ಆಸೆಯೆನಗಿಲ್ಲ ಸರ್ವೇಶ ನಿನಬಿಟ್ಟು
ವಾಸುಕೀಶಯನ ಜಗದೀಶ ನಿನ್ಹೊರತೆನಗೆ ಪ
ನಿಗಮದಾಸೆಗೆ ಹೋಗಿ ನೀರೊಳಗೆ ಮುಳುಗಿ ನೀ
ಸುಧೆಯ ಆಸೆಗೆ ಹೋಗಿ ಸುರರ ಕೈ ಸಿಕ್ಕು
ನೆಲದ ಆಸೆಗೆ ಮಣ್ಣು ಬಗೆದÀು ಶ್ರಮವನೆ ಬಟ್ಟು
ಕೊರಳ ಹಾರದ ಆಸೆ(ಗೆ) ಕರುಳ ಬಗೆವೊದೆ ಕಷ್ಟ1
ಭೂಮಿಯಲಿ ಭಾಳಾಸೆ ಭುವನ ವ್ಯಾಪಿಸಿಕೊಂಡು
ಕಾಮಧೇನಿ (ನುವಿ?)ನ ಆಸೆ ಕಾರ್ತವೀರ್ಯಾರ್ಜುನನ ಕೊಂದು
ಸಿರಿಯ ಸೌಂದರ್ಯದಾಸೆ ಶಿವನೆಬಲ್ಲನು ನೆಗಹಿ
ಉದರದಾಸೆಗೆ ಅಸುರೆಜಗಿದು ವಿಷಮೊಲೆನುಂಡಿ 2
ತ್ರಿಪುರ ಸತಿಯರ ಆಸೆಗ್ವಸನವಿಲ್ಲದೆ ತಿರುಗಿ
ಅಶ್ವದಲಿ ಆಸೆ ಅತಿ ಕಲಿಭಂಜನನೆನಿಸಿ
ಈಸುಪರಿ ಆಸೆ ಭೀಮೇಶ ಕೃಷ್ಣಗೆ ಇರಲು
ನಾಶರಹಿತನೆ ನಿನ್ನ ನಾಮವಿದ್ದರೆ ಸಾಕು 3
****
No comments:
Post a Comment