sudharmendra teertha rayara mutt yati 1872 stutih
ಸುಧರ್ಮೇಂದ್ರ ಮಹೋದಯಃ ।।
ಶ್ರೀ ರಾಮಾಯ ನಮಃ ಪುನಃ ಪುನರಸೌ
ದದ್ಯಾತ್ ಸಮುದ್ಯದ್ಧಿಯಂ ವಾಣೀಂ
ಚಾಮೃತಧೋರಣೀಂ ಗುಣಲವಾನ್
ಸ್ತೋತುಂ ಗುರೋಃ ಪ್ರಾರಭೇ ।
ಯಸ್ಯಾಲಂ ಜಗತಿ ಪ್ರಕೃಷ್ಟಯಶಸಾಂ
ಧಾಟೀಭಿರಾಪಾಂಡರೇ ಶೇಕುರ್ವಸ್ತು
ವಿವೇಚನೇ ನ ಕವಯಃ
ಸ್ತೋತುಂ ಗುಣಾನ್ ಕಿಂ ಪುನಃ ।। 1 ।।
ಪ್ರಪಂಚದಲ್ಲಿರುವ ಕವಿಗಳೆಲ್ಲ ಯಶಸ್ಸಿನ ಬೆಳದಿಂಗಳಿನಿಂದ ಕೂಡಿದ ಗುರುಗಳ ಗುಣವನ್ನು ಸ್ತುತಿಸಲು ಸಮರ್ಥರಾಗಲಿಲ್ಲವೋ; ಅಂಥಹಾ ಗುರುಗಳ ಗುಣಗಳಂಶವನ್ನು ವರ್ಣಿಸಲು ಅಮೃತಕ್ಕೆ ಸಮಾನವಾದ ವೈಭವದಿಂದ ಕೂಡಿದ ಬುದ್ಧಿಯನ್ನು ಶ್ರೀ ರಾಮ ಕೊಡಲಿ!
ರಾಮ ತ್ವತ್ಕರುಣಾಮಬಾಧಸರಣಾಂ
ಯಾಚೇsದ್ಯ ಪೂರ್ವಾಧಿಕಾಂ
ಕಸ್ತೇ ವತ್ಸ ಸಮಾಗತೋ ಹಿ
ಸಮಯಃ ಚಿಂತಾಪ್ರದಸ್ತಾದೃಶಃ ।
ಕಾಂಶ್ಚಿತ್ತೋತುಮಹಂ ಯತೇ
ಗುಣಲವಾನ್ಮಂದಸ್ಸುಧರ್ಮೇಂದ್ರಗಾನ್
ಇತ್ಯಾಕರ್ಣ್ಯಂ ಕರಂ ಸ ಮೂರ್ಧ್ನಿ
ನಿದಧೌ ಸ್ತೋತುಂ ತತಃ ಪ್ರೋತ್ಸಹೇ ।। 2 ।।
ಶ್ರೀರಾಮನಿಗೆ ಹೇಳಿದೆ..
ಓ ರಾಮನೇ! ನಿನ್ನ ಕರುಣೆ ಹಿಂದಿಗಿಂತ ಹೆಚ್ಚು ನನ್ನಲ್ಲಾಗಬೇಕೆಂದು!
ಶ್ರೀರಾಮ ಕೇಳಿದ..
ಏಕಿಂಥಹ ಕಾತರ? ಎಂದು.
ನಾನು ಹೇಳಿದೆ..
" ಶ್ರೀ ಸುಧರ್ಮೇಂದ್ರರ ಗುಣಗಳನ್ನು ಬಣ್ಣಿಸಲು ದುಡುಕಿದ್ದೇನೆ " ಎಂದು.
ಇದನ್ನು ಕೇಳಿದ ಶ್ರೀರಾಮ ಕೈದಾವರೆಗಳಿಂದ ತಲೆಯನ್ನು ನೇವರಿಸಿದ.
ಆದ್ದರಿಂದ ಶ್ರೀ ಸುಧರ್ಮೇಂದ್ರ ಗುರುಗಳ ಸ್ತೋತ್ರ ಮಾಡ ಹೊರಟಿದ್ದೇನೆ.
ಮೋದಧ್ವಂ ಕವಿತಾಲತಾಮೃತರಸಂ
ಸಂಸೇವ್ಯ ಮೇ ಸೂರಯಃ ಪೂರ್ವೇಷಾಂ
ವಿದುಷಾಂ ಪ್ರಬಂಧ ರಚನಾ
ಕಿಂ ನಾಸ್ತಿ ಖೋಕತ್ರಯೇ ।
ನಿಸ್ಸಾರಾಶ್ರಯಣಾ ಪುರಾತನ
ಕೃತಿಃ ವರ್ಣನೀಯ೦ ಪರಂ
ಸೈಷಾ ಮೇ ಸರಸಾಶ್ರಿತಾ ಖಲು
ಯಯಾ ಭದ್ರಾ ಸುಧರ್ಮೇಂದ್ರಭೂಃ ।। 3 ।।
ಓ ವಿದ್ವಾಂಸರೇ! ಅದೇ ಹಳಬರ, ಅದೇ ಹಳೆಯದಾದ ಕೃತಿಯ ಚಿಂತನೆಯಲ್ಲಿ ಕಾಲ ಕಳೆಯುವಿರೇಕೆ?
ಭೂಮಿಯಲ್ಲಿ ಊರಿ ನಳನಳಿಸುತ್ತಾ ಬೆಳೆದ ಶ್ರೀ ಸುಧರ್ಮೇಂದ್ರರ ಕಾವ್ಯವೆಂಬ ಬಳ್ಳಿಯಲ್ಲಿನ ಅಮೃತವನ್ನು ಆಸ್ವಾದಿಸಿ!
ಕೈಲಾಸವಾಸೀ ಭೂಧರಾನ್ ಸೌರಗಿರೌ
ಹರ್ಮ್ಯಾಯತಿ ಪ್ರೇಯಸೀ ದರ್ಶಂ
ಪಶ್ಯತಿ ಚಂದ್ರಿಕಾಂ ನಿಜ
ಸಭಾಚಾರಂ ಚರತ್ಯಂಬರೇ ।
ದಿಕ್ಕಾಂತಾಸು ದುಕೂಲತಿ-
ಸ್ತನತಟೀಷ್ವಾಸಾಂ ಪಾಟೀರಾಯತೇ
ನರ್ನರ್ತಿ ತ್ರಿದಿವೇ ನಟೀವ
ನಿತರಾಂ ಕೀರ್ತಿಸ್ಸುಧರ್ಮೇಂದ್ರಭೂಃ ।। 4 ।।
ಶ್ರೀ ಸುಧರ್ಮೇಂದ್ರರ ಕೀರ್ತಿ ಬೆಟ್ಟಗಳನ್ನು ಹಣೆಗಣ್ಣನ ಮನೆಯಾಗಿಸುತ್ತವೆ. ಸಗ್ಗವನ್ನೂ ಕೇಳುಗರ ಮನೆಯಾಗುತ್ತದೆ. ಬೆಳದಿಂಗಳನ್ನು ನಖೆಯಾಗಿಸುತ್ತದೆ. ಆಕಾಶದಲ್ಲಿಯೂ ಸಭೆ ನಡೆವಂತೆ ಮಾಡುತ್ತದೆ. ದಿಸೆಗಳಿಗೆ ಬಟ್ಟೆಯಾಗುತ್ತದೆ. ಬೆಟ್ಟಗಳಂತೆ ಚಿರಕಾಲ ಬಾಳುತ್ತದೆ. ಸಗ್ಗದಲ್ಲಿನ ನಟಿಯಂತೆ ನರ್ತಿಸುತ್ತದೆ.
ಸುಧರ್ಮೇಂದ್ರಮುಪಾಶ್ರಿತ್ಯ
ಶೋಭತಾಂ ಕವಿತಾ ಮಮ ।
ಸದೃಢೋಪಘ್ನಸಂಪದ್ಧಾ
ಸುದೃಢಂ ಶೋಭತೇ ಲತಾ ।। 5 ।।
ಶ್ರೀ ಸುಧರ್ಮೇಂದ್ರರನ್ನಾಧರಿಸಿದ ನಾನಾ ಕವಿತೆ ಫಲವತ್ತಾದ ಭೂಮಿಯನ್ನಾಧರಿಸಿದ ನಳಿನಳಿಸುವ ಬಳ್ಳಿಯಂತೆ ಶೋಭಿಸಲಿ.
ಸತ್ಕವೇಃ ಕಾವ್ಯಮಾಶ್ರಿತ್ಯ
ನೇತಾ ಕಲ್ಪಂ ಸ ಜೀವತಿ ।
ಕಾವ್ಯಂ ಚಾಪಿ ಮಹಾನೇತೃ
ಸಂಸರ್ಗಾಚ್ಚಿರ ಜೀವಿತಮ್ ।। 6 ।।
ಕವಿತೆ ಗುಣವಂತವಾದಾಗ ಬಹಳ ಕಾಲ ಬಾಳುತ್ತದೆ. ಗುಣವಂತ ಕವಿತೆಯನ್ನು ಬಹಳ ಕಾಲ ಬಾಳುವಂತೆ ಮಾಡುತ್ತದೆ.
ಸತ್ಕಾವೇರ್ವಾಜ್ಮಯಾದರ್ಶ-
ಮವಲಂಬ್ಯ ಯಶೋsಮಲಮ್ ।
ನಾಯಕಸ್ಯ ಕವೇರ್ವಾಪಿ
ಚಿರಂ ಜೀವತಿ ನಿಶ್ಚಲಮ್ ।। 7 ।।
ಕಟ್ಟಿಗನ ಮಾತೆಂಬ ಕನ್ನಡಿಯನ್ನಾಧರಿಸಿ ಕವಿಯ ಮತ್ತು ನಾಯಕನ ಯಶಸ್ಸು ಬಹು ಕಾಲ ಬಾಳುತ್ತದೆ.
ಅತೋಹಂ ತ್ರೈಲೋಕ್ಯ ಪ್ರಕಟಿತ
ಸುಧರ್ಮೇಂದ್ರಯತಿನೋ ಮುಹುಃ
ಶ್ರಾವಂ ಶ್ರಾವಂ ಗುಣಮಣಿ-
ಮನರ್ಘ್ಯಂ ಚಿರತರಮ್ ।
ಯತೇ ಸ್ತೋತುಂ ಕೃಷ್ಣಃ
ಕವಿರಹವ ಮುಗ್ಧೋsಪಿ ಬಹುಧಾ
ಪ್ರಬಂಧಾನಾಂ ಕರ್ತಾ
ರಘುಪತಿಪದೈಕೋರು ಶರಣಃ ।। 8 ।।
ಆದುದರಿಂದ ಗುರುಗಳ ಗುಣಗಳನ್ನು ಹೇಳಲು ಆಸಕ್ತನಾದರೂ; ರಾಮನ ಪಾದಗಳಲ್ಲಿ ಅನನ್ಯ ಭರವಸೆ ಇಟ್ಟು ಬಹಳ ಗ್ರಂಥಗಳನ್ನು ರಚಿಸಿದ " ಕೃಷ್ಣ " ನೆಂಬ ಕವಿಯು ಲೋಕದಲ್ಲಿ ವ್ಯಾಪಿಸಿದ ಶ್ರೀ ಸುಧರ್ಮೇಂದ್ರರ ಗುಣಗಳನ್ನು ಕೇಳಿ ಕೇಳಿ ಸ್ತುತಿಸಲು ಬಯಸುತ್ತೇನೆ.
ಸಾರಸ್ಯಾದ್ವಾಕವೇರ್ನೇತು-
ರ್ಗೌರವಾದ್ವಾವಿಮತ್ಸರಾತ್ ।
ಸಾರಸ್ಯಾದ್ವಾದಯಾಲುತ್ವಾತ್
ಸ್ವೀಕುರ್ವಂತು ಕೃತಿ ಬುಧಾಃ ।। 9 ।।
ನಾಯಕನ ಗುಣಗಳಿಂದಲೋ; ಕಟ್ಟಿಗನ ರಸವತ್ತಾದ ಮಾತುಗಳಿಂದಲೋ; ಕವಿಯ ಮೇಲಿನ ಗೌರವದಿಂದಲೋ ವಿದ್ವಾಂಸರು ಈ ಕೃತಿಯನ್ನು ಸ್ವೀಕರಿಸಲಿ.
ಸುಧರ್ಮೇಂದ್ರಶ್ಚಂದ್ರೋ ನಿವಸತು
ಚಿರಾಯು ಕ್ಷಿತಿತಲೇ ಸಹಸ್ರಾಕ್ಷಸ್ಸಾಕ್ಷಾ-
ದವತರಿತ ಊರ್ವೀಸುರತಯಾ ।
ರಘೂತ್ತಂಸಸ್ಯಾರ್ಚಾಂ ಪುನರಪಿ
ವಿಧಾತುಂಕಿಮು ನಚೇತ್
ಸುಧರ್ಮೇಂದ್ರಾತ್ಯಾಖ್ಯಾಂ ನ ಭಜತಿ
ಕುತೋsನ್ಯೋ ಭುವಿ ಜನಃ ।। 10 ।।
ಶ್ರೀ ಸುಧರ್ಮೇಂದ್ರರೆಂಬ ಚಂದ್ರ ಈ ಭೂಮಿಯಲ್ಲಿ ಚಿರಕಾಲ ನೆಲೆಸಿರಲಿ. ಯಾರ ಶ್ರೀ ರಾಮ ಪೂಜಾ ವೈಭವವನ್ನು ನೋಡಲು ಇಂದ್ರನೇ ಸಾಕ್ಷಾತ್ತಾಗಿ ಇಳಿದು ಬರುತ್ತಾನೋ ಅಂಥಹಾ ಶ್ರೀ ಸುಧರ್ಮೇಂದ್ರರು ಈ ಭೂಮಿಯಲ್ಲಿ ತಮ್ಮ ಹೆಸರಿಗೆ ತಕ್ಕ ಗುಣಗಳನ್ನು ಪಡೆದಿದ್ದಾರೆ. ಅಂಥಹವರು ಅತ್ಯಂತ ಅಪರೂಪವಲ್ಲವೇ?
ಮಹಾ ಹಂಸೋಪನಿಷತ್ತಿನಲ್ಲಿ ಎಲ್ಲಾ ದೇವತೆಗಳೂ ಯತಿಯಲ್ಲಿ ಸನ್ನಿಹಿತರಾಗಿರುತ್ತಾರೆ ಎಂದು ಹೇಳಿದೆ. ಹಂಸ ಮತ್ತು ಪರಮಹಂಸರಲ್ಲಿ ವಿಶೇಷವಾಗಿ ಸನ್ನಿಹಿತರಾಗಿರುತ್ತಾರೆ. ಆದ್ದರಿಂದ ಯತಿಯನ್ನು ಪೂಜಿಸಿದರೆ, ಧ್ಯಾನಿಸಿದರೆ ಎಲ್ಲಾ ದೇವತೆಗಳನ್ನೂ ಪೂಜಿಸಿದಂತೆ ಮತ್ತು ಧ್ಯಾನಿಸಿದಂತೆ ಆಗುತ್ತದೆ.
ಗುರುಃ ಸುಧರ್ಮೇಂದ್ರ ಉದೇತುಕಾಮಂ
ಗುಣೈರ್ವಿನಿದ್ರೈರ್ಗಣನಾದರಿದ್ರೈಃ ।
ಮುದಂ ಜನಾನಾಂ ಜನಯನ್ನಜಸ್ರಂ
ಭೂಮೌ ದಧೌ ಯಃ ಖಲುವಾದಿ ಶಿಕ್ಷಾಮ್ ।। 11 ।।
ಶ್ರೀ ಸುಧರ್ಮೇಂದ್ರ ಗುರುಗಳು ಲೆಕ್ಕವಿಲ್ಲದಷ್ಟು ಪೂರ್ಣವಾಗಿರುವ ಗುಣಗಳಿಂದ ಜನಗಳಿಗೆ ನಿರಂತರವಾದ ಸಂತೋಷವನ್ನು ಕೊಡುತ್ತಾ ಭೂಮಿಯಲ್ಲಿರುವ ದುರ್ವಾದಿಗಳಿಗೆ ಶಿಕ್ಷೆಯನ್ನು ಕೊಟ್ಟರು.
ನಹಿ ಪ್ರಿಯ ಸ್ಫೂರತ್ಕೀರ್ತೇ
ಜೈತ್ರಯತ್ರೋನ್ಮುಖೋ ಭವ ।
ಇತಿ ವಾದಿವಧೂಃ ಪ್ರೋಚೇ
ಸುಧರ್ಮೇಂದ್ರ ವಿರಾಜತಿ ।। 12 ।।
ಒಳ್ಳೆಯ ಕೀರ್ತಿವುಳ್ಳ ಓ ವಾದಿಯೇ! ಇದೀಗ ವಾದದ ದಿಗ್ವಿಜಯಕ್ಕೆ ಹೋಗಬೇಡ. ಏಕೆಂದರೆ " ಶ್ರೀ ಸುಧರ್ಮೇಂದ್ರ " ರೆಂಬ ಶ್ರೇಷ್ಠ ವಿದ್ವಾಂಸರು ಇನ್ನೂ ಬದುಕಿದ್ದಾರೆ ಎಂಬುದಾಗಿ ಪಂಡಿತನ ಹೆಂಡತಿಯು ಹೇಳಿದಳು.
ವಿವರಣೆ :
ಈ ಶ್ಲೋಕದಲ್ಲಿ ಶ್ರೀ ಸುಧರ್ಮೇಂದ್ರರು ದಿಗ್ಧಂತಿ ಪಂಡಿತರೆಂದು ಎಲ್ಲೆಡೆ ವಿಖ್ಯಾತರಾಗಿದ್ದಾರೆ.
ಅವರ ವಿದ್ಯಾ ವೈಭವ ಪ್ರತಿಯೊಬ್ಬರನ್ನೂ ತಲುಪಿದೆ. ಆದ್ದರಿಂದಲೇ ಪಂಡಿತನ ಹೆಂಡತಿಯು ಗಂಡನಿಗೆ ಅಪಕೀರ್ತಿ ಬರಬಾರದೆಂದು ಹೀಗೆ ಹೇಳಿದ್ದಾಳೆ.
ವದಾಮ್ಯೇತಾದ್ ಧೀಮಾನ್
ಕಿಮಿತಿ ಕೃಪಣಾನರ್ಥಯಸಿ ತಾನ್
ವ್ರಜ ತ್ವಂ ಜಂಘಾಲುರ್ಗುರುವರ
ಸುಧರ್ಮೇಂದ್ರ ಚರಣಮ್ ।
ಪ್ರದಾನಾದ್ಯಸ್ಯಾಬ್ಧಿಃ ಶಮಮಯತಿ
ಮಜ್ಜೀವನಮಿತಿ ಪುರೋಧಾಯೇವಾಭ್ರಂ
ಜಿಗಮಿಷುಬುಧಾನಾಂ ಪ್ರಸರತಿ ।। 13 ।।
ಬುದ್ಧಿವಂತನೇ! ಏಕೆ ಉಳಿದವರನ್ನು ಬೇಡುವೆ. ಸಾಗು ಶ್ರೀ ಸುಧರ್ಮೇಂದ್ರರಲ್ಲಿಗೆ. ಸಮುದ್ರ ಮೋಡಗಳನ್ನೂ, ಮೋಡಗಳನ್ನು ಮುಂದಿಟ್ಟುಕೊಂಡು ಮಳೆಯನ್ನು ಕೊಡುತ್ತಿದ್ದರೂ ಶ್ರೀ ಸುಧರ್ಮೇಂದ್ರರ ಕೊಡುವಿಕೆಯಿಂದ ಸಾಮ್ಯವನ್ನು ಹೊಂದಲಾರೆನೆಂದು ಶಾಂತವಾಗುತ್ತದೆಯೋ ಅಂಥಹಾ ಕಲ್ಪವೃಕ್ಷದಂತಿರುವ ಶ್ರೀ ಸುಧರ್ಮೇಂದ್ರತೀರ್ಥರನ್ನು ಹೊಂದು ಎಂಬುದಾಗಿ.
ಚಾತುರ್ಯಂ ಕಿಮು ವರ್ಣತೇ
ಗುರುವರ ಶ್ರೀಮತ್ಸುಧರ್ಮೇಂದ್ರಗಂ
ದ್ರವ್ಯೋತ್ಸರ್ಜನಮಾರ್ಜನಂ
ಯದಕರೋತ್ ನಿರ್ಬಾಧಭಾಗ್ಯೋದಯಃ ।
ಯತ್ಪ್ರತ್ಯರ್ಥಿ ಜನೇಷು ಜನ್ಮ
ಸಹಜಂ ವೀಕ್ಷೈವ ದೈನ್ಯಂ
ಸುಹೃತ್ ದಾರಿದ್ಯ್ರಂ ಸಹತೇ ಹಿ
ಕೇವಲಮುಮೂನ್ಮತ್ವಾಶರಣ್ಯಾನೀತಿ ।। 14 ।।
ಶ್ರೀ ಸುಧರ್ಮೇಂದ್ರತೀರ್ಥರಲ್ಲಿರುವ ಚಾತುರ್ಯವನ್ನು ಏನೆಂದು ಹೇಳಲಿ! ಅವರ ಭಾಗ್ಯಕ್ಕೆ ಎಣೆಯಿಲ್ಲ. ಅವರನ್ನು ಬೇಡಿಕೊಂಡ ವಿದ್ವಜ್ಜನರಿಗೂ ಕೊರತೆ ಇಲ್ಲ. ದಾರಿದ್ರವಾದರೋ ತನಗೆ ಆಶ್ರಯದಾತರಿಲ್ಲದೇ ಶ್ರೀ ಸುಧರ್ಮೇಂದ್ರತೀರ್ಥರ ಪ್ರತಿವಾದಿಗಲನ್ನೇ ಆಶ್ರಯಿಸಿತು.
ಸಮಸ್ತ ದೇವ ಸಾನ್ನಿಧ್ಯ
ಸಿದ್ಧಿಭಜೋ ಜಗದ್ಗುರೋಃ ।
ಪಾವಿತ್ರ್ಯಂ ವ್ರಜತಾದ್ ವಾಣೀ
ಸುಧರ್ಮೇಂದ್ರಸ್ಯ ಕೀರ್ತನಾತ್ ।। 15 ।।
ಎಲ್ಲಾ ದೇವತೆಗಳ ಸಾನ್ನಿಧ್ಯದಿಂದ ಸಿದ್ಧಿಯನ್ನು ಹೊಂದಿದ ಶ್ರೀ ಸುಧರ್ಮೇಂದ್ರತೀರ್ಥರ ಕೀರ್ತನೆಯಿಂದ ನನ್ನ ಮಾತು ಪವಿತ್ರವಾಗಲಿ.
ಯಥಾ ತುಷ್ಠ೦ತಿ ವಿಬುಧಾಃ
ಸುಧರ್ಮೇಂದ್ರಮಹೋದಯಾತ್ ।
ತಥಾ ಕೃಷ್ಣ ಕವೀಶಸ್ಯ
ಸುಧರ್ಮೇಂದ್ರಮಹೋದಯಾತ್ ।। 16 ।।
ದೇವತೆಗಳು ಧರ್ಮದ ಉಗಮವಾದರೆ ಸಂತೋಷ ಪಡುವಂತೆ ಈ " ಶ್ರೀ ಸುಧರ್ಮೇಂದ್ರ ಮಹೋದಯ " ವೆಂಬ ಕೃಷ್ಣಾವಧೂತರ ಕಾವ್ಯದಿಂದ ಸಂತೋಷ ಪಡಲಿ.
****
No comments:
Post a Comment