Sunday, 23 May 2021

ಎದ್ದು ಬಾರೊ ಯೆನ್ನ ಮುದ್ದು ಕಂದಯ್ಯ ankita srinivasa vittala

 ರಾಗ - : ತಾಳ - 


ಎದ್ದು ಬಾರೊ ಯೆನ್ನ ಮುದ್ದು ಕಂದಯ್ಯ ll ಪ ll


ಬಾ ಮುದ್ದು ಕಂದ ಸುಜನಾನಂದ l

ಸಿಂಧುಶಯನ ಗೋವಿಂದ ll 1 ll


ಕಡಲಶಯನ ಮಿಂದು ಮಡಿಯನುಟ್ಟಿಹೆನು l

ಕಡದ ಬೆಣ್ಣೆಯನ್ನೆಲ್ಲಾ ಕೊಡುವೆನು ll 2 ll


ಚಿನ್ನದ ಬಟ್ಟಲೊಳು ಬೆಣ್ಣೆ ಸಕ್ಕರೆ ಪಾಲು l

ಅಣ್ಣ ನಿನಗೆ ಉಣ್ಣಿಸುವೆನು ll 3 ll


ರಂಗಯ್ಯ ನಿನ್ನ ದಿವ್ಯಾಂಗಕ್ಕೆ ಹೂವ್ವಿನ l

ಅಂಗಿ ತೊಡಿಸಿ ಶೃಂಗರಿಸುವೆನು ll 4 ll


ಕೃಷ್ಣಯ್ಯ ನಿನ್ನಯ ಪುಟ್ಟಪಾದಗಳಿಂದ l

ತಟ್ಟಡಿ ಇಡುವದು ನೋಡೇನೈ ll 5 ll


ಸುಮ್ಮನೆ ಬಾರೆಂದು ಕರೆದರೆ ಬಾರದಿರೆ l

ಗುಮ್ಮನ ಕರೆತಂದು ತೋರಿಸುವೆ ll 6 ll


ಯೇನೆಂದು ವರ್ಣಿಸಲೊ ಶ್ರೀನಿವಾಸವಿಟ್ಠಲನೆ l

ನೀನೆ ಕರುಣಿಸಿ ಬೇಗದಿ ಬಾರೊ ll 7 ll

***


No comments:

Post a Comment