susheelendra teertha rayara mutt yati 1926 stutih
ರಾಗ : ಯದುಕುಲಕಾಂಬೋಧಿ ತಾಳ : ಆದಿ
ಪೊಂದಿ ಭಜಿಸೋ ಸುಶೀಲೇಂದ್ರರ
ಪದ ನಿರುತ ।
ಮಂದ ಮಾನವ ತ್ವರಿತ ।। ಪಲ್ಲವಿ ।।
ವೃಂದಾರಕ ಸದ್ವಂಶಜರಿವರೆನುತ ।
ಮನದೊಳು ಭಾವಿಸುತ ।। ಆ. ಪ ।।
ಗುರು ಸುಕೃತೀಂದ್ರ
ಕರಕಮಲದಿ ತಾನು ।
ತುರಿಯಾಶ್ರಮವನ್ನು ।
ಧರಿಸುತ ಹರುಷದಿ
ರಘುಕುಲಜನ ।।
ಚರಣ ಆರಾಧಿಸಿ ಘನ್ನ ।
ಮರುತಾಗಮ
ಮರ್ಮಜ್ಞನು ತಾನಾಗಿ ।
ಮೆರೆದನು ಚೆನ್ನಾಗಿ ।। ಚರಣ ।।
ವರಹಜ ನದಿ ವಾಸರ
ಒಲಿಮೆಯಲಿ ।
ಧರೆಯಲಿ ಚಲಿಸುತಲಿ ।
ಪರವಾದಿಯ ಮತ
ಜರಿಯುತ ।। ವೈಷ್ಣ ।।
ವರ ಉದ್ಧರಿಸಿದ ಧೀರ ।
ನರನೆಂದಿವರನು
ನಿಂದಿಸುವನೇ
ದೈತ್ಯ ನಾ ಪೇಳುವೆ
ಸತ್ಯ ।। ಚರಣ ।।
ಶ್ರೀ ಮನೋವಲ್ಲಭ
ಶ್ಯಾಮಸುಂದರನ ।
ನಾಮವ ಪ್ರತಿದಿನ ।
ನೇಮದಿ ಪಠಿಸುತ್ತಾ ।।
ಪ್ರೇಮದಿ ಶಿಷ್ಯರನ್ನು
ಸಲುಹಿದ ಸಂಪನ್ನ ।
ಧೀಮಜ್ಜನ ಸಂಸೇವಿತ
ಸುವ್ರತೀಂದ್ರ । ಹೃ ।
ತ್ಕುಮುದಕೆ ಚಂದ್ರ ।। ಚರಣ ।।
****
No comments:
Post a Comment