Saturday, 1 May 2021

ಶ್ರೀಜನಾರ್ದನವಿಠಲ ಶೃಂಗಾರ ಪರಿಪೂರ್ಣ ankita gurugopala vittala janardhana vittala dasa stutih

ಶ್ರೀ ಗುರುಗೋಪಾಲದಾಸರು ಶ್ರೀ ತಿರುಮಲದಾಸರಿಗೆ " ಶ್ರೀ ಜನಾರ್ದನ ವಿಠಲ " ಎಂದು ಯಾಕಿಂತದೊಂದಿಗೆ ದಾಸ ದೀಕ್ಷೆ ಕೊಟ್ಟಿದ್ದಾರೆ. ಆ ಅಂಕಿತ ಪದ ಹೀಗಿದೆ...

ರಾಗ : ಕಾಂಬೋಧಿ      ತಾಳ : ಝ೦ಪೆ

ಶ್ರೀ ಜನಾರ್ದನವಿಠಲ ಶೃಂಗಾರ ಪರಿಪೂರ್ಣ ।

ಅಜಭವಾಮರೇಂದ್ರ ಸೇವ್ಯಾ ।

ನೈಜ ಭಾವದಿ ನಮಿಸಿ ಬೇಡಿದವನಿಗೆ ವರವ ।

ನಿಜವಾಗಿ ಪಾಲಿಸುವೆನೆಂದು ದಯದಲಿ ಬಂದ್ಯಾ ।। ಪಲ್ಲವಿ ।।

ವೇಣುಗೋಪಾಲದಾಸರು ಕರುಣಾವನೆ ಮಾಡಿ ।

ಪಾಣಿ ಪಿಡಿದದ್ದು ನೋಡಿ ।

ಕ್ಷೋಣಿಯೊಳುಳ್ಳಂಥ ತೀರ್ಥ ಯಾತ್ರಾದಿಗಳ ।

ಸ್ನಾನಾದಿ ಫಲವ ನೀಡಿ ।

ವಾಣಿ ಅರಸಾನಿಂದ ತೃಣ ಜೀವ ಪರಿಯಂತ ।

ಮೇಣು ತಾರತಮ್ಯ ನೋಡಿ ।

ಅನಾಜ್ಞದವನೆಂದು ಅತಿ ಮಮತೆಯಿಂದಲಿ ।

ನೀನೆ ವ್ಯಕ್ತವಾಗಿ ನಿಂತು ಉದ್ಧರಿಪುದಕೆ ।। ಚರಣ ।।

ಮಾನ ಮಮತೆಯೆಂಬ ಹೀನ ಅಹಂಕಾರವನು ।

ಹಾನಿ ಮಾಡುವೆ ನೆನುತಲಿ ।

ಜ್ಞಾನ ಭಕುತಿಯ ಕೊಟ್ಟು ಧ್ಯಾನ ಮಾರ್ಗವ ತೋರಿ ।

ಪ್ರಾಣನಾ ಪಾದದಲಿ ।

ಆನಂದ ಉಂಬದಕೆ ಅತಿ ವೇಗ ಪೊಂದಿಸಿ ।

ಶೀಲ ಸ್ವಭಾವದಲಿ ।

ಭಾನು ಕೋಟಿ ತೇಜ ಭಕುತ ಜನರಾಧಾರಿ ।

ಧೇನುವತ್ಸಲನ ಪೊರೆವ ಪರಿಯಂತೆ ದಯದಲಿ ।। ಚರಣ ।।

ಮನ್ಮಥ ನಾಮ ಸಂವತ್ಸರಾ ಮಾಘ ಶುದ್ಧ ಬಿದಿಗಿ ।

ಮಂಗಳವಾರದಲ್ಲಿ ।

ಮನ್ಮನೋಭೀಷ್ಟೆಯನು ಕೊಡಲು ಗುರುಗೋಪಾಲ ।

ದಾಸರ ಮುಖದಲಿ ।

ಸನ್ಮಾನದಲ್ಲಿ ಸಂಗೀತ ನಾಮ ಸ್ಮರಣೆ ।

ಎನ್ನು ಪೇಳುಪೇ ನೆನುತಲಿ ।

ಚಿನ್ಮಯನೇ ಪುನ್ನಾಡಿಯೊಳಗೆ ಪೊಳವೇನೆಂದು ।

ಘನ್ನ ಕರುಣಾದಿ ಬಂದ್ಯಾ ಶ್ರೀ ಜನಾರ್ದನವಿಠಲ ।। ಚರಣ ।।

****

by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ

ಜನಾರ್ದನವಿಠಲ ಎಂದು ಅಂಕಿಂತದೊಂದಿಗೆ ಶ್ರೀ ಗುರುಗೋಪಾಲದಾಸರು ಶ್ರೀ ತಿರುಮಲದಾಸರಿಗೆ ದಾಸ ದೀಕ್ಷೆ  ನೀಡಿದರು. ಇವರ ಪ್ರೀತಿಯ ಶಿಷ್ಯರೇ ಶ್ರೀ ಅಭಿನವ ಜನಾರ್ದನ ವಿಠಲರು.

ಶ್ರೀ ಅಭಿನವ ಜನಾರ್ದನ ವಿಠಲರ ಕಾಲ : ಕ್ರಿ ಶ 1742 - 1822

ಶ್ರೀ ಅಭಿನವ ಜನಾರ್ದನ ವಿಠಲರು ಶ್ರೀ ಗೋಪಾಲದಾಸರ ತಮ್ಮಂದಿರೂ, ಅಪರೋಕ್ಷ ಜ್ಞಾನಿಗಳೂ ಆದ ಶ್ರೀ ಗುರುಗೋಪಾಲದಾಸರ ಶಿಷ್ಯ ಪರಂಪರೆಗೆ ಸೇರಿದವರು.

****


No comments:

Post a Comment