Tuesday, 1 June 2021

ಇಂದಿರಾರಮಣನ ಮಂದಿರದಲ್ಲೆ ನಾರಂದ ತಾ ಬರುತಿರಲು ankita bheemesha krishna

ಇಂದಿರಾರಮಣನ ಮಂದಿರದಲ್ಲೆ ನಾ-

ರಂದ ತಾ ಬರುತಿರಲು

ಕಂಡು ಕೃಷ್ಣನು ಕರೆತಂದು ಮನ್ನಿಸಿ

ಬಂದಕಾರಣವೇನೆಂದನು 1

ಕಾರಣವೇನುಂಟು ಕಾರಣಪುರುಷನ

ಕಾಣಬೇಕೆಂದೆನುತ

ಕಾಮಿಸಿಬಂದೆನೊ ಕೊರಳ ತುಳಸಿ ಮಾಲೆ

ನೀಡೊ ನೀ ಎನಗೆಂದನು2

ಏನು ಬೇಡಿದರು ನಾ ಕÉೂಡುವೆನು ನಾರಂದ

ಪ್ರಾಣಪದಕ ತುಳಸಿ

ನೀಡಲಾರೆನೊ ಮುತ್ತಿನ್ಹಾರವ ಕೊಡುವೆ-

ನೆಂದು ಹೇಳುತಿದ್ದನು ಹರಿಯು 3

ನೀಡದಿದ್ದರೆ ನಾನು ಬೇಡಿ ಬಿಡುವನಲ್ಲ

ನೋಡಿಕೋಯೆಂದೆನುತ

ಆಡಿದ ಮಾತು ತಪ್ಪುವರುಂಟೆ ಶ್ರೀಕೃಷ್ಣ

ಹೋಗಿಬರುವೆನೆಂದನು 4

ಸತ್ಯಭಾಮೆಯ ಮನೆ ಹೊಕ್ಕನು ನಾರಂದ

ಹೆತ್ತಮ್ಮ ಕೇಳೆನುತ

ಸುತ್ತಿಬಂದೆನು ಸುರಲೋಕದ ವಾರ್ತೆಯ

ವಿಸ್ತರಿಸ್ಹೇಳುವೆನು 5

ಇಂದ್ರಲೋಕದಲಿ ದೇವೇಂದ್ರ ಶಚಿಯ ಕೂಡ್ಯಾ

ನಂದದಿ ಕುಳಿತಿದ್ದನೆ ಅ-

ಲ್ಲಿಂದ ಕೈಲಾಸ ಮಾರುದ್ರ ಪಾರ್ವತಿದೇವಿ

ಚೆಂದವನ್ವರಣಿಸಲೆ 6

ಸತ್ಯಲೋಕದಿ ಸರಸ್ವತಿ ಕೂಡಿ ಬ್ರಹ್ಮ ಭಾ

ಳುತ್ಸವದಿಂದಿದ್ದನೆ

ಹಸ್ತಿನಾವತಿಯ ಪಾಂಡವರು ದ್ರೌಪದಿದೇವಿ

ಅರ್ಥಿಯ ನೋಡಿ ಬಂದೆ 7

ದ್ವಾರಾವತಿಗೆ ಬಂದೆ ದೇವಿ ನಿಮ್ಮರಸನು

ನಾರಿ ರುಕ್ಮಿಣಿ ಸಹಿತ

ಭಾಳ ಸಂಭ್ರಮದಿಂದ ಕುಳಿತಿದ್ದ

ಕಣ್ಹಬ್ಬವಾಗಿ ನಾ ಬಂದೆನಿಲ್ಲೆ 8

ಕರೆದು ರುಕ್ಮಿಣಿ ಕರದಿಂದೆ ಆಲಂಗಿಸಿ

ತೊಡೆಯಮ್ಯಾಲಿಟ್ಟಿದ್ದನೆ

ಅರಳುಮಲ್ಲಿಗೆ ತುರುವಿ(ಬೀ) ನಲ್ಲಿಟ್ಟು

ನಿನಗಿನ್ನು ಸರಿಯಿಲ್ಲವೆಂತೆಂಬನೆ 9

ಹಾರಪದಕ ಇಬ್ಬರಿಟ್ಟಾಭರಣ ಬ್ಯಾರೆ

ಬ್ಯಾರಾಗಿ ತೋರವಲ್ಲೆ

ಸೂರ್ಯಚಂದ್ರರು ಕೂಡಿದಂಥ ಮುಖವು

ನೋಡಿ ನಾ ಬೆರಗಾಗಿದ್ದೆನೆ 10

ಸತ್ಯಭಾಮೆಯೆ ನಿನ್ನ ಹೆತ್ತ ತಾಯಿತಂದೆ

ಮಿರ್ತಾಗಿದ್ದರೆ ನಿನಗೆ

ಕೊಟ್ಟರೀ ಕಪಟನಾಟಕ ದಯಹೀನಗಿ-

ನ್ನೆಷ್ಟು ನಾ ಸೈರಿಸಲೆ 11

ಒಂದೊಂದು ಗುಣಗಳ ವರಣಿಸಲಿಕ್ಕೆ ಹ

ನ್ನೊಂದೊ (ದ್ವ?) ರುಷವು ಸಾಲದೆ

ಕಂಡು ಬಂದ್ವಾರ್ತೆಯ ಖರೆಯ ನಾ ಹೇಳುವೆ

ಸಂದೇಹ ಮಾಡದಿರೆ 12

ಕೇಳಿ ಸತ್ಯಭಾಮೆ ತಾಳಲಾರದೆ ಮುನಿ

ಪಾದದ ಮ್ಯಾಲೆ ಬಿದ್ದು

ಹೇಳಿ ಉಪಾಯ ಮುಂದಕೆ ಪೋಗೊ ಶ್ರೀ-

ಕೃಷ್ಣ ತಾನೊಲಿದಿರುವಂದದಿ13

ದಾನವಾಂತಕÀನ ನೀ ದಾನವÀ ಮಾಡಲು

ದಾವಜನ್ಮಕÀು ನಿನ್ನನು

ತಾನಗಲದೆ ಮುಂದೆ ಸೇರಿಕೊಂಡಿರುವೊ

ಉಪಾಯ ಹೇಳುವೆನೆಂದನು 14

ರಂಗರಾಯನ ಕರೆತಂದುಕೊಟ್ಟವರಿಗೆ

ಹಿಂಗದೆ ಸೌಭಾಗ್ಯವ

ಎಂದೆಂದಿಗವರ ರಕ್ಷಿಸುವೋನೆಂದೆನುತಲಿ

ಅಂಗನೆಯರನಟ್ಟಿದಳು 15

ದೂತೇರ ಸಹಿತಾಗಿ ಬಂದು ತಾ ಭರದಿಂದೆ

ಪ್ರೀತಿಲೆ ಸತ್ಯಭಾಮ

ಮಾತುಳಾಂತಕ ನಮ್ಮ ಮನೆಗೆ ಬಾರೆನುತ ಶ್ರೀ-

ನಾಥನೆಯೇಳೆಂದಳು16

ಮಡದಿ ರುಕ್ಮಿಣಿ ಭಾಮೆ ಮಂದಿರಕ್ಕೊ ್ಹೀಗುವೆ

ಕಡುಕೋಪ ಮಾಡದಿರೆ

ತಡೆಯದೆ ನಾಳೆ ಬರುವೆನೆಂದು ಶ್ರೀಕೃಷ್ಣ ಗ-

ರುಡನ ಹೆಗಲೇರಿದ 17

ವಾರಕಾಂತೆಯರು ಬಾಜಾರ ಮಧ್ಯದಿ

ಸೋಳಸಾವಿರ ಸತಿಯರನೆ

ವಾರೆನೋಟದಿ ನೋಡಿ ನಗುತ ಸತ್ಯಭಾಮೆ

ಬಾಗಿಲ ಮುಂದಿಳಿದ 18

ಎದುರಿಗೆ ನಿಂತು ತಾ ಚೆದುರೆ ಸತ್ಯಭಾಮೆ

ಪದುಮ ಪಾದಕೆ ಎರಗಿ

ಮುದದಿಂದ ಮುದ್ದು ಶ್ರೀಕೃಷ್ಣನ ಮುಂಗೈಯ್ಯ

ಪಿಡಿದು ತಾ ನಡೆದಳಾಗ 19

ಕೃಷ್ಣರಾಯನೆ ನಿನ್ನ ಕೊಟ್ಟೇನು ದಾ ನವ

ಬಿಟ್ಟೆನ್ನ ಅಗಲದಂತೆ

ಸತ್ಯಭಾಮೆಯ ನೋಡಿ ನಗುತ ಈ ಕಾರ್ಯ ಅ-

ಗತ್ಯಮಾಡೆಂದೆನುತ 20

ಎರೆದು ಪೀತಾಂಬರವುಡಿಸಿ ಮಾಣ Âಕ್ಯದ ಆ-

ಭರಣವ ತಂದಿಟ್ಟಳು

ತರಿಸಿ ತಾಂಬೂಲ ದಕ್ಷಿಣೆಯನ್ನು ಬ್ರಾಂಬರ

ಕÀರೆಸಿದಳಾಕ್ಷಣದಿ 21

ಆಚಾರ್ಯ ನೀವ್ ಬನ್ನಿ ವಾಸುದೇವನ ದಾನ

ಈ ಕ್ಷಣದಲ್ಲೆ ಕೊಡುವೆ

ನಾಶರಹಿತ ನಮ್ಮ ಮನೆಯೊಳಗಿರಲಿಕ್ಕೆ

ಗ್ರಾಚಾರವೇನೆಂದರು 22

ವಿದ್ಯಾರ್ಥಿಗಳು ಬನ್ನಿ ಮುದ್ದು ಶ್ರೀಕೃಷ್ಣನ

ವಿಧ್ಯುಕ್ತದಲಿ ಕೊಡುವೆ

ಮೂರ್ಜಗದೊಡೆಯ ತಾ ಮಂದಭಾಗ್ಯರ

ಮನೇಲಿದ್ದಾನ್ಯಾತಕೆ ಎಂದಾರೆ 23

ಭಟ್ಟರೆ ನೀವ್ ಬನ್ನಿ ಸೃಷ್ಟಿಪತಿಯ ದಾನ

ಕೊಟ್ಟು ಬಿಡುವೆನೆಂದಳು

ಅಷ್ಟದರಿದ್ರರಿಗಾಲಕ್ಷ್ಮೀವಲ್ಲಭ

ದಕ್ಕುವೋನಲ್ಲೆಂದರು 24

ಯತಿಗಳೆ ನೀವ್ ಬನ್ನಿ ಪೃಥಿವಿಗೊಡೆಯ (ನನು)

ಹಿತದಿ ದಾನವ ಕೊಡುವೆ

ಗತಿಯಿಲ್ಲ ನಮಗೆ ಶ್ರೀಪತಿ ಸಲಹÀಲು ನಿನ್ನ

ಪತಿ ಬ್ಯಾಡ ನಮಗೆಂದರು&

last lines may be missing

****


No comments:

Post a Comment