Saturday 1 May 2021

ವೃಂದಾವನದಿ ವಿರಾಜಿಪ ಯತಿವರನಾರೇ ಪೇಳಮ್ಮಯ್ಯ ankita sridhara vittala vyasatatwajna teertha stutih

 ಶ್ರೀ ವ್ಯಾಸತತ್ತ್ವಜ್ಞರು -     " ಆಶ್ರಮ ಸ್ವೀಕಾರ "

ರಾಗ : ದರ್ಬಾರ್  ತಾಳ : ತ್ರಿಪುಟ 


ವೃಂದಾವನದಿ ವಿರಾಜಿಪ 

ಯತಿವರನಾರೇ ಪೇಳಮ್ಮಯ್ಯ ।। ಪಲ್ಲವಿ ।।


ವೊಂದಿದೆ ಸುಜನರ ವೃಂದ 

ಪೊರೆದ । ಭುವ ।

ನೇಂದ್ರರ ಕರಕಂಜಜ 

ಯತಿವರರೆ ।। ಅ ಪ ।।


ಉದಿತ ಭಾಸ್ಕರನ ತೆರದಿ 

ಸುಶೋಭಿತನಾರೆ ಪೇಳಮ್ಮಯ್ಯ ।

ಪದುಮಾಕ್ಷ ತುಳಸೀ ದಂಡ 

ದ್ವಿಮುಖಿ ಇಹನಾರೆ ಪೇಳಮ್ಮಯ್ಯ ।

ಒದಗಿ ಬರುವ 

ದುರ್ಮದ ತಿಮಿರ ಕಳೆವ ।

ಸುದುದಿತ ಜಲಜಾಪ್ತನು 

ಕಾಣಮ್ಮ ।। ಚರಣ ।।


ಮದ ವಿರಹಿತ ಶಮದಮೆಗಳಿಂ-

ದೊಪ್ಪುವನಾರೇ ಪೇಳಮ್ಮಯ್ಯ ।

ಮೃದುಮಧುರ ವಚನ ಸುಧೆಯ 

ಗರೆವ ಮುನಿದಾರೆ ಪೇಳಮ್ಮಯ್ಯ ।

ವಿದುಷರ ಮನ-

ಕುಮುದಗಳರಳಿಸುತಿಹ ।

ವಿಧು ವರ ವ್ಯಾಸತತ್ತ್ವಜ್ಞ-

ತೀರ್ಥರೇ ।। ಚರಣ ।।


ಮೋದ ಬೀರುವ ಕಳೆವರ-

ದೊಪ್ಪುವನಾರೆ ಪೇಳಮ್ಮಯ್ಯ ।

ಬೋಧಪೂರ್ಣರ ಸುಶಾಸ್ತ್ರ 

ಪೇಳ್ವ ಮುನಿಯಾರೇ ಪೇಳಮ್ಮಯ್ಯ ।

ಶ್ರೀಧರ ವಿಠಲನ ದಾಸೋತ್ತಮರೇ । 

ಕು । ವಾದಿ ಪರ್ವತ 

ಭೇದನಪವೀಧರ ।। ಚರಣ ।।     

***

ಸಾಕ್ಷಾತ್ ಹಂಸನಾಮಕ ಪರಮಾತ್ಮನ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾಡಾ ಶ್ರೀ ರಾಘವೇಂದ್ರಸ್ವಾಮಿಗಳವರ ವೇದಾಂತ ಸಾಮ್ರಾಜ್ಯಾಧಿಪತಿಗಳಾದ ಶ್ರೀ ಭುವನೇಂದ್ರತೀರ್ಥರು ತುರ್ಯಾಶ್ರಮ ನೀಡಿ " ವ್ಯಾಸತತ್ತ್ವಜ್ಞತೀರ್ಥ " ರೆಂದು ನಾಮಕರಣ ಮಾಡಿ ದ್ವೈತ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿದರು

*****

No comments:

Post a Comment