Saturday, 1 May 2021

ಚೆಲುವರಾಯ ಆಂಜನೇಯನ ನೋಡುವ ಬಾರೆ ankita kamalesha vittala

 ಚೆಲುವರಾಯ ಆಂಜನೇಯನ ನೋಡುವ ಬಾರೆ ।। ಪಲ್ಲವಿ ।।


ಮಂಜುಳ ಮುರಳೀಧರನ ಶ್ರೀಪದ ।

ಕಂಜಾಶ್ರಯದೊಳು ರಂಜಿಸುತ ನೆಲೆಸಿಹ ।। ಅ ಪ ।।


ಮಣಿಗಣರಾಜಿತ

ಕಾಂಚನದ ಕಿರೀಟ ।

ಫಣಿಯಲೆಸೆವ ತಿಲಕದ ಥಾಟಾ ।

ಕನಕಕುಂಡಲ ಕಪೋಲ ಕಾಂತಿಯು ।

ಕರುಣಾ ಕಟಾಕ್ಷದಾನ ಪ್ರಸನ್ನ

ಮೂರ್ತಿಯು ।। ಚರಣ ।।


ಕಂಧರದೊಳೆಸೆವ ನವ ಜಾಂಬೂ ।

ನರ ಮಣಿಹಾರ ಗುಣ । ಗಂ ।

ಭೀರ ಕರಾಗ್ರಗಳಲಿ ತನ್ನನು ।

ನಂಬಿದವರ ಮನದ

ಹಂಬಲವನು ಸಲಿಸುವ ।। ಚರಣ ।।


ವೀರ ಮುಡಿಯುಲುಡುದಾರ

ಕನಕ । ಮಂ ।

ಮಂಜೀರಾ ಪದಗಳತಿ ಶೋಭೆಯಲಿ ।

ಸಾರಿದವರಿಗೆ ಶ್ರೀ ಕಮಲೇಶವಿಠ್ಠಲನು ।

ದಾರ ಕರುಣಾರಸ ಸೂರೆಗರೆವಾ ।। ಚರಣ ।।

****


No comments:

Post a Comment