಮೆ ವರಕನಕಾಧಿಕಸುಷುಮೆ

ವನ ನಿಲಯಾ ದಯಭೀಮೆ ವದನ ವಿಜಿತ ಸೋಮೆ ||೮||


ಮದಲಕ ಭಾಲಸಗಮನೆ ಮಧು ಮಥನಾಲಸ ನಯನೇ

ಮೃದು ಲೋಲಾಕ ರಚನೆ | ಮಧುರ ಸರಸಗಾನೇ ||೯||


ವ್ಯಾಘ್ರಪುರೀವರನಿಲಯೇ ವ್ಯಾಸಪದಾರ್ಪಿತಹೃದಯೆ

ಕುರುಕರುಣಾಮಹಿಸದಯೇ | ವಿವಿಧನಿಗಮಗೇಯೇ ||೧೦||


jaya kolhApura nilaye bajadhiShTetaravilaye


tavapAdau hridikalaye ratna rachita valeye || pa||


jaya jaya sAgarajAte kuru karuNAmayibhIte


jagadambAbhidhyAte jIvati tavapote || 1||


jaya jaya sAgarasadanA jaya kAntyAjita madanA


jaya duShTAntaka kadanA kundamukularadanA ||2||


suraramaNI nutacharaNe sumanaH sankaTaharaNe


suswara ranjitaveeNe sundara nijakiraNe || 3||


bhajadindIvara somA bhava mukhyAmarakAmA


bhaya mUlAlivirAmA bhanjika munibhImA ||4||


kumkuma ranjitafAle kunjara bAndavalole


kaladhautAumalachaile krintakujanajAle ||5||


dhrita karuNArasapUre dhanadAnotsava dhIre


dhvanilavaninditakIre dhIredanujadAre ||6||


sura hrutpanjarakIrA sumagehArpita hArA


sundara kunjavihAra sura vara parivArA ||7||


vara kabarI dhrita kusume varakanakAdhikasuShume


vana nilayA dayabhIme vadana vijita some ||8||


madalaka bhAlasagamane madhu mathanAlasa nayane


mrudulolAlaka rachaNe madhura sarasagAne ||9||


vyAgrapurivaranilaye vyAsapadArpitahrudaye


kurukaruNAmahisadaye vividanigamageye ||10||


Pavamana Pavamana


ಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ

ಭವಭಯಾರಣ್ಯ ದಹನ |ಪ|


ಶ್ರವಣವೆ ಮೊದಲಾದ ನವವಿಧ ಭಕುತಿಯ

ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ|


ಹೇಮ ಕಚ್ಚುಟ ಉಪವೀತ ಧರಿಪ ಮಾರುತ

ಕಾಮಾದಿ ವರ್ಗ ರಹಿತ

ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ

ರಾಮಚಂದ್ರನ ನಿಜದೂತ

ಯಾಮ ಯಾಮಕೆ ನಿನ್ನಾರಾಧಿಪುದಕೆ

ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ

ಈ ಮನಸಿಗೆ ಸುಖಸ್ತೋಮವ ತೋರುತ

ಪಾಮರ ಮತಿಯನು ನೀ ಮಾಣಿಪುದು || 1 ||


ವಜ್ರ ಶರೀರ ಗಂಭೀರ ಮುಕುಟಧರ

ದುರ್ಜನವನ ಕುಠಾರ

ನಿರ್ಜರ ಮಣಿದಯಾ ಪಾರ ವಾರ ಉದಾರ

ಸಜ್ಜನರಘವ ಪರಿಹಾರ

ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು

ಮೂರ್ಜಗವರಿವಂತೆ ಗರ್ಜನೆ ಮಾಡಿದಿ

ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ

ಮಾರ್ಜನದಲಿ ಭವ ವರ್ಜಿತನೆನಿಸೊ || 2 ||


ಪ್ರಾಣ ಅಪಾನ ವ್ಯಾನೋದಾನ ಸಮಾನ

ಆನಂದ ಭಾರತಿ ರಮಣ

ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ

ಜ್ಞಾನಧನ ಪಾಲಿಪ ವರೇಣ್ಯ

ನಾನು ನಿರುತದಲಿ ಏನೇನೆಸಗಿದೆ

ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ

ಪ್ರಾಣನಾಥ ಸಿರಿವಿಜಯವಿಠಲನ

ಕಾಣಿಸಿ ಕೊಡುವದು ಭಾನು ಪ್ರಕಾಶ || 3 ||


pavamAna pavamAna jagada prANa

saMkaruShaNa bhava BayAraNya dahana | pa |



SravaNave modalAda navavidha Bakutiya

tavakadiMdali koDu kavijanapriyA | apa |


hEma kacchUTa upavIta dharipa mArutha

kAmAdivargarahitA


vyOmAdi sakala vyAvputA nirBItA

rAmachaMdrana nijadUta


yAma yAmake ninAradhipudake

kAmipe enagidu nEmisi pratidina manasige suKastOmava

tOruta pAmaramatiyanu nImANipudO || 1 ||


vajra SarIra gaMBIra mukuTadhara durjanavanakuThAra

nirjaramaNi dayA pArAvArA udAra sajjanaraGaparihAra

arjunagolidaMdu dhvajavAnisi niMdu mUrjagavarivaMte

garjane mADidi hejje hejjege nin abja pAdadoLi mUrjagadali

Bavavarjita nenisO || 2 ||


prANa apAna vyAna udAna samAna AnaMda BArati ramaNa

nIne SarvAdigIrvANAdyarige jAnadhanapAlipa varENya

nAnu nirutadali EnEnesaguve mAnasAdi karma

ninagoppisidenO prANanAtha sirivijayaviThalana

kANisikoDuvudu BAnuprakASa || 3 ||


Veera Hanuma – Shree Purandara Dasaru


ವೀರ ಹನುಮ ಬಹು ಪರಾಕ್ರಮ ||ಪ||

ಸಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||ಅ.ಪ||


ರಾಮ ದೂತನೆನಿಸಿ ಕೊಂಡೆ ನೀ ರಾಕ್ಷಸರ

ವನವನೆಲ್ಲ ಕಿತ್ತು ಬಂದೆ ನೀ

ಜಾನಕಿಗೆ ಮುದ್ರೆಯಿತ್ತು ಜಗತಿಗೆಲ್ಲ ಹರ್ಷವಿತ್ತು

ಚೂಡಾಮಣಿಯ ರಾಮಗಿತ್ತು ಲೋಕಕೆ ಮುದ್ದೆನಿಸಿ ಮೆರೆವ || 1 ||


ಗೋಪಿಸುತನ ಪಾದ ಪೂಜಿಸಿ ಗದೆಯ ಧರಿಸಿ

ಬಕಾಸುರನ ಸಂಹರಿಸಿದೆ

ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು

ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ || 2 ||


ಮಧ್ಯಗೇಹನಲ್ಲಿ ಜನಿಸಿ ನೀ ಬಾಲ್ಯದಲ್ಲಿ

ಮಸ್ಕರೀಯ ರೂಪಗೊಂಡೆ ನೀ

ಸತ್ಯವತಿಯ ಸುತನ ಭಜಿಸಿ ಸನ್ಮುಖದಿ ಭಾಷ್ಯ ಮಾಡಿ

ಸಜ್ಜನರ ಪೊರೆವ ಮುದ್ದು ಪುರಂದರವಿಠಲನ ದಾಸ || 3 ||


Veera Hanuma Bahu paraakrama || pa||

Sugnana vittu paalisenna jeevarotthama|| A Pa||


Raama dhoota nenisi konde nee

Raakshasara vanavanella kittu bande nee|

Jaanakige mudre ittu jagattigella harushavittu

Choodamaniya Raamagittu, lokake muttenisi mereva ||1||


Gopisutana paada poojisi Gadheya dharisi


bakaasurana samhariside|

Draupadiya moreya keli matte keechakanna kondu

Bheema nemba naama dharisi Sangraama dheeranaagi jagadi || 2 ||


Madhya gehanalli janisi nee

Baalyadalli matsariya roopa gonde nee|

Sathyavathiya sutana bhajisi sanmukhadi bhaashya maadi

Sajjanara poreva muddu Purandara vittalana daasa ||3||


Kailasa Vasa – Shree Vijaya Dasaru


ಕೈಲಾಸ ವಾಸ ಗೌರೀಶ ಈಶ || pa ||


ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ|| a. pa ||


ಅಹೋ ರಾತ್ರಿಯಲಿ ನಾನು ಅನುಚರಾಗ್ರನೆಯಾಗಿ


ಮಹಿಯೊಳಗೆ ಚರಿಸಿದೆನೊ ಮಹದೇವನೆ


ಅಹಿ ಭೂಷಣನೇ ಎನ್ನವಗುಣಗಳನೆನಿಸದಲೆ


ವಿಹಿತ ಧರ್ಮದಿ ವಿಷ್ಣು ಭಕ್ತಿಯನ್ನು ಶಂಭೋ || ೧ ||


ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ


ಅನಲಾಕ್ಷಿ ನಿನ್ನ ಪ್ರೇರಣೆ ಯಿಲ್ಲದೆ


ದನುಜ ಮದ ಗಜ ಹಾರಿ ದಂಡ ಪ್ರಣಾಮವ ಮಾಲ್ಪೆ


ಮಣಿಸೋ ಈ ಶಿರವ ಸಜ್ಜನ ಚರಣ ಕಮಲದಲ್ಲಿ || ೨ |


ಭಾಗೀರಥೀ ಧರನೇ ಭಯವ ಪರಿಹರಿಸಯ್ಯಾ


ಲೇಸಾಗಿ ನೀ ಸಲಹೋ ಸಂತತ ಸರ್ವದೇವ


ಭಾಗವತ ಜನಪ್ರಿಯಾ ವಿಜಯವಿಠಲ ನಂಘ್ರಿ


ಜಾಗು ಮಾಡದೇ ಭಜಿಪ ಭಾಗ್ಯವನೆ ಕೊಡೂ ಶಂಭೋ | |೩ ||


kailasa vasa gaurisa isa || pa ||


tailadhareyante manasu kodu hariyalli || a. pa||


aho ratriyali nanu anucaragraneyagi 


mahiyolage carisideno 


mahadevane ahi bushanane ennavagunagalanenisadale 


vihita dharmadi vishnu baktiyannu sanbo || 1 ||


manasu karanavalla papa punyakkella 


analakshi ninna prerane yillade 


danuja mada gaja hari danda pranamava malpe 


maniso i sirava sajjana carana kamaladalli || 2 ||


bagirathi dharane bayava pariharisayya 


lesagi ni salaho santata 


sarvadeva bhagavata janapriya vijayavithala nangri 


jaagu madade bajipa bhagyane kodu shambho || 3 ||


Guru Madhwa Rayarige Namo Namo – Shree Guru Shrisha Vittala


ಗುರು  ಮಧ್ವ  ರಾಯರಿಗೆ  ನಮೋ  ನಮೋ


ಗುರು  ಮಧ್ವ  ಸಂತತಿಗೆ  ನಮೋ  ನಮೋ || pa||


ಶ್ರಿಪಾದರಜರಿಗೆ   ಗುರು  ವ್ಯಾಸರಾಜರಿಗೆ


ಗುರು  ವಾದಿರಾಜರಿಗೆ ನಮೋ  ನಮೋ || 1 ||


ರಾಘವೇಂದ್ರ  ರಾಯರಿಗೆ  ವೈಕುಂಠ  ದಾಸರಿಗೆ


ಪುರಂದರ  ದಾಸರಿಗೆ  ನಮೋ  ನಮೋ || 2 ||


ಗುರು  ವಿಜಯ  ದಾಸರಿಗೆ  ಭಾಗಣ್ಣ  ದಾಸರಿಗೆ


ಶ್ರೀ  ರಂಗ  ವಲಿದ  ದಾಸರಿಗೆ  ನಮೋ  ನಮೋ || 3 ||


ಪರಮ  ವೈರಾಗ್ಯಶಲಿ  ತಿಮ್ಮಣ್ಣ  ದಾಸರಿಗೆ


ಹುನ್ದೆಕಾರ  ದಾಸರಿಗೆ  ನಮೋ  ನಮೋ || 4 ||


ಗುರು  ಶ್ರೀಶ  ವಿಠಲನ   ಪರಮ  ಭಕ್ತರ  ಚರಣ


ಸರಸಿಜ  ಯುಗಗಳಿಗೆ  ನಮೋ  ನಮೋ || 5 ||


guru madhva rayarige namo namo


guru madhva saantatige namo namo || pa||


shripadarajarige guru vyasarajarige


guru vadirajarige namo namo || 1 ||


raghavendra rayarige vaikunaa dasarige


purandara dasarige namo namo || 2 ||


guru vijaya dasarige bhaganna dasarige


shri ranga valida dasarige namo namo || 3 ||


parama vairagyashali timmanna dasarige


hundeekara dasarige namo namo || 4 ||


guru shrisha vithalanna parama bhaktara charana


sarasija yugagalige namo namo || 5 ||


Tunga Theeradhi Ninta Suyativara – Shree Jaganatha Vittala Dasaru


ತು೦ಗಾತೀರದಿ ನಿ೦ತ ಸುಯತಿವರನ್ಯಾರೇ ಪೇಳಮ್ಮಯ್ಯ || pa||

ಸ೦ಗೀತಪ್ರಿಯ ಮ೦ಗಳಸುಗುಣ ತರ೦ಗ ಮುನಿಕುಲೋತ್ತು೦ಗ ಕಾಣಮ್ಮ || a Pa||


ಚಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು ನೋಡಮ್ಮಯ್ಯ

ಜಲಜಮಣಿ ಕೊರಳಲಿ ತುಳಸಿಮಾಲೆಗಳು  ನೋಡಮ್ಮಯ್ಯ

ಸುಲಲಿತಕಮ೦ಡಲದ೦ಡವ ಧರಿಸಿಹನ್ಯಾರೇ  ಪೇಳಮ್ಮಯ್ಯ

ಖಳ ಹಿರಣ್ಯಕನಲ್ಲಿ ಜನಿಸಿದ ಪ್ರಲ್ಹಾದನು ತಾನಿಲ್ಲಿಹನಮ್ಮ          || ೧ ||


ಸು೦ದರಚರಣದ್ವ೦ದ್ವ ಸುಭಕುತಿಗಳಿ೦ದ  ನೋಡಮ್ಮಯ್ಯ

ವ೦ದಿಸಿ ಸ್ತುತಿಸುವ ಭೂಮಿಸುರರಿ೦ದ  ನೋಡಮ್ಮಯ್ಯ

ಚ೦ದದಿ೦ದಲ೦ಕೃತರಾಗಿ ಶೋಭಿಸುವರ  ನೋಡಮ್ಮಯ್ಯ

ಹಿ೦ದೆ ವ್ಯಾಸಮುನಿಯೆ೦ದೆನಿಸಿದ ಕರ್ಮ೦ದಿಗಳರಸ ಯತೀ೦ದ್ರ –ಕಾಣಮ್ಮ || ೨ ||


ಅಭಿನವ ಜನಾರ್ಧನವಿಠ್ಠಲನ ಧ್ಯಾನಿಸುವ ನೋಡಮ್ಮಯ್ಯ

ನಭಮಣಿಯ೦ದದಿ ಭೂಮಿಯಲ್ಲಿ ರಾಜಿಸುವ  ನೋಡಮ್ಮಯ್ಯ

ಅಭಿವ೦ದಿತರಿಗೆ ಅಖಿಳಾರ್ಥಗಳ ಸಲ್ಲಿಸುವ  ನೋಡಮ್ಮಯ್ಯ

ಶುಭಗುಣನಿಧಿ ಶ್ರೀ ರಾಘವೇ೦ದ್ರಗುರು ಅಬ್ಜಭವಾ೦ಡದೊಳು ಪ್ರಬಲ ಕಾಣಮ್ಮ || ೩ ||


Tunga teeradi ninta suyativaranyare pelammayya || pa||

sangeetapriya mangalasugunataranga munikulottunga kanamma || A Pa||


Cheluva sumukha phaneyalli tilaka namagalu nodamma

jalamaniya koralalli tulasimalegalu pelamma

sulalita kamandalu dandavane dharisihane nodamma

kshulla hiranyakanalli janisida prahladanu tanillihanamma ||1||


Sumdara charanaravindake bhakutiyalinda nodamma

vandisi stutisuva bhusuravrunda nodamma

chandadalamkrutiyinda shobhisuvananda nodamma

hinde vyasamuniyendenisida karmamdigala rasaghadinda rahitane ||2||


Abhinava janardhana vithalana dhyanisuva nodamma

abhivandisidavarige akhilarthava sallisuva nodamma

nabhamaniyandadi vividhadi shobhisuva nodamma

shubhagunanidhi raghavendra guru abujabhavandadi prabala kanamma ||3||


Baro Guru Raghavendra – Shree Gurusheesha Vittala Dasaru


ಬಾರೋ ಗುರುರಾಘವೇಂದ್ರ

ಬಾರಯ್ಯ ಬಾ ಬಾ             || ಪ ||



ಹಿಂದುಮುಂದಿಲ್ಲೆನಗೆ ನೀ ಗತಿ

ಎಂದು ನಂಬಿದೆ ನಿನ್ನ ಪಾದವ

ಬಂಧನವ ಬಿಡಿಸೆನ್ನ ಕರಪಿಡಿ

ನಂದಕಂದಮುಕುಂದ ಬಂಧೋ        || 1 ||


ಸೇವಕನೆಲವೊ ನಾನು  ಧಾವಿಸಿ ಬಂದೆನು

ಸೇವೆ ನೀಡೆಲೊ ನೀನು

ಸೇವಕನ ಸೇವೆಯನು ಸೇವಿಸಿ

ಸೇವ್ಯಸೇವಕ ಭಾವವೀಯುತ

ಠಾವುಗಾಣಿಸಿ ಪೊರೆಯೊ ಧರೆಯೊಳು

ಪಾವನಾತ್ಮಕ ಕಾವ ಕರುಣಿ        || 2 ||


ಕರೆದರೆ ಬರುವಿಯೆಂದು ಸಾರುವುದು ಡಂಗುರ

ತ್ವರಿತದಿ ಒದಗೋ ಬಂದು

ಜರಿಯ ಬೇಡವೊ ಬರಿದೆ ನಿನ್ನಯ

ವಿರಹ ತಾಳದೆ ಮನದಿ ಕೊರಗುವೆ

ಹರಿಯ ಸ್ಮರಣೆಯ ನಿರುತದಲಿ ಎನ

ಗ್ ಹರುಷದಲಿ ನೀನಿರುತ ಕೊಡುತಲಿ        || 3 ||


ನರಹರಿಪ್ರಿಯನೆ ಬಾ  ಗುರುಶ್ರೀಶವಿಠ್ಠಲನ

ಕರುಣಾಪಾತ್ರನೆ ಬೇಗ ಬಾ

ಗುರುವರನೆ ಪರಿಪೋಷಿಸೆನ್ನನು

ಮರೆಯದಲೆ ತವಚರಣಕೋಟಿಯಲಿರಿಸಿ

ಚರಣಾಂಬುಜವ ತೋರುತ

ತ್ವರಿತದಲಿ ಓಡೋಡಿ ಬಾ ಬಾ        || 4||


Baro Guru Raghavendra 


Barayya Ba Ba || pa||


Hindu MundilLenage NeeGati

Yendu Pondide Ninna Padava

BandhaNava BidiSenna KaraPidi

Nanda Kanda Mukunda Bandhu || 1||


Sevakanelo Nanu dhavisi bandenu

Seve niiDelo Neenu

Sevakana Seveyanu Sevisi

Sevya Sevyaka BhaavaViiyuta

thavuganisi Poreyo Dhareyolu

Pavanatmaka Kava Karuni || 2 ||


Karedare Baruviiyendu Saruvudu Dangura

Tvaritadi Odago Banduu

Jareyu bhedavo Barade Ninna

Viraha Talade manades koraguve

Hariya Smareneya Niiruthadali yena

Harushadali Nii Niruta Kodutali || 3 ||


Narahari Priyane Baa GuruShreeshaVittalanna

Karuna Pathrane Bega Baa

Guruvarane pariposhiSennanu

Mareyadale Tava Charana KoteyaLirisi 


CharanamBujava Toruta

Tvaritadali Ododi Baa Baa || 4 ||


Raya Baro Thande Thayi Baro – Shree Guru Jaganatha Vittala Dasaru


ರಾಯ ಬಾರೋ ತಂದೆ ತಾಯಿ ಬಾರೋ | ನಮ್ಮನು ಕಾಯ ಬಾರೋ |

ಮಾಯಿಗಳ ಮದಿಸಿದ ರಾಘವೇಂದ್ರ ರಾಯ ಬಾರೋ ||


ವಂದಿಪ ಜನರಿಗೆ ಮಂದರ ತರುವಂತ | ಕುಂದದಭಿಷ್ಟವ ಸಲ್ಲಿಸುತಿಪ | ರಾಯ ಬಾರೋ |

ಕುಂದದಭಿಷ್ಟವ ಸಲ್ಲಿಸುತಿಪ ಸರ್ವಜ್ಞ | ಮಂದನ ಮತಿಗೆ ರಾಘವೇಂದ್ರ ರಾಯ ಬಾರೋ ||1||


ಆರುಮೂರು ಏಳು ನಾಲ್ಕು ಎಂಟು ಗ್ರಂಥದ ಸಾರಾರ್ಥ ತೋರಿದಿ ಸರ್ವರಿಗೆ ನ್ಯಾಯದಿಂದ ರಾಯ ಬಾರೋ |

ತೋರಿದಿ ಸರ್ವರಿಗೆ ನ್ಯಾಯದಿಂದ ಸರ್ವಜ್ಞ ಸುರಿಗಳರಸನೇ ರಾಘವೇಂದ್ರ ರಾಯ ಬಾರೋ || 2||


ರಾಮಪಾದಾಂಬುಜ ಸದ್ಭೃಂಗ ಕೃಪಾಂಗ ಭ್ರಾಮಕ ಜನರ ಮಾನಭಂಗ ರಾಯ ಬಾರೋ

ಭ್ರಾಮಕ ಜನರ ಮಾನಭಂಗವ ಮಾಡಿದ ಧೀಮಂತರೊಡೆಯನೇ ರಾಘವೇಂದ್ರ ರಾಯ ಬಾರೋ ||3||


ಭೂಸುರ ಚರಿತಾನೇ ಭೂಸುರ ವಂದ್ಯನೇ ಶ್ರೀ ಸುಧೀಂದ್ರರ್ಯರ ವರಪುತ್ರ ರಾಯ ಬಾರೋ

ಶ್ರೀ ಸುಧೀಂದ್ರರ್ಯರ ವರಪುತ್ರ ವರಯೋಗಿ ದೇಶಿಕರೊಡೆಯನೇ ರಾಘವೇಂದ್ರ ರಾಯ ಬಾರೋ ||4||


ಭೂತಲನಾಥನ ಭೀತಿಯ ಬಿಡಿಸಿದೆ ಪ್ರೇತತ್ವ ಕಳೆದಿ ಮಹಿಷಿಯ ರಾಯ ಬಾರೋ

ಪ್ರೇತತ್ವ ಕಳೆದಿ ಮಹಿಷಿಯ ಮಹಾ ಮಹಿಮಾ ನಾಥ ಗುರು ಜಗನ್ನಾಥ ವಿಠಲ ಬಾರೋ ತಂದೆ ತಾಯಿ ಬಾರೋ ||5||


Raya baro tande tayi baro nammanu kaya baro |


mayigala madisida raghavendra raya baro ||


vandipa janarige mandara taruvantha  kundada bhishtava salisutirpa  raya baro

kumdada bhishtava salisutirpa sarvagna mandana matige raghavendra raya baro ||1||


aarumuru elu nalku entu granthada sarartha toridi sarvarige nyayadinda  raya baro

toridi sarvarige nyayadinda sarvagna surigalarasane raghavendra raya baro || 2||


rama padambhuja sadbhrunga krupanga  bhramaka janara manabhanga  raya baro

bhramaka janara manabhangava madida dhimantarodeyane raghavendra raya baro ||3||


bhusura charitane bhusura vandyane  shri sudhindraryara varaputra raya baro

shri sudhindraryara varaputra varayogi deshikarodeyane raghavendra raya baro ||4||


bhutalanathana bhitiya bidiside pretatva kaledi mahishiya  raya baro

pretatva kaledi mahishiya maha mahima natha guru jagannatha vithala baro thande thayi baro || 5 ||


Rathavanerida raghavendra sadhgunasandra – Shree Gopala Vittala Dasaru


ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ         


ಸತತ ಮಾರ್ಗದಿ ಸಂತತ ಸೇವಿಪರಿಗೆ || pa||

ಅತಿ ಹಿತದಲಿ ಮನೋರಥವ ನೀಡುವೆನೆಂದು              ||ಅ.ಪ||


ಚತುರ ದಿಕ್ಕುವಿದಿಕ್ಕುಗಳಲ್ಲಿ ಅರಿಪ ಜನರಲ್ಲಿ

ಮಿತಿಯಿಲ್ಲದೆ ಬಂದು ಓಲೈಸುತಲಿ ವರಗಳ ಬೇಡುತಲಿ

ನುತಿಸುತ ಪರಿಪರಿ ನತರಾಗಿ ಹರಿಗೆ

ಗತಿಪೇಳದೆ ಸರ್ವಥಾ ನಾ ಬಿಡೆನೆಂದು                       ||೧||


ಅತುಲ ಮಹಿಮಾನೆ ಆ ದಿನದಲ್ಲಿ ದಿತಿವಂಶದಲಿ

ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ಮತಿಯಲ್ಲಿ

ಅತಿಶಯವಿರುತಿರೆ ಪಿತನ ಬಾಧೆಗೆ ಮನ್ಮಥ-

ಪಿತನೊಲಿಸಿದೆ ಜಿತ ಕರುಣದಲಿ                                ||೨||


ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿ ರಾಘವೇಂದ್ರ

ಪ್ರತಿವಾದಿಕದಳಿವನಕರಿಯೆ ಕರ ಮುಗಿವೆನು ದೊರೆಯೆ

ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ ಪ್ರತಿ

ಮಂತ್ರಾಲಯದೊಳು   ಅತಿ  ಮೆರೆವ                          ||೩||


rathavanerida raghavendra sadhgunasandra

satata margadi santata seviparige || pa||

ati hitadali manorathava niduvenendu || a Pa||


chatura dikkudikkugaLalli aripa janaralli

mitiyillade bandu Olaisutali varagala bedutali

nutisuta paripari nataragiharige

gati pelade sarvatha bidenendu ||1||


atulamahima niya dinadalli ditija vamshadali

utapattiyagi uchitadali uttamamatiyalli

atishayavirutire pitana badhege man

mathapitanoliside jitakaranadali ||2||


prathama prahlada vyasamuniye yati rAghavEndra

prativadi kadalivana kariye karamugivenu doreye

kshitiyoLu gopalaviThalana smarisuta

prati mantralayadolu ati mereve ||3||


Jaya Jaya Veeve Raghavendra


Kannada – https://drive.google.com/file/d/1AX8O_X56NnBJZtPDno-vOvgEiN9gvyuC/view


English – https://meerasubbarao.wordpress.com/2008/06/29/shri-raghavendra-ashtotra-108-shathanamavali-jaya-jaya-veeve-raghavendra-lyrics/


English – https://drive.google.com/file/d/1GhlZYsLldM2Orof_970MZwF59B5MR1J9/view



Toogire Rayara


Kannada – https://drive.google.com/file/d/10djZe8BZiab05aJsBn41pj84djdgVOo_/view



Vittalayya Vittalayya – Shree Jaganatha Dasaru


ವಿಠಲಯ್ಯ ವಿಠಲಯ್ಯ ||ಪ||


ತಟಿತ್ಕೋಟಿ ನಿಭಕಾಯ ಜಗನ್ನಾಥ ||ಆ.ಪ||


ಭಜಿಸುವೆ ನಿನ್ನನು ಅಜಭವ ಸುರನುತ

ಭಜಕಾಮರತರು ಕುಜನ ಕುಠಾರಾ ||1||


ನೀ ಕರುಣಿಸದೆ ನಿರಾಕರಿಸಲು ಎನ್ನ

ಸಾಕುವರಾರು ದಯಾಕರ ಮೂರುತಿ ||2||


ಶರಣಾಗತರನು ಪೊರೆವನೆಂಬ ತವ

ಬಿರಿದು ಕಾಯೋ ಕರಿವರದ ಜಗನ್ನಾಥ ||3||


Vithalayya vithalayya ||pa||


Tatitkoti nibakaya jagannatha ||a.pa||


Bajisuve ninnanu ajabava suranuta

Bajakamarataru kujana kuthara ||1||


Nee karunisade nirakarisalu enna

sakuvararo dayapara muruti ||2||


Sharanagataranu porevenemba tava

birudu kayo karivada jagannatha ||3||


Sripathiyu Namage – Shree Purandara Dasaru


ಶ್ರೀಪತಿಯು ನಮಗೆ ಸಂಪದವೀಯಲಿ


ವಾಣಿಪತಿಯು ನಮಗೆ ದೀರ್ಘಾಯು ಕೊಡಲಿ || pa ||


ಸುರರ ಗಣವನು ಪೊರೆಯೆ ವಿಷವ ಕಂಠದಲಿಟ್ಟ


ಹರ ನಮಗೆ ಸತತ ಬೆಂಬಲವೀಯಲಿ || 1 ||


ನರರೊಳುನ್ನತವಾದ ಭೋಗಭಾಗ್ಯಂಗಳನು


ಪುರುಹುತ ಪೂರ್ಣ ಮಾಡಿಸಲಿ ನಮಗೆ || 2 ||


ವಿನುತ ಸಿದ್ಧಿಪ್ರದವಿನಾಯಕನ ದಯದಿಂದ


ನೆನೆದ ಕಾರ್ಯಗಳೆಲ್ಲ ನೆರವೇರಲಿ || 3 ||


ದಿನದಿನದಿ ಅಶ್ವಿನಿಗಳು ಆಪತ್ತುಗಳ ಕಳೆದು


ಮನಕೆ ಹರುಷವನಿತ್ತು ಮನ್ನಿಸಲಿ ಬಿಡದೆ || 4 ||


ನಿರುತ ಸುಜ್ಞಾನವನು ಈವ ಮಧ್ವರಾಯ


ಗುರುಗಳಾಶೀರ್ವಾದ ನಮಗಾಗಲಿ || 5 ||


ಪುರಂದರ ವಿಠಲನ ಕರುಣದಿಂದಲಿ ಸಕಲ


ಸುರರ ಒಲುಮೆ ನಮಗೆ ಸ್ಥಿರವಾಗಲಿ || 6 ||


Shripatiyu namage sampadaviyali 


Vanipatiyu namage dhirgayu kodali


Surara ganavanu poreya vishava kanthadalitta 


hara namage sahayakanagali ||


nararolunnatavada bhoga bhagyangalanu 


puruhuta purna madisali namage ||


Vinuta siddhi pradanu vighnesha dayadinda 


neneda karyagalella neraverali ||


dinadinadi ashwiniapattugala kaledu 


manake harshavanittu mannisali bidade ||


Niruta sujnanavanu eva madhvaraya 


gurugalashirvada namagagali |


purandara vittalanna karunadindali sakala 


surarolume namage sthiravagali ||


Bideno ninnangri srinivasa – Shree Prasanna Venkatesha Dasaru


ಬಿಡೆನೋ ನಿನ್ನಂಘ್ರಿ ಶ್ರೀನಿವಾಸ


ಎನ್ನ ದುಡಿಸಿಕೊಳ್ಲಲೋ ಶ್ರೀನಿವಾಸ | ಪ |


ನಿನ್ನುಡಿಯೇ ಜಿತೆಲ್ಲೋ ಶ್ರೀನಿವಾಸ


ಎನ್ನ ನಡೆತಪ್ಪು ಕಾಯೋ ಶ್ರೀನಿವಾಸ | ಅ.ಪ. |


ಬಡಿಯೋ ಬೆನ್ನಲ್ಲಿ ಶ್ರೀನಿವಾಸ


ಎನ್ನೊಡಲ ಹೊಯ್ಯದಿರು ಶ್ರೀನಿವಾಸ


ನಾ ಬಡವ ಕಾಣೆಲೋ ಶ್ರೀನಿವಾಸ


ನಿನ್ನೊಡಲ ಹೊಕ್ಕೆನೋ ಶ್ರೀನಿವಾಸ | ೧ |


ಪಂಜು ಪಿಡಿವೆನೋ ಶ್ರೀನಿವಾಸ


ನಿನ್ನೆಂಜಲ ಬಳಿದುಂಬೆ ಶ್ರೀನಿವಾಸ


ನಾ ಸಂಜೆ ಉದಯಕೆ ಶ್ರೀನಿವಾಸ


ಕಾಳಂಜಿಯ ಪಿಡಿವೆ ಶ್ರೀನಿವಾಸ | ೨ |


ಸತ್ತಿಗೆ ಚಾಮರ ಶ್ರೀನಿವಾಸ


ನಾನೆತ್ತಿ ಕುಣಿವೆನೋ ಶ್ರೀನಿವಾಸ


ನಿನ್ನ ರತ್ನದ ಹಾವಿಗೆ ಶ್ರೀನಿವಾಸ


ನಾ ಹೊತ್ತು ನಲಿವೆನೋ ಶ್ರೀನಿವಾಸ |೩ |


ಹೇಳಿದಂತಾಲಿಹೆ ಶ್ರೀನಿವಾಸ


ನಿನ್ನಳಿಗಳಾಗಿಹೆ ಶ್ರೀನಿವಾಸ


ಅವರೂಳಿಗವ ಮಾಳ್ಪೆ ಶ್ರೀನಿವಾಸ


ಎನ್ನ ಪಾಲಿಸೋ ಬಿದದೇ ಶ್ರೀನಿವಾಸ | ೪ |


ನಿನ್ನ ನಾಮ ಹೋಳಿಗೆಶ್ರೀನಿವಾಸ


ಕಳ್ಳ ಕುನ್ನಿ ನಾನಾಗಿಹೆ ಶ್ರೀನಿವಾಸ


ಕಟ್ಟಿ ನಿನ್ನವರೊದ್ದರೆ ಶ್ರೀನಿವಾಸ


ನನಗಿನ್ನು ಲಜ್ಜೇತಕೆ ಶ್ರೀನಿವಾಸ | ೫ |


ಬೀಸಿ ಕೊಲ್ಲಲವರೆ ಶ್ರೀನಿವಾಸ


ಮುದ್ರೆ ಕಾಸಿ ಚುಚ್ಚಲವರೆ ಶ್ರೀನಿವಾಸ


ಮಿಕ್ಕ ಕಾಸಿಗಂಜೆನಯ್ಯ ಶ್ರೀನಿವಾಸ


ಎಂಜಲಾಸೆಯ ಬಂಟನಾ ಶ್ರೀನಿವಾಸ | ೬ |


ಹೇಸಿ ನಾನಾದರೇ ಶ್ರೀನಿವಾಸ


ಹರಿದಾಸರೊಳು ಪೊಕ್ಕೆ ಶ್ರೀನಿವಾಸ


ಅವರ ಭಾಷೆಯ ಕೇಳಿಹೆ ಶ್ರೀನಿವಾಸ


ಅವಾಸಿಯ ಸೈರಿಸೋ ಶ್ರೀನಿವಾಸ | ೭ |


ತಿಂಗಳನವನಲ್ಲ ಶ್ರೀನಿವಾಸ


ವತ್ಸರಂಗಳವನಲ್ಲ ಶ್ರೀನಿವಾಸ


ರಾಜಂಗಳ ಸವಡಿಪೆ ಶ್ರೀನಿವಾಸ


ಭವಂಗಳ ದಾಟುವೆ ಶ್ರೀನಿವಾಸ |೮ |


ನಿನ್ನವ ನಿನ್ನವ ಶ್ರೀನಿವಾಸ


ನಾ ಅನ್ಯರ ನರಿಯೆನೊ ಶ್ರೀನಿವಾಸ


ಅಯ್ಯ ಮನ್ನಿಸು ತಾಯ್ತಂದೆ ಶ್ರೀನಿವಾಸ


ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ | ೯ |


bideno ninnangri srinivasa


enna dudisikollalo srinivasa | pa |


ninnudiye jienglo srinivasa


enna nadetappu kayo srinivasa | a.pa. |


badiyo bennalli srinivasa


ennodala hoyyadiru srinivasa


na badava kanelo srinivasa


ninnodala hokkeno srinivasa | 1 |


panju pidiveno srinivasa


ninnenjala balidunbe srinivasa


na sanje udayake srinivasa


kalanjiya pidive srinivasa | 2 |


sattige camara srinivasa


nanetti kuniveno srinivasa


ninna ratnada havige srinivasa


na hottu naliveno srinivasa |3 |


helidantalihe srinivasa


ninnaligalagihe srinivasa


avaruligava malpe srinivasa


enna paliso bidade srinivasa | 4 |


ninna nama holigesrinivasa


kalla kunni nanagihe srinivasa


katti ninnavaroddare srinivasa


nanaginnu lajjetake srinivasa | 5 |


bisi kollalavare srinivasa


mudre kasi cucchalavare srinivasa


mikka kasiganjenayya srinivasa


enjalaseya bantana srinivasa | 6 |


hesi nanadare srinivasa


haridasarolu pokke srinivasa


avara basheya kelihe srinivasa


avasiya sairiso srinivasa | 7 |


tingalanavanalla srinivasa


vatsarangalavanalla srinivasa


rajangala savadipe srinivasa


bavangala datuve srinivasa |8 |


ninnava ninnava srinivasa


na anyara nariyeno srinivasa


ayya mannisu taytande srinivasa


prasanna venkatadri srinivasa | 9 |


Pandarapuravembha Dhoda Nagara – Shree Purandara Dasaru


ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ಸಾಹುಕಾರ

ವಿಠೋಬನಿರುವದು ನದಿತೀರ ಅಲ್ಲಿ ಪಂಢರಿಭಜನೆ ವ್ಯಾಪಾರ ||ಪ.||


ತಂದೆ ನೀನೆ ತಾಯಿ ನೀನೆ ಪಾಂಡುರಂಗ ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ

ಭಕ್ತರ ಪೋಷಕ ಪಾಂಡುರಂಗ ನಮ್ಮ ಮುಕ್ತಿದಾಯಕ ಪಾಂಡುರಂಗ ||೧||


ವಿಠೋಬನಿಗೆ ಪ್ರಿಯ ತುಳಸಿಹಾರ ಅಲ್ಲಿ ಭಕ್ತ ಜನರ ವ್ಯಾಪಾರ

ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨||


ಶ್ರೀಹರಿ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ

ವಿಠ್ಠಲ ವಿಠ್ಠಲ ಪಾಂಡುರಂಗ ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||೩||


paMDharApuraveMba doDDa nagara alli viThObaneMba sAhukAra

viThObaniruvadu naditIra alli paMDharibhajane vyApAra ||pa.||


taMde nIne tAyi nIne pAMDuraMga namma baMdhu nIne baLaga nIne pAMDuraMga

bhaktara pOShaka pAMDuraMga namma muktidAyaka pAMDuraMga ||1||


viThObanige priya tuLasihAra alli bhakta janara vyApAra

viThObanige priya bukkiya gaMdha alli chaMdrabhAgA snAna balu aMda ||2||


shrIhari viThThala pAMDuraMga jaya hari viThThala pAMDuraMga

viThThala viThThala pAMDuraMga namma puraMdara viThThala pAMDuraMga ||3||


Ranga Ninna Kondaduva – Shree Jaganatha Vittala Dasaru


ರಂಗಾ ನಿನ್ನ ಕೊಂಡಾಡುವ  ಮಂಗಳಾತ್ಮರ


ಸಂಗ ಸುಖವಿತ್ತು ಕಾಯೋ ಕರುಣಾಸಾಗರ || Pa||


ಅರಿಯರೋ ನಿನ್ನಲ್ಲದೆ ಮತ್ತನ್ಯದೈವರ


ಮರೆಯರೋ ನೀ ಮಾಡಿದ ಅನಿಮಿತ್ತೋಪಕಾರ


ತೊರೆಯರೋ ನಿನಂಘ್ರಿಸೇವೆ ಪ್ರತಿವಾಸರ


ಅರಿಯರೋ ಪರತತ್ವವಲ್ಲದೆ ಇತರ ವಿಚಾರ || 1 ||


ಮೂಕಬಧಿರರಂತಿಪ್ಪರೋ ನೋಳ್ಪ ಜನಕೆ


ಕಾಕುಯುಕುತಿಗಳನು ತಾರರೋ ಮನಕೆ


ಸ್ವೇಕರಿಸರನರ್ಪಿತ ಒಂದು ಕಾಲಕೆ


ಆ ಕೈವಲ್ಯಭೋಗ ಸುಖ ಅವರಿಗೆ ಭೇಕೇ || 2 ||


ಜಯಾಜಯ ಲಾಭಾಲಾಭ ಮಾನಾಪಮಾನ


ಭಯಾಭಯ ಸುಖದುಃಖ ಲೋಷ್ಟ ಕಾಂಚನ


ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನ


ಶ್ರೀಯರಸ ಚಿಂತಿಸುವರೋ ನಿನ್ನ ಅಧೀನ || 3 ||


ಈಶೇತವ್ಯರೆಂತಿಪ್ಪರೇಕಾಂತಭಕ್ತರು


ದೇಶ ಕಾಲೋಚಿತ ಧರ್ಮ ಕರ್ಮಾಸಕ್ತರು


ಆಶಾಕ್ರೋಧಲೋಭ ಮೋಹಪಾಶಮುಕ್ತರು


ಈ ಸುಜನರೇ ಶಾಪಾನುಗ್ರಹಸಕ್ತರು || 4 ||


ಕಂಡ ಕಂಡಲ್ಲಿ ವಿಶ್ವರೂಪಕಾಂಭರೂ


ಉಂಡು ಉಣಿಸಿದ್ದೆಲ್ಲಾ ನಿನ್ನ ಯಜ್ಞವೆಂಬರೂ


ಬಂಡುಣಿಯಂದದಿ ನಾಮಾಮೃತವ ಸವಿವರೂ


ಹೆಂಡರು ಮಕ್ಕಳು ನಿನ್ನ ತೊಂಡರೆಂಬರೋ || 5 ||


ಬಿಡರು ತಮ್ಮ ಸ್ವಧರ್ಮಗಳೇನು ಬಂದರು


ಬಡರು ದೈನ್ಯ ಒಬ್ಬರಿಗು ಲೋಕವಂದ್ಯರು


ಪಿಡಿಯರು ನಿನ್ನ ದ್ವೇಷಿಗಳಿಂದೇನು ಬಂದರು


ಕೊಡುವರು ಬೇಡಿದಿಷ್ಟಾರ್ಥ ನಿತ್ಯಾನಂದರು || 6 ||


ನಗುವರೋ ರೋದಿಸುವರೋ ನಾಟ್ಯವಾಡುವರೋ


ಬಗೆಯರೊ ಬಡತನ ಭಾಗ್ಯ ಭಾಗವತರು


ತೆಗೆಯರೊ ನಿನ್ನಲ್ಲಿ ಮನವನೊಮ್ಮೆಯಾದರೂ


ಜಗನ್ನಾಥವಿಠಲ ನಿನ್ನವರೇನು ಧನ್ಯರೋ || 7 ||


raMgA ninna koMDADuva maMgaLAtmara

saMga sukhavittu kAyO karuNAsAgara || pa ||


ariyarO ninnallade mattanyadaivara

mareyarO nI mADida animittOpakAra

toreyarO ninaMghrisEve prativAsara

ariyarO paratatvavallade itara vichAra || 1 ||


mUkabadhiraraMtipparO nOLpa janake

kAkuyukutigaLanu tArarO manake

svEkarisaranarpita oMdu kAlake

A kaivalyabhOga sukha avarige bhEkE || 2 ||


jayAjaya lAbhAlAbha mAnApamAna

bhayAbhaya sukhaduHkha lOShTa kAMchana

priyApriya niMdAstutigaLanudina

shrIyarasa chiMtisuvarO ninna adhIna || 3 ||


IshEtavyareMtipparEkAMtabhaktaru

dEsha kAlOchita dharma karmAsaktaru

AshAkrOdhalObha mOhapAshamuktaru

I sujanarE shApAnugrahasaktaru || 4 ||


kaMDa kaMDalli vishvarUpakAMbharU

uMDu uNisiddellA ninna yaj~javeMbarU

baMDuNiyaMdadi nAmAmRutava savivarU

heMDaru makkaLu ninna toMDareMbarO || 5 ||


biDaru tamma svadharmagaLEnu baMdaru

baDaru dainya obbarigu lOkavaMdyaru

piDiyaru ninna dvEShigaLiMdEnu baMdaru

koDuvaru bEDidiShTArtha nityAnaMdaru || 6 ||


naguvarO rOdisuvarO nATyavADuvarO

bageyaro baDatana bhAgya bhAgavataru

tegeyaro ninnalli manavanommeyAdarU

jagannAthaviThala ninnavarEnu dhanyarO || 7 ||


Dasoham Tava Dasoham – Shree Jaganatha Vittala Dasaru


ದಾಸೋಹಂ ತವ ದಾಸೋಹಂ ||ಪ||

ವಾಸುದೇವ ವಿಗತಾಘಸಂಘ ತವ ||ಅ. ಪ||


ಜೀವಾಂತರ್ಗತ ಜೀವನಿಯಾಮಕ ಜೀವವಿಲಕ್ಷಣ ಜೀವನದ

ಜೀವಾಧಾರಕ ಜೀವರೂಪ ರಾಜೀವಭವಜನಕ ಜೀವೇಶ್ವರ ತವ ||೧||


ಕಾಲಾಂತರ್ಗತ ಕಾಲನಿಯಮಕ ಕಾಲಾತೀತ ತ್ರಿಕಾಲಜ್ಞ

ಕಾಲಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕ ಕಾಲಮೂರ್ತಿ ತವ ||೨||


ಕರ್ಮ ಕರ್ಮಕೃತಕರ್ಮಕೃತಾಗಮ ಕರ್ಮಫಲಪ್ರದ ಕರ್ಮಜಿತ

ಕರ್ಮಬಂಧ ಮಹ ಕರ್ಮವಿಮೋಚಕ ಕರ್ಮವಿನಿಗ್ರಹ ವಿಕರ್ಮನಾಶತವ  ||೩||


ಧರ್ಮಯೂಪ ಮಹಧರ್ಮವಿವರ್ಧನ ಧರ್ಮವಿದೊತ್ತಮ ಧರ್ಮನಿಧೇ

ಧರ್ಮಸೂಕ್ಷ್ಮ ಮಹಧರ್ಮಸಂರಕ್ಷಕ ಧರ್ಮಸಾಕ್ಷಿ ಯಮಧರ್ಮ ಪುತ್ರ ತವ || ೪||


ಮಂತ್ರಯಂತ್ರ ಮಹಮಂತ್ರ ಬೀಜ ಮಹಮಂತ್ರರಾಜ ಗುರುಮಂತ್ರಜಿತ

ಮಂತ್ರಮೇಯಮಹ ಮಂತ್ರನಿಯಾಮಕ ಮಂತ್ರದೇವ ಜಗನ್ನಾಥ ವಿಠಲತವ ||೫||


Dasoham tava dasoham || pa ||


Vasudeva vigatagasangha tava || A. pa||


Jeevanthargatha Jeevaniyamaka Jeevavilakshana Jeevanada


Jeevadaraka Jeevaroopa Rajivabavajanaka Jeeveshwara tava||1||


Kalanthargatha kaalaniyamaka Kaalatheetha thrikaalagnya


Kalapravarthaka kalanivarthaka kaalothpadaka kalamurti tava||2||


Karma karamakrithakarmakrithaagama Karmaphalaprada karmajitha


Karmabaandha maha Karmavimochaka Karmavinigraha vikarmanashatava||3||


Dhramayupa Mahadharmavivardhana dharmavidhotama dharmanidhe


Dharmasookshma Mahadharmasamrakshaka Dharmasakshi Yamadharma Putra tava ||4||


Mantrayantra mahaMantra bheeja MahaMantraraja guruMantrajitha


Mantrameyamaha Mantraniyamaka Mantradeva jaganatha vittalatava||5||


Dangoorava Saarirai – Shree Purandara Dasaru


ಡಂಗುರವ ಸಾರಿರಯ್ಯ ಡಿಂಗರೀಗಲೆಲ್ಲರೂ |


ಭೂ ಮಂಡಲಕ್ಕೆ ಪಾಂಡುರಂಗ ವಿಠಲನೇ ಪರ ದೈವ ವೆಂದು | ಪ |


ಹರಿಯ ಮುಡಿದ ಹೂವು ಹರಿವಾಣದೊಳಗಿಟ್ಟುಕೊಂಡು |


ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತಾ |


ಒದಲು ಜಾಂಗಟಿಯ ಮಾಡಿ ನುಡಿವ ನಾಲಿಗೆ ಘಂಟೆ ಪಿಡಿದು |


ಬಿಡದೆ ಢಣ್ ಢಣ್ ಢಣ್ ಎಂದು ಹೊಡೆದು ಚಪ್ಪಾಳಿಕ್ಕುತಾ |


ಇಂತು ಲೋಕಕ್ಕೆಲ್ಲ ಲಕ್ಷ್ಮೀಕಾಂತ ನಲ್ಲದಿಲ್ಲವೆಂದು |


ಸಂತತ ಶ್ರೀ ಪುರಂದರ ವಿಠ್ಠಲರಾಯನೇ ಪರದೈವವೆಂದು | ೩ |


dangurava sarirayya dingarigalellaru |


boo mandalakke panduranga vithalane para daiva vendu | pa |


hariyu mudida huvu harivanadolagittukondu |


harushadinda hadi padi kunidu chappalikkuta |


odalu jangatiya madi nudiva nalige gante pididu |


bidade dhan dhan dhan endu hodedu chappalikkuta |


intu lokakkella lakshmikanta nalladillavendu |


santata sri purandara vithalarayane paradaivavendu | 3 |


Nere Nambidhe 


ನೆರೆನಂಬಿದೆ ಮದ ಹೃದಯ ಮಂಟಪದೊಳು

ಪರಿಶೋಭಿಸುತಿರು ಪಾಂಡುರಂಗ                 ||ಪ||


ಶರಣು ಜನರ ಸಂಸಾರ ಮಹಾ ಭಯ

ಹರಣ ಕರುಣ ಸಿರಿ ಪಾಂಡುರಂಗ                 ||ಅ.ಪ||


ನೆರೆದಿಹ ಬಹುಜನರೋಳಿದ್ದರು ಮನ

ಸ್ಥಿರ ವಿಡು ನಿನ್ನಲಿ ಪಾಂಡುರಂಗ

ಪರಿ ಪರಿ ಕೆಲಸವು ನಿನ್ನ ಮಹಾಪೂಜೆ

ನಿರುತ ಎನಗೆ ಕೊಡು ಪಾಂಡುರಂಗ              ||೧||


ಪರದೇವನೆ ನಿನ್ನಾ ಲೀಲಾ ಸ್ಮೃತಿಯನು

ನಿರುತ ಎನಗೆ ಕೊಡು ಪಾಂಡುರಂಗ

ಪರರಾಪೇಕ್ಷೆಯ ಬಿಡಿಸಿ ನಿರಂತರ

ಪರಗತಿ ಪಥ ತೋರೋ ಪಾಂಡುರಂಗ            ||೨||


ಸುಖವಾಗಲಿ ಬಹು ದುಃಖವಾಗಲಿ

ಸಖನೀನಾಗಿರು ಪಾಂಡುರಂಗ

ನಿಖಿಲಾಂತರ್ಗತ ವ್ಯಾಸ ವಿಠಲ ತವ

ಮುಖ ಪಂಕಜ ತೋರೋ ಪಾಂಡುರಂಗ         ||೩||


Nere Nambidhe madh hrudhaya mantapadholu

parishobisuthiru Panduranga ||

sharana janara samsara mahabaya

charana karuna siri Panduranga ||


paradhevane ninna lilla stuthiyanu

nirutha enage kodu Panduranga

parara peksheya thoresi niranthara

paragathi patha thoro Panduranga || 1 ||


neredhiha bahu janarolidhdharu

manasthiravidu ninnali Panduranga

paripari kelasavu ninna mahapuje

nirutha enage kodu Panduranga || 2 ||


sukavagali bahu dhuhkavagali

saka ninagiru Panduranga

nikilanthargatha vyasa vitala thava

pankaja mukha thoro Panduranga || 3 ||


Nee Karuniso Vithala


ನೀ ಕರುಣಿಸೋ ವಿಠಲ ನಮ್ಮ ಸಾಕೊ ಪಂಡರಿ ವಿಠಲ || pa||


ವಿಠಲ ವಿಠಲ ಪಾಂಡುರಂಗ ಜೈ ಜೈ ವಿಠಲ ಪಾಂಡುರಂಗ


ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೇ ವಿಠಲ


ಸಾಸಿವೆಯಷ್ಟು ಭಕುತಿಯನರಿಯೇನೋ ಶೇಷ ಶಯನ ಹರಿ ವಿಠಲ ||1||


ಭವಸಾಗರದೊಳು ಮುಳುಗುವೆ ಸುಮ್ಮನೆ ಅವಲೋಕಿಸುವರೇ ವಿಠಲ


ನವ ನವ ವಿಷಯಕೆ ಹಿಗ್ಗುತಲಿಹ ಮನದವಸರ ಕಾಯೋ ವಿಠಲ ||2||


ನಿಶಿದಿನ ಅಶನ ವಸನಕೆ ಹೆಣಗುವೆ ಹುಸಿ ಸಂಗ್ರಹಿಸಿದೆ ವಿಠಲ


ನಿಷೇಧ ಮಾಯಾ ಇಲ್ಲವೋ ನರಕದ ಗಸಣೆಗೆ ಅಂಜುವೆ ವಿಠಲ ||3||


ಜಾವಕೇ ಮಾಡುವೆ ಸಾವಿರ ತಪ್ಪನು ಕಾಯೋ ದಯಾಂಬುಧಿ ವಿಠಲ


ಶ್ರೀವರ ಪ್ರಸನ್ನ ವೆಂಕಟ ವಿಠಲ ಜೀವಕೆ ಹೊಣೆ ನೀ ವಿಠಲ ||4||


nee karuNisO viThala namma saakO pandari viThala ||pa||


viThala viThala panduranga jai jai viThala panduranga



dOShigaLoLage hiriyanu naa nirdOShigalarasanE viThala

saasiveyaShTu bhakutiyanariyenO shESha shayana hari viThala ||1||


BhavasaagaradoLu muLuguve summane avalOkisuvare viThala


nava nava viShayake higgutaliha manadavasara kaayO viThala ||2||


nishidina ashana vasanake heNaguve husi saMgrahiside viThala


niShEdha maayaa illavO narakada gasaNege aMjuve viThala ||3||


Jaa ke maaDuve saavira tappanu kaayO dayaMbudhi viThala


shreevara prasanna vEMkaTa viThala jeevake hone nee viThala ||4||


Shree Krishnarpana Masthu

***

No comments:

Post a Comment